ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಹಂ ಹಂ ಹಂ ಹಂಸಯೋಗಿಪ್ರವರಸುಖಕರಂ ಹಸ್ತಲಕ್ಷ್ಮೀಸಮೇತಂ ಹಿಂ ಹಿಂ ಹಿಂ ಹೀನಮಾನಂ ಹಿತಸುಖವರದಂ ಹಿಂಸಯಾಪೇತಕೀಲಂ ಹುಂ ಹುಂ ಹುಂ ಹುಂಕೃತಿಧ್ವಂಸಿತ ರಜನಿಚರ- ಕ್ರೌರ್ಯಕೌಟಿಲ್ಯಮೂರ್ತಿಂ ಹೈಂ ಹೈಂ ಹೈಂ ಹೈಮಕುಂಭಾಯತಕರಸಹಜಂ ಭಾವಯೇ ಬಾಹುಲೇಯಂ.
--------------
ನಾರಾಯಣ ಗುರು
ಹಂಗುಚಿಮ್ಮುವ ನಾಡಿ, ದಿನಮಣಿ ಮತಿಗಳೊಡನೆ ಸಾಗಿ ಆರಿಹೋಗಲು ಹೊನ್ನಗುಡಿಯಲಿ ತರಳ- ಮಣಿದೀಪ ಹಚ್ಚಿಟ್ಟು ಚೆಲುವನ್ನೂ ಮಂಕನ್ನೂ ನಟಿಸಿ ನರ್ತನವಾಡಲೆಂದು ಮೆರೆಮೆರೆದು ಒಟ್ಟಾರೆ ಸುಟ್ಟು ನಿರ್ದ್ಧೂಳಿಯಾಗಿಸಲು ಬಾರೊ ಕಡಿದಾಡುತ್ತಿರುವ ಈ ಬೇಡರ ಸಂಕುಲವನ್ನು.
--------------
ನಾರಾಯಣ ಗುರು
ಹಕ್ಕಿಗಳು ಹತ್ತನ್ನು ಕಡಿದು ಸೇರಿನಿಲ್ವ ಕುರುಹುಗಳು ನೀಗಿ ಮನವಡಗಿಸಿಯಾಡುವ ಕಿರುಮಣಿ ಹೋಗಿ ಸೆಣೆಸಿ ಕಾಳನಾಗವ ನೆತ್ತಿಯೊಳಾಗಿಸಿ ಬಚ್ಚಿಡುತ್ತಿಹುದು ನಿತ್ಯ
--------------
ನಾರಾಯಣ ಗುರು
ಹಗೆಯಾದ ಇದನ್ನು ತುಪ್ಪ ಕರಗುವಪರಿ ನೀರಾಗಿಸಿ ಬಿಡುವ ನರಹರಿಯೇ ಹಗೆಗೊಳುವುದು ಇನ್ನಿಲ್ಲಿ ಹೊಗೆಯಾಗಿ ಬಾನಲಿ ಸುಳಿಸಿಬಿಡುವ ಉರಿಯೇ.
--------------
ನಾರಾಯಣ ಗುರು
ಹಣ್ಣಾದ ಒಂದರೊಳಿದ್ದು ಈ- ಕನಕಾಡಂಬರವಿಲ್ಲಿ ಕಾಣುವುದು ಚಂದ್ರನ ತೊಡುವದರಮುಂದೆ ಬೆಳದಿಂಗಳು ಕಾಣುವಂತ ಬಯಲು.
--------------
ನಾರಾಯಣ ಗುರು
ಹತ್ತುಸಾವಿರವಾದಿತ್ಯರೊಂದಾಗಿ ಬರುವಂತೆ ಬರುವುದು ವಿವೇಕವೃತ್ತಿ, ಅರಿವನ್ನು ಮಾಸುವ ಅನಿತ್ಯಮಾಯೆಯೆಂಬ ಈ ಇರುಳ ಹರಿದೇಳ್ವ ಆದಿಸೂರ್ಯನಹುದು.
--------------
ನಾರಾಯಣ ಗುರು
ಹಮ್ಮೊಂದು ದೋಷವನ್ಯಾರಿಗೂ ಮಾಡಲು ಒಳಮಲರಿನಲ್ಲರಿಯದಂತ ಹಾಗೆ ಸಕಲವಳಿಸಿ ಕೊಡಬೇಕೆಂದಿಗೂ ನಾ ಭಗವದನುಗ್ರಹಪಾತ್ರವಾಗಲೆಂದು.
--------------
ನಾರಾಯಣ ಗುರು
ಹರನು ಅಂದು ಬರೆದು ಕೀರ್ತಿವೆತ್ತ  ವೇದವೊಂದೋದಿದ ಮಾಮುನೀಂದ್ರನೋ? ಸಾಯದೆ ಒಡಲಿಂದ ಹೋದ ಆ ಪರಮೇಶನ ಪರಾರ್ಥ್ಯ ಭಕ್ತನೋ?
--------------
ನಾರಾಯಣ ಗುರು
ಹರಿಭಗವಾನರವಿಂದಸೂನುವೂ ನಿನ್ನ ಸಿರಿಯಾಟವಿದನರಿಯಲಿಲ್ಲವೊಂದೂ, ಹರ ಹರ ಮತ್ತೆಯಿದಾರರಿವರುಂಟು ಎದೆಯೊಳಗಿದ್ದು ಕುಣಿವ ಮೂರುತಿಯನ್ನು?
--------------
ನಾರಾಯಣ ಗುರು
ಹರಿಯಲು ಇರುಳಲ್ಲಿರುವ ಸೋದರ ಇವನೆನೆ ನೋವುನೀಗುವುದು ಸುತ್ತಲೂ ನೇಸರ ತನ್ನ ಸುತ್ತಲೂ ಮತ್ತೊಂದಿರುಳು ಮೆರೆಯುವುದೇ?
--------------
ನಾರಾಯಣ ಗುರು
ಹರಿವ ಅಂಬರಗಂಗೆ ತನ್ನ ನೀರೊಳು ಸುಳಿಯಂತೆ ಉದಿಸಿಯೇಳುವ ನಾಭಿ- ಗುಂಡಿಯೊಳೇಳುವ ಕಳಿಂದಕನ್ಯೆ ಮೇಲಕ್ಕೆ ಹರಿವಂತ ಹಾಗೆ ರೋಮರಾಜಿ. 
--------------
ನಾರಾಯಣ ಗುರು
ಹಲಮತಸಾರವೂ ಏಕವೆಂದು ಕಾಣದೆ ಜಗದೊಳೊಂದಾನೆಯಲ್ಲಿ ಅಂಧರಂತೆ  ಹಲವಿಧ ತರ್ಕವನ್ನೊದರುತ್ತ ಪಾಮರರು ಅಲೆಯುವುದ ಕಂಡಲೆಯದೆ ಅಡಗಬೇಕು.
--------------
ನಾರಾಯಣ ಗುರು
ಹಲವು ತೆರದಿ ಮಾಡಲುಬರುವ ಚಿನ್ನದಲ್ಲಿರುವಂತೆ  ಚೆಲುವುಗಣ್ಣಿಂದ ನಿರ್ಮಿತವಿದೆಲ್ಲವೂ ಅದ್ಭುತ ತೊಡಬೇಕೆನ್ನನು ತಿರುವಡಿಯೊಳು ಹೂವಾಗಿ ನೆರೆನೆರೆಯಾಗಿ ತೆರೆಯಿಲ್ಲದೇಳುವ ಕಡಲೇ
--------------
ನಾರಾಯಣ ಗುರು
ಹಲವು ವಿಧವಾಗಿ ಅರಿಯುವುದನ್ಯವೊಂದಾಗಿ- ಮೆರೆಯುವುದೇ ಸಮವೆಂದು ಮೇಲೆ ಹೇಳ್ವ ನೆಲೆಯನರಿತು ನೆಟ್ಟನೆ ಸಾಮ್ಯವೇಳುವ ಕಲೆಯದರೊಳಮರುತ್ತ ಬೆರೆಯಬೇಕು.
--------------
ನಾರಾಯಣ ಗುರು
ಹಳೆಯ ಕರ್ಮಗಳನ್ನೆಲ್ಲವಳಿಸುವ ತೊಂಡೆ- ಹಣ್ಣನ್ನು ಕಾಳಗದಿ ಮೆಟ್ಟುವ ತುಟಿಗಳೂ ತೊಳೆದೆತ್ತಿದ ಮುತ್ತಿನಂತ ಹಲ್ಲೂ ಬೆಳತಿಂಗಳಂತ ನಿನ್ನ ಕೆನ್ನೆದಡಗಳೂ.
--------------
ನಾರಾಯಣ ಗುರು