ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಮಂಗಳವನಿಕ್ಕುವನೆನ್ನಮೇಲೆ ತಮ್ಮಲ್ಲೊಗ್ಗೂಡುವ ಸರ್ವಜ್ಞ ಸಂಗಮವೊಂದರಲ್ಲೂ ಇರದೆ  ಅಂಗಜರಿಪುವಲ್ಲಿ ಮೂಡಿ ಕಣ್ ಕಾಣುವುದು.
--------------
ನಾರಾಯಣ ಗುರು
ಮಂಜೀರಮಂಜುಮಣಿ ಶಿಂಜಿತ ಪಾದಪದ್ಮ  ಕಂಜಾಯತಾಕ್ಷ, ಕರುಣಾಕರ ಕಂಜನಾಭ  ಸಂಜೀವನೌಷಧ, ಸುಧಾಮಯ, ಸಾಧುರಮ್ಯ, ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
--------------
ನಾರಾಯಣ ಗುರು
ಮಂಜುಬೆಟ್ಟದ ಪ್ರಿಯತನಯೆಮಗನಾದ ನಿನ್ನ  ಚರಣಕಮಲದಲಿ ಬಿದ್ದು ನಮಿಸುವ  ನಾನೂ ತಾವೂ ಪುಟ್ಟಮಕ್ಕಳೆಂಬ ಈ ಅರಿವು  ಏನಯ್ಯ ಈಶತನಯಾ ಏನುಜಾತಕವಯ್ಯೋ ತಿರುಗಿಹೋದೊಡೆ ಇಲ್ಲಿ  ಕೃಪೆದೋರು ಅಡಿಯನಲ್ಲಿ, ಮತ್ತೆ ನಾನು ತಾವೂ ಕೂಸುಗಳೆಂಬ  ಪದವು ಸಫಲವಾಗುವುದು 
--------------
ನಾರಾಯಣ ಗುರು
ಮಣಿಛತ್ರ ಬಿಡಿಸಿ ಹೂಚೆಲ್ಲಿ ಗಂಧವೆಲ್ಲ ಘೃಣಿಗೆ ಅಪಚಿತಿಕ್ರಿಯೆಗೆಯ್ದು ಘೃಣಿಗೊಳಿಸಿ ಗುಣಿಸಿಯಿವೆಲ್ಲವ  ಗುಣಿಯೂ ಹೋಗಿ ಗುಣದ ಕಡಲ ದಾಟಿ ಬರುವಂತಾಗಿಸು ತಾಯೇ.
--------------
ನಾರಾಯಣ ಗುರು
ಮಣ್ಣಂದಲೆಯಲ್ಲಿ ಮೆರೆವೆ ಈಶ್ವರಿ ತಾನೆ ಧರೆಯಲ್ಲಿ ಅನ್ವರ್ಥಸಂಜ್ಞೆಯನು ಹೊತ್ತು ಬೆಳಗುತ್ತಿಹಳು ಚಿತ್ರ! ಧರೆಯಲಿ ಸಮಸ್ತವೂ ಅಡಗುವುದದರ ಮೇಲೆ ನಿಂತು ಎಣಿಸಿಮೆರೆವಂತ ದೇವತೆಯಲ್ಲವೇ ನೀ. 
--------------
ನಾರಾಯಣ ಗುರು
ಮಣ್ಣೂ ಜಲ ಕೆಂಡವು ಅಂಬರದಜೊತೆ ಗಾಳಿಯೂ ಎಣಿಸಿ ಹಿಡಿದು ಕೋಣೆಯಲಿಟ್ಟು ಉರಿಹತ್ತಿಸಿ ದಂಡಪಡಿಸುವ ದೇವತೆಯೊಂದರಿಂದ ನನ್ನ ಪಿಂಡಕ್ಕೆ ಅಂದಮೃತವಿಕ್ಕಿ ಬೆಳಸಿದ ಶಂಭೋ.
--------------
ನಾರಾಯಣ ಗುರು
ಮತಿಕಲೆ ತೊಟ್ಟ ಹೊಂಗೊಡ ಮತಿಗುಳ್ಳ ಅತಿಮೃದುಕೋಮಲ ನಾಟಕವಾಡಲು ಆಸೆಯೇರುವುದರಿಂದ ಕಂಡದೆಲ್ಲವೂ ಉದಿತವಿದೆಲ್ಲವೂ ಒಪ್ಪುವವು ನಿನಗೆ.
--------------
ನಾರಾಯಣ ಗುರು
ಮತಿಯಿಂದ ಗಂಧಮೊದಲಾದೈದೂ ಎದ್ದು ನಿನ್ನರಿವಿನ ತನಕವಿರುವುದು ಚಿನ್ಮಯವು ಕ್ಷಿತಿಯಿಂದ ಇರುಳವರೆಗೆ ಅಯ್ಯೋ ಜಡ- ವಾದಿದು ಎರಡರಲ್ಲೂ ಅಮರುವುದಖಿಲ.
--------------
ನಾರಾಯಣ ಗುರು
ಮದನಹೊಲೆಯನು ಬಳಸಿ ಕಟ್ಟಿದ ಬಲೆಯಲಿ ಎದೆಕಳೆದು ಬಳಲುತಿದೆ ಹಕ್ಕಿ ಬಿದ್ದು; ಗುಂಗುರು ಮುಡಿಯಿಂದಲೂ ಅಲೆವ ಕಣ್ಣಿಂದಲೂ  ಬೆಳೆದುದ್ದರಲಿ ಬಿದ್ದೇಕೆ ಸುಳಿಯುತಿಹೆನು 
--------------
ನಾರಾಯಣ ಗುರು
ಮದ್ದು ತಿರುನಾಮ ತೊಡುವ ವಿಭೂತಿಯೊಡನೆ ಧರೆಯಲಿ- ನೀಡುವುದು ಹಲನಲುಮೆಗಳನಿಡುವ ಅಡಿಯೆರಡನು  ಬರುವ ಬಹು ಚಿಂತೆಗಳ ಹರಿವುದಕ್ಕುಪಾಯವ  ಬೇಡಿಯಿದ ಮರೆತುಬಿಡದಿರಲು ಬಂದಿರುವೆನು.
--------------
ನಾರಾಯಣ ಗುರು
ಮನಮಲರು ಕೊಯ್ದು ಮಹೇಶಪೂಜೆ ಮಾಳ್ಪ ಮನುಜತಾ ಮತ್ತೊಂದು ಕಾರ್ಯ ಮಾಡಬೇಕಿಲ್ಲ, ವನಮಲರು ಕೊಯ್ದೂ ಅದಲ್ಲದೊಡೆ ಮಾಯದ  ಮನು ಒದರುತ್ತಿದ್ದೊಡೆ ಮಾಂಬುದು ಮಾಯೆ.
--------------
ನಾರಾಯಣ ಗುರು
ಮನವೆಂಬ ಮಲರನ್ನು ಗೆಲುವವನ ಬಲುದೊಡ್ಡ ಪದವನು ಮುಗಿವವರು ಸುಖದಿ ಬಹು- ಕಾಲವೆಲ್ಲ ಬಾಳುವರು ಧರೆಯಲಿ.
--------------
ನಾರಾಯಣ ಗುರು
ಮನಸೋ’ನನ್ಯಯಾ ಸರ್ವಂ ಕಲ್ಪ್ಯತೇ’ವಿದ್ಯಯಾ ಜಗತ್ ವಿದ್ಯಯಾ’ಸೌ ಲಯಂ ಯಾತಿ ತದಾಲೇಖ್ಯಮಿವಾಖಿಲಂ.
--------------
ನಾರಾಯಣ ಗುರು
ಮನುಷ್ಯಾಣಾಂ ಮನುಷ್ಯತ್ವಂ ಜಾತಿರ್ ಗೋತ್ವಂ ಗವಾಂ ಯಥಾ ನ ಬ್ರಾಹ್ಮಣಾದಿರಸ್ಯೈವಂ ಹಾ! ತತ್ತ್ವಂ ವೇತ್ತಿ ಕೋ’ಪಿ ನ
--------------
ನಾರಾಯಣ ಗುರು
ಮನೆಯ ಹೊಕ್ಕು ಸೆಟೆದುಕೂರುತ್ತಲಿಂತು  ತಲೆದಿಂಬಿನಂತೆ ಉಬ್ಬಿ ತಿನಿಸನುಂಡು  ತೊಲಗಲೆಂದು ಈಮುನ್ನವೇ ನೀನೆನ್ನ  ಹಣೆಯಲ್ಲಿ ಬರೆದದ್ದೆಂತ ಸಂಕಟವು.
--------------
ನಾರಾಯಣ ಗುರು