ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಎಂಜಲನ್ನವನುಂಡವಗೋರ್ವ ಮಗನಾದ ನೀನು ತಿರುಕ ನಾನು ಭಿಕಾರಿ, ಮಾಳ್ಪ ತಪ್ಪು- ಗಳೆಲ್ಲವೂ ನೀನು ಮನ್ನಿಸುವುದು ನ್ಯಾಯ. ತಂದೆಗೆ ಮಕ್ಕಳು ಕಾಲಡಿಯಿಂದೊದ್ದರೂ ಎಲ್ಲವನು ಕ್ಷಮಿಸಿ ಆ ಕೂಸುಗಳಿಗುಳ್ಳ ಅಭೀಷ್ಟಗಳ ದಯೆಯಿಂ ನಡೆಸಿ ಕೊಡುವೆಯಲ್ಲೋ. 
--------------
ನಾರಾಯಣ ಗುರು
ಎಂಟುಗೇಣು ರೋಡಿನ ಶಕಟವನ್ನೆಳಯುತ್ತ ಮೇಲ್ಬಿಗಿದು ಕೆಳಬಿಗಿದು ಸಂಚಾರನಡೆಸಿರುವ ತುರಗದ್ವಯವನ್ನು ಹೂಡಿ ಓಡಿಸುತ್ತ ಇಳಿದು ಐದಾರು ಎಂಟು ಕಳೆದರಮನೆಯ ಹೊಕ್ಕುತ್ತ ಸುಖದಿಂದಲಲ್ಲಿದ್ದು ಎನ್ನ ಎದೆಯಾರಿ  ಹಾಲಕುಡಿಯಲು ಒಡೆಯ ನೀ ವರವ ನೀಡೋ.
--------------
ನಾರಾಯಣ ಗುರು
ಎಂಟುಸುತ್ತಲಿ ಮೋಕ್ಷಮಾರ್ಗವ ಮುಚ್ಚಿಮೆರೆವ ಕುಂಡಲಿನಿಯ ಕಟ್ಟುಹರಿದು ಚಿಗಿರಿ ಮಂಡಲವೂ ತಮ್ಮಪಾದ  ತುಷ್ಟಿಯಿಂದ ಹಿಡಿಯಲು ಕೃಪೆದೋರುವುದೆಂದಿಗೆ ಭವಾಬ್ಧಿಯಲಿ ಬಿದ್ದು ಹೋಗದಿರಬೇಕಿನ್ನು, ಒಡೆಯನೆ ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಎಂತಯ್ಯೋ ನೀಯೆಂದೂ ಚಿಂತೆಗೆಬರುವೆ ನೀಗಿದ ಚಿನ್ಮಯವೇ ಬೆಂದುನೀಗುವ ಅಹಂತೆಗೆ ಸಂಜೆದಿಂಗಳ ತೊಟ್ಟ ಕೋಮಳವೇ.
--------------
ನಾರಾಯಣ ಗುರು
ಎಚ್ಚರದವಸ್ಥೆ ನಿದ್ದೆಯೊಳಿಲ್ಲ ನಿದ್ದೆ ಮತ್ತೆದ್ದಾಗಲದೂ ಸ್ಫುರಿಸುವುದಿಲ್ಲ; ಅನುದಿನ ಹೀಗೆ ಇವೆರಡೂ ಆದಿಮಾಯಾ- ವನಿತೆಯಿಂದ ಹುಟ್ಟಿ ಬದಲಾಗುತಿಹುದು.
--------------
ನಾರಾಯಣ ಗುರು
ಎಚ್ಚರಿಸಬಾರದಿನ್ನು ನಿದ್ರಿಸದೆ ಇರಬೇಕು ಅರಿವಾಗಿ ಇದಕ್ಕಿಂದು ಅಯೋಗ್ಯನೆಂದೊಡೆ ಪ್ರಣವ ಎದ್ದು ಹುಟ್ಟಳಿದು ಬಾಳ್ವ ಮುನಿಜನಸೇವೆಯೊಳ್ ಮೂರ್ತಿಯನ್ನಿಕ್ಕಬೇಕು.
--------------
ನಾರಾಯಣ ಗುರು
ಎಡೆಯಿಲ್ಲವೆನಗೆ ಎಡೆಯಲ್ಲಿಂದು ಕಾಣುವ ಈ ಧೂಳಿಂದ ಮರೆವ ಒಡಲಿಗೆ ಹೊನ್ನವ್ವ ತಡೆಯಿಲ್ಲ ಏನೂ ಅದರಿಂದ ಎನಗಿಂದು ನಿನ್ನೊಡಲೊಂದು ನೀಡಿ ಮತ್ತೆ ನುಡಿ ಮಾಣಿಕ್ಯವೇ.
--------------
ನಾರಾಯಣ ಗುರು
ಎಣೆಗೂಡಿಯೇಳುವುದೆಲ್ಲ ಒಂದು ಬಗೆ, ಎಣೆಗೂಡದ್ದು ಬಗೆಯಲ್ಲ, ಬಗೆಯಹುದು ಎಣೆಗೂಡಿ ಕಾಂಬುದೆಲ್ಲ.
--------------
ನಾರಾಯಣ ಗುರು
ಎನ್ನಪಾಪ ಹರಿಯಲು ಅಂಬಾದ ಅರಿವು ನಿನ್ನ ಪಾದಪುಷ್ಪದಲೇಳುವ  ನನ್ನೊಲವೆ ಮೌರ್ವಿ ಉಕ್ಕಾದ ಮನವೆ ಧನು ಹಮ್ಮಿಗನೆ ವಿಜಯಿ ಅಂಬೇ ನೀ ನೀಡುವ ಜಯದಿಂದ ಬೋಧವಾಗುವೆ ಪಾಪಪಂಕಿಲ ನಾನು  ಹೆಬ್ಭಾರವಾದ ತನು ಬೋಧವಾದ ಜಗವು ಬೋಧವಾಗುವುದೆಲ್ಲವೂ.
--------------
ನಾರಾಯಣ ಗುರು
ಎರೆ ಮುಂತಾದವುಗಳೆಂದೂ ಈ ತೆರದಿ ಬರುವುದಿನ್ನೂ; ಬರಲೊಲ್ಲದೆ ನಿಲ್ವುದೊಂದೇ; ಅರಿವದು ನಾವದುತಾನೆ ಮತ್ತೆಲ್ಲರೂ ಅದರ ರೂಪವದಾಂತು ನಿಲ್ಲುತಿಹುದು.
--------------
ನಾರಾಯಣ ಗುರು
ಎಲ್ಲರೂ ಆತ್ಮಸಹೋದರರೆಂದಲ್ಲವೇ ಹೇಳಬೇಕು, ನೆನೆದೊಡೆ ಇದ ನಾವು ಕೊಲ್ಲುವುದು ಹೇಗೆ ಜೀವಿಗಳ ಇನಿತೂ ಕೃಪೆಯಿರದೆ ಭುಜಿಸುವುದೂ
--------------
ನಾರಾಯಣ ಗುರು
ಎಲ್ಲವನರಿತು ಒಡೆಯನಿವನಿಂದೆತ್ತಿ  ಹೇಳಬೇಕೇ ದುರಿತವೆಲ್ಲವ ನೀ ಕಳೆಯಬೇಕು ಇಲ್ಲವಾರೂ ಇಲ್ಲಿ ಅಡಿಯನಿಗೆ ನೀವು ಕೈಬಿಟ್ಟರೆ ಎಲ್ಲವೂ ಕಳೆದು ಎತ್ತನೇರಿ ಬರುವ ಶಂಭೋ.
--------------
ನಾರಾಯಣ ಗುರು
ಎಲ್ಲೆಯಿಲ್ಲದೆ ಉಕ್ಕಿ ಹರಿವ ನಿನ್ನ ಅತಿರಸದ ಕರುಣೆಯ ತೆರೆಮಾಲೆಯೊಳ್ ಗತಿಬರುವಂತೆ ಮುಳುಗುತ್ತಲೆದ್ದು  ನಿಲ್ಲಲಿಕ್ಕೋಸುಗ ಕೃಪೆದೋರೊ ನೀನು.
--------------
ನಾರಾಯಣ ಗುರು