ಪ್ರಾರಂಭ ಪದದ ಹುಡುಕು
ಇಂದ್ರಿಯವಾಗುವುದಂದು ಇಂದ್ರಿಯವೂ ಕೆಡುವುದಂದಿಗೆ ಕಾರಿರುಳು ಧರೆಯಲ್ಲುರುಳಿ ಬಿದ್ದೊಡೆ ಕೈಬಿಟ್ಟು ತನ್ನ ನೆಲೆ ತಪ್ಪೀತು ಹಗ್ಗ ಹರಿದೊಡೆ.
ಇಂದ್ರಿಯಾಣಾಂ ಹಿ ವಿಷಯಃಪ್ರಪಂಚೋ’ಯಮ್ ವಿಸೃಜ್ಯತೇಯಯಾ ಸೈವಾ’ಪರಾ’ಧ್ಯಾತ್ಮ-ಸ್ಥೂಲ ಸಂಕಲ್ಪನಾಮಯೀ.
ಇಂದ್ರಿಯಾಣಿ ಮನೋಬುದ್ಧಿಃಪಂಚಪ್ರಾಣಾದಯೋ ಯಯಾವಿಸೃಜ್ಯಂತೇ ಸೈವ ಪರಾಸೂಕ್ಷ್ಮಾಂಗಾನಿ ಚಿದಾತ್ಮನಃ.
ಇಂದ್ರಿಯಾಣಿ ಮನೋಬುದ್ಧಿಃವಿಷಯಾಃ ಪಂಚವಾಯವಃಭಾಸ್ಯನ್ತೇ ಯೇನ ತತ್ಸೂಕ್ಷ್ಮಂಅಸ್ಯ ಸೂಕ್ಷ್ಮಾಶ್ರಯತ್ವತಃ.
ಇಡು ಕಣ್ಮೊನೆಯೆರಡನ್ನೆನ್ನಲಿದೀ ಅಡಿಯನ ಬಯಕೆ ಉಮಾಪತಿಯೇ ಜಡವಿಂದಿದರಿಂ ಗೆಲುವಿದಕ್ಕೆ ಎಡೆಯಿಲ್ಲ ಇರುತ್ತಿರಲೊಂದರೊಳೂ
ಇದರಲ್ಲಿ ಬಿದ್ದುಬದುಕಿ ದಿನಗಳೆವುದಕಿಂತ ಮಿಗಿಲಾಗಿ ನೆನೆದೊಡೆ ಏನುಂಟು ಬವಣೆ ನನಗೆ ಚಂದ್ರಕಲೆಯ ತೊಟ್ಟ ದೇವನೇ ದಯೆತೋರಿ ಒಳಗಿನ ಚಂದ್ರಗೊಡತುಂಬಿಹರಿವ ತೊರೆಯ ಮುಡಿದಾಡು ನೀ
ಇದರಿಂದ ಕಂಡವಳೊಬ್ಬಾಕೆ ನೀಯೆಂದೂ ಈ ಮತಿಮಂಡಲವಲ್ಲದೆ ಮತ್ತೆಲ್ಲಿಯೂ ಕುತೂಹಲಗೊಂಡು ಜಿಗಿದು ಬಳಲದೆ ಕಂಡಲ್ಲಿನಿನ್ನ ಪಾದಪುಷ್ಪದಬಳಿ ಪದವೂರಿದೆ ಹೊಂಫಲವೇ.
ಇದರೊಳೇಳ್ವ ಆದಿಮಶಕ್ತಿಯಿಲ್ಲಿ ಕಾಂಬುದುಇದೆಲ್ಲವೂ ಈಯುವ ಆದಿಬೀಜವಹುದುಮತಿಯದರೊಳಿಟ್ಟು ಮರೆಯದೆ ಮಾಯಾ-ಮತಿಯಳಿಯಲು ಮನನವ ಗೈಯಬೇಕು.
ಇದು ಪಥ್ಯವೃತ್ತ ತೊಡರಿಲ್ಲ ಹಾಡುವವರಿಗೆಇದಕ್ಕಿಂದು ನಿನ್ನಡಿಯೆತ್ತಿ ನೀಡು ನೀ...
ಇದೆ ಇಲ್ಲ ಎಂದು ಅದಲುಬದಲಾಗಿ ಅಸತ್ತು ಸತ್ತುಎರಡೂ ತೋರುವುದು, ಇದನಾದಿ ತಮಃ ಸ್ವಭಾವ; ಎರಡೂ ಅರಸಿದೊಡಿಲ್ಲ ಅಸತ್ತು, ಹಗ್ಗದ ತುಂಡಲ್ಲಿಲ್ಲ ಹಾವು, ಉಳ್ಳದ್ದು ಹಗ್ಗ ಮಾತ್ರ.
ಇದೆಯಿದೆ ಎಂದು ಸಕಲೋಪರಿ ನಿಲ್ವುದೊಂದೇಸತ್ಯ, ಸಮಸ್ತವನಿತ್ಯವಸತ್ಯವಹುದುಮಣ್ಣಿನ ವಿಕಾರವದಸತ್ಯ ನೆನೆವೊಡೆ ಇದರೊ-ಳೆಲ್ಲ ವರ್ತಿಸುವುದು ಮಣ್ಣಿನ ಸತ್ಯವಹುದು
ಇನಿಮೆ, ಪ್ರೀತಿ, ಅನುಕಂಪೆ ಮೂರಕ್ಕೂ ತಿರುಳೊಂದೇ ಇದು ಜೀವತಾರಕವು,’ಕೃಪೆಯಿರುವನೇ ಜೀವಿ’ಯೆಂದುಜಪಿಸು ಈ ನವಾಕ್ಷರಿಯನ್ನು.
ಇನಿಮೆಯ ತುಡಿಯೂ ತುಂಬಿ ಕಿರುನಗೆಗೆದರುವತಿಂಗಳಲಿ ತಾವರೆಹೂವತುಂಬಿಚೆಲ್ಲುವ ಕಟಾಕ್ಷದ ತಿರುಜೇನಸವಿಮಳೆಸುರಿದೊಸೆದುಕಾಮ ಮುನ್ನವಾಗಿ ಚಿಗುರುವ ಕಳೆಮೊಳೆಗಳ ಹರಿದು ಒಳನೆಲದಲಿ ಇನಿಮೆಯಬೀಜವಿತ್ತುಈಯೆನ್ನ ಭಕ್ತಿಯಮೊಳಕೆ ಪಯಿರು ತೆನೆ ಬರುವಂತಾಗೆಲೊ ತಾರಕಾರೇ.
ಇನಿಮೆಯಿಂದ ಬರುವುದಿಂಬು,ಇನಿಮೆಯಿಲ್ಲದೆದೆಯಿಂದ ಬರುವುದು ದುಃಖವೆಲ್ಲವುಇರುಳು ಇನಿಮೆಯನ್ನು ನೀಗಿಸಿ ಬೀಜವಾಗಿ-ಯೆಲ್ಲಕ್ಕೂ ಅಳಲಿನ ತಿರುಳಪ್ಪುದು.
ಇನಿಮೆಯಿಲ್ಲದಿರೆ ಅಸ್ಥಿ, ತೊಗಲು, ಸಿರೆ,ನಾರುವೊಂದೊಡಲೆ ಅವನು,ಮರಳುಗಾಡಲ್ಲಿ ಹರಿವ ನೀರು ಆ ಪುರುಷನು ನಿಷ್ಫಲಗಂಧಪುಷ್ಪವು.