ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಚಂಚಲವೊಡಲಳಿದ ತನಗೆ ತನ್ನಾತ್ಮ- ಕಿಂತಧಿಕ ಪ್ರಿಯವಸ್ತುವಿಲ್ಲ ಬೇರೆ; ಮೆರೆವ ಆತ್ಮಗತಪ್ರಿಯವು ಬಿಡದೆ ಈ  ನೆಲೆಯೊಳಿರುವುದರಿಂದ ಆತ್ಮ ನಿತ್ಯ.
--------------
ನಾರಾಯಣ ಗುರು
ಚಂದದ ಕಟಿಯರೊಡನೆ ಕೂಡಿಯಾಡಿ ತಿರುಗುವುದಕ್ಕೆ ತುಸುಹೊತ್ತು ನೆನೆಯಲು ತರವಾಗದಂತೆ ನೀ ಕರಗಿಸಿ ಎನ್ನ ಮನ ತಿರುವಡಿಯೊಳೊಂದಾಗಿ ಕೂಡಿಸಯ್ಯ.
--------------
ನಾರಾಯಣ ಗುರು
ಚಂದದ ತಿಂಗಳುಗೂಸೂ ತಿರುಮುಡಿಯೆಡೆಯಲಿ ಹಾವು ಎಲುಬು ದೇವತೊರೆಯೂ ಶ್ರೀಮತ್ತಾಮ್ರದ ಮುಡಿಯಲಿ ಸಿರಿಬೆಳಕ ಚೆಲ್ಲಿ  ಹೊಮ್ಮುವ ಸಂಜೆಗೆಂಪೂ ನಾಮದ ಬೊಟ್ಟಿಟ್ಟೊಪ್ಪುವ ಹಣೆಯ ಕಿರುದಿಂಗಳ  ತುಂಡೂ ಕಾರ್ಬಿಲ್ಲ ಕೆಣಕುವ ಇನಿಮೆಯ ಬಳುಕುಬಳ್ಲಿಯೂ ಅಡಿಯನೊಳ ಕಣ್ಮೊನೆಗೆ ಕಾಂಬುದೆಂದು?
--------------
ನಾರಾಯಣ ಗುರು
ಚಂದದಲಿ ಭಾರತಯುದ್ಧದದ್ರಿಮೇಲೆ ಮೊರದಗಲ ಕಿವಿಯವನು ಮುರಿಕೊಂಬಿನಿಂತ  ಮುನ್ನಬರೆದಿಟ್ಟು ಎಳೆಯರಿಗೊಲಿದು ನಿಲ್ವ ಪೂರ್ಣನಿಧಿಯಾದ ಮೂರುತಿ ಕಾಯೋ ನೀ.
--------------
ನಾರಾಯಣ ಗುರು
ಚಂದ್ರಸೂರ್ಯರು ಎಡಬಲಕಂಗಳಾದ ಇಂದುಬಿಂಬಮುಖಗಳೂ ತಿರುನಾಸಿಕಾವಲಿಯದೂ  ಕರ್ಣಮಂಡಲ ಮಂಡಲೀಕೃತಗಂಢಸ್ಥಲಗಳೆಲ್ಲ ಎನ್ನ  ಕಣ್ಣೆಣೆಗೆ ಅತಿಥಿಯಾಗಬೇಕೆಂದಿಗೂ ಗುಹ ಪಾಹಿಮಾಂ
--------------
ನಾರಾಯಣ ಗುರು
ಚಕ್ಷುರಾದಿಗಳು ನಡೆಸುವ ವಂಚನೆಯಲ್ಲಿ ಬೀಳ್ವೆ ಚತುರನಾದರೂ ಪಕ್ಷಪಾತವಿಲ್ಲ ನಿನಗೆ ಅವನಲ್ಲಿ ನಿನ್ನಚರಿತ್ರಪರನಾದೊಡೆ ತತ್ಕ್ಷಣವೆಲ್ಲವು ನಡೆದು ಸತತಸುಖಿಸಿ ಬಾಳುವ ಈ ಪಕ್ಷವೆಲ್ಲವನು ಅರಿವ ಪರದೇವತೆ ನಿನೆಯಲ್ಲವೇ.
--------------
ನಾರಾಯಣ ಗುರು
ಚಪಲತೆಯಿಂದ ಗೆಯ್ದೊಂದು ಪಾಪಗಳ ಕ್ಷಮಿಸಿ ತಾಪಗಳ ಕಳೆದು ಪಾಲಿಸು ಮತ್ತೆನಿತ್ಯ ಪಾಪಹರ ನಿನ್ನ ಪಾದ ನೆನೆವಂತಾಗಲೆನಗೆ ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಚಿಂತಿಸುತ್ತಿರುವೆ ಶಿವನೇ ಕಿರುಕಂದನಾದೆನ್ನ ಚಿಂತೆಗೆ ಕೊರತೆಯಿದರಿಂದ ಕಿಂಚಿತ್ತು ಇಲ್ಲ  ಸಂಧಿಸುತ್ತಿರುವ ಒಡೆಯನೊಡನೆ ಹೇಳಲದೆ ಏನಿಲ್ಲಿ ಸುಳಿಯುತಿರೆ ಸಾಧ್ಯವಯ್ಯೋ
--------------
ನಾರಾಯಣ ಗುರು
ಚಿತ್ತಸ್ಯ ತೈಲಧಾರಾವದ್- ವೃತ್ಯಾ’ವಿಚ್ಛಿನ್ನಯಾತ್ಮನಿ ನಿರಂತರಂ ರಮ್ಯತೇ ಯತ್  ಸ ಯೋಗೋ ಯೋಗಿಭಿಃ ಸ್ಮೃತಃ
--------------
ನಾರಾಯಣ ಗುರು
ಚಿದೇವ ನಾನ್ಯದಾಭಾತಿ ಚಿತಃ ಪರಮತೋ ನಹಿ ಯಚ್ಚ ನಾಭಾತಿ ತದಸ- ದ್ಯದಸತ್ತನ್ನ ಭಾತಿ ಚ.
--------------
ನಾರಾಯಣ ಗುರು
ಚೆಲುಮುಡಿಗೆ ತೊಡುವ ತೆರೆಮಾಲೆಯಲ್ಲಿ  ತಣಿವುದೆನ್ನ ಬೆಸನಗಳೆಲ್ಲವೂ ತಾಪತೀರುವುದಕ್ಕಾಗಿ ನೀನೆಂದೂ ಸಿರಿ- ನೋಟಗಳ ಕಾಣಿಸು ಕಾಮವಿನಾಶನ.
--------------
ನಾರಾಯಣ ಗುರು
ಚೆಲುವಿನೊಡಲು ನಿನ್ನಂಗಗಳು ಧರೆಗೆ ಮುನ್ನವೆಂದು ನುಡಿವುದಲ್ಲದೆ ಮುನಿಗಳಿಗೂ ನನ್ನವ್ವ ಸಾಧ್ಯವಾಗದದೇನೂ ಅದರಿಂದೆನಗಿಂದು ನಿನ್ನ ನುಡಿಬಂದು ಮೌನನೆಲಯಾಗಿ ಇಗೋ ಮೊಳಗುತಿದೆ.
--------------
ನಾರಾಯಣ ಗುರು
ಚೈತನ್ಯಾದಾಗತಂ ಸ್ಥೂಲ- ಸೂಕ್ಷ್ಮಾತ್ಮಕಮಿದಂ ಜಗತ್ ಅಸ್ತಿ ಚೇತ್ ಸದ್ಘನಂ ಸರ್ವಂ ನಾಸ್ತಿ ಚೇದಸ್ತಿ ಚಿದ್ಘನಂ.
--------------
ನಾರಾಯಣ ಗುರು