ಪ್ರಾರಂಭ ಪದದ ಹುಡುಕು
ಧರಣಿಯೊಳು ಹೀಗೆ ಬಾಳಲಾಗದು ಮರಣವೂ ಇಲ್ಲ ನಮಗೆ ನೋಡಿದೊಡೆ ತರುಣವಿದೆಂದು ನೆನೆದು ತಾಪವೆಲ್ಲ ಸ್ಮರಹರ ನೀಗಿಸಿ ಮೆರೆದುಬಾರೆನ್ನ ಮುಂದೆ.
ಧರೆಗೆ ಚೆಲುವಾಗಿ ಒಪ್ಪುವ ನಡುವೆಂಬ ಕಲಶದೊಳಗೆ ಹೊನ್ನ ಬಾಳೆದಂಟು ಮಣಿಗಂಬ ಚೆಲುವಲಿ ಸೋಲುವ ಸಿರಿದೊಡೆಗಳೆರಡೂಕೆಳಗೆ ಊರಿ ಉಕ್ಕುವ ಮದನನ ಬತ್ತಳಿಕೆಮಣಿ ಸೋಲುವುದುಕೇತಕಪುಷ್ಪ ಹೊನ್ನಡಿ ತಮ್ಮ ಚೆಲುವ ಮಂಡಿಯನ್ನೂ ಮರೆವೆನೇ ನಾನು
ಧರೆಯೊಳೈದುರು ಜಲದಿನಾಲ್ಕು ಅಗ್ನಿಗೆಮೂರು ಗಾಳಿಯೊಳೆರಡು ಬಾನೊಳುತವ ರೂಹಿದೊಂದು ಬೆಳೆದೇಳುವುದು ನೋಡಲೆಲ್ಲಿಯೂ ತುಂಬಿ ನಿಂತಿಹುದು.
ಧರ್ಮ ಏವ ಪರಂ ದೈವಂಧರ್ಮ ಏವ ಮಹಾಧನಂಧರ್ಮಸ್ಸರ್ವತ್ರ ವಿಜಯೀಭವತು ಶ್ರೇಯಸ್ಸೇ ನೃಣಾಂ.
ಧರ್ಮಸಾಗರ ಪಾದದಲ್ಲಿ ಸೇರಿದವರಲ್ಲದೆ ಕರ್ಮಗಡಲಿಂದಲ್ಲಿ ಪಾರಾಗುವುದಿಲ್ಲ ಒಬ್ಬನೂ
ಧಾನಾದಿವ ವಟೋ ಯಸ್ಮಾತ್ಪ್ರಾದುರಾಸೀದಿದಂ ಜಗತ್ಸ ಬ್ರಹ್ಮಾ ಸ ಶಿವೋ ವಿಷ್ಣುಃಸ ಪರಃ ಸರ್ವ ಏವ ಸಃ.
ಧಿಯತೇ’ಸ್ಮಿನ್ ಪ್ರಕರ್ಷೇಣಬೀಜೇ ವೃಕ್ಷ ಇವಾಖಿಲಂಅತಃ ಪ್ರಾಧಾನ್ಯತೋ ವಾ’ಸ್ಯಪ್ರಧಾನಮಿತಿ ಕಥ್ಯತೇ.
ಧೂಳದು ಧರೆಯೊಳಸಂಖ್ಯ ಆ ಧೂಳ-ಲ್ಲಡಗಿದ ಧರೆಗಿಲ್ಲ ಭಿನ್ನಭಾವ;ಜಡವಡಗುವುದದರಂತೆ ಚಿತ್ತಿನಲಿ ಚಿತ್ತೊ-ಡಲಿನಲಿ ಇದನಿಲ್ಲಿ ನೆನೆದೊಡೊಂದೇ.
ಧ್ಯಾನಮಂತರ್ಭೃವೋರ್ದೃಷ್ಟಿಃ ಜಿಹ್ವಾಗ್ರಂ ಲಂಬಿಕೋರ್ಧ್ವತ:ಯದಾ ಸ್ಯಾತ್ ಖೇಚರೀಮುದ್ರಾನಿದ್ರಾಲಸ್ಯಾದಿನಾಶಿನೀ.
ಧ್ವನಿಮಯವಾಗಿ ಗಗನ ಜ್ವಲಿಸುವುದಂ-ದಿಗೆ ಕೆಡುವುದದರೊಳೆಲ್ಲ ದೃಶ್ಯಜಾಲವು,ಮತ್ತಲ್ಲಿ ತ್ರಿಪುಟಿಗೆ ಪೂರ್ಣತೆ ನೀಡುವಸ್ವರವು ಅಡಗುವೆಡೆ ಸ್ವಯಂಪ್ರಕಾಶವು.