ಪ್ರಾರಂಭ ಪದದ ಹುಡುಕು
ಬಂದವರ ಕೂಡೆಲ್ಲ ನೆರೆನಿಂತು ಸೆಣೆಸುವರಣನಾಯಕಿಯರೊಡನೆ ಸೆಣೆಸಲಾಳು ನಾನೇ?ಎತ್ತಿ ಬಳಿಯಲ್ಲಿರಿಸಿ ದಯೆತೋರಿನ್ನು ನಿನ್ನಹೊನ್ನಡಿಯ ಚಿಗುರ ಮರೆತಲೆವುದೇಕೆ ಇಲ್ಲಿ?
ಬಂಧಮೋಕ್ಷಗಳಲ್ಲಿ ಭೇದ ಕಂಡಿಲ್ಲಿ ಕಠಿಣವ್ರತ ಹಮ್ಮಿಕೊಂಡವರಿಗುಳ್ಳ ಮಹಿಮೆ ಅತಿಎತ್ತರದ್ದು ಧರೆಯಲಿ
ಬಂಧುಗಳಿಲ್ಲ ಬಲವೂ ಧನವೂ ನೆನೆದೊಡೆಏನ ಕೊಂಡಿದು ಬೆಳೆಯಿತಯ್ಯೋ ವಿಚಿತ್ರಎನ್ನೊಡೆಯನ ಆಟವಿದೆಲ್ಲ ಎಂದರಿಯಲುಅಂಧತ್ವವಿಲ್ಲದಕೆ ನೀನೊಲಿಯೊ ಶಂಭೋ.
ಬಗೆಯಿರುವೊಡಲು ತಾನೇ ತನ್ನಬಗೆ ಯಾವುದೆಂದು ಹೇಳುತ್ತಿರೆಬಗೆ ಯಾವುದೆಂದು ಕೇಳರುನೆನೆವುಕಂಗಳುಳ್ಳವರು.
ಬಗೆಯೆಂದು ಇದಕೆ ಹೇಳುವು-ದಿಂಥದ್ದೆಂದು ತಿಳಿಸಲುಬಗೆಯಿಲ್ಲದೊಡೆ ಇಲ್ಲ ಏನೂಇಂಥದ್ದೆಂಬುದು ಧರೆಯಲಿ.
ಬಡತನ ಹೆಚ್ಚಿತು ಹುಲ್ಲು ಮರಗಳುದಹಿಸಿದವು ದೈವವೇ! ನೀರಿಲ್ಲದೆ ತುಂಬಿತು ಸಂಕಟವಯ್ಯೋ ನೀನೇನೂ ನೆನೆಯಲಿಲ್ಲವೇ? ಯಾರಿರುವರು ಇಷ್ಟು ಕೃಪಾಮೃತ ಸುರಿಯ- ಲೆಂದು ನೆನೆದಿದ್ದವರಲ್ಲಿ ಈ ಕ್ರೂರಕಿಚ್ಚಿಕ್ಕಲು ಮುಂದಾದದ್ದು ಸರಿಯೇ ಹೇಳರ್ಧನಾರೀಶ್ವರಾ
ಬಯಕೆ ಹುಟ್ಟಿಸುವ ಈ ವಿಷಯದಲ್ಲಿಂದು ನಟನೆಗೈಯ್ಯಬಾರದು ಇನ್ನು ಸವಿಯುಳ್ಳ ಹೆಂಡದಂತ ಯೌವನವಲ್ಲದೆ ಹೆಚ್ಚಿತು ಇವನಿಗೆ ಕೂಟತನ ತುಂಬಿದೊಡೆ ಕಟ್ಟಿಹಾಕುವ ಕರಣದ ಮುಚ್ಚಲವನ್ನು ಸುಟ್ಟುಹಾಕಲೊದಗಿದ ಹಣೆಯ ಕಿಚ್ಚು ಇಂತಿರಲು ಓಡಿಹೋಗಲು ಮುದದಿಂದ ಕೃಪೆದೋರೋ ಮುರುಗನೇ
ಬಯಲದುಬಂದೆನ್ನ ಮುಂದೆ ಅರಿವಾಗಿ ಎಲ್ಲವನ ನುಂಗಿ ಬರಿ ಬಯಲಾಗಿ ಬಯಲ ಮೊದಲೈದಲ್ಲಿಯೂ ಒಂದಾಗಿ ಬೆಳಗಿಯಾಡುವುದೇ ತಿರುನಟನೆ.
ಬಯಲೊಳಿದ್ದು ವಿವರ್ತವಿಲ್ಲಿ ಕಾಣ್ಬಬಯಲು ಮುಂತಾದ ವಿಭೂತಿ ಐದೂ ನೆನೆದೊಡೆಜಲನಿಧಿ ತನ್ನೊಳೇಳ್ವ ತರಂಗಾ-ವಲಿಯ ಹಾಗೆ ಅಭೇದವಾಗಿ ಬರಬೇಕು.
ಬಯಸುವುದೂ ಹಗೆಯುವುದೂ ಎಂಬುದಿಲ್ಲವನ ಕಾಲು ಸೇರುವೊಡೆ ಅವರಿಗೇನೂ ಇಲ್ಲ ಬವಣೆ ಯಾವ ಕಾಲದ್ಲಲೂ
ಬರಿಸುಳ್ಳ ಬಿತ್ತಿ ಹಳೆತಪ್ಪು ಗುಡಿಸಲುಗಟ್ಟಿ-ದೀಯೊಡಲು ಎಂಜಲನ್ನವನುಂಡು ತಿರುಪೆಯ ಪಾತ್ರೆಕೋಲೆತ್ತಿ ಬುಡವಂತು ಮಾಸಿಹೋಗುವ ಮುನ್ನಹಚ್ಚೆ ಹೊನ್ನವಿಲೇರಿ ಚಂದದಲಿ ಮೆರೆಯುತ್ತಹೊಸ್ತಿಲಲಿ ಮಲಗಿರುವ ತಿರುಕನಿಗೆ ನೀಡಯ್ಯಗತಿಯೊಂದೂ ಮತ್ತೆನಗೆ ಇಲ್ಲ ಯಾರೂ ಈಗ
ಬರುವ ಆರುವಿಧ ವಿಕಾರವೂಬರುವಂತಿಲ್ಲ ಅರಿವಿಗೆ ಇದು ದಿಟತನುವೆಂಬ ಒಡಲುಬಿಟ್ಟು ಕೀರ್ತಿಯೆಂಬಒಡಲಾಂತಿಲ್ಲಿ ಅನುಕಂಪೆ ಉಳಿಯುವುದು.
ಬಲುಮಾಯೆಯ ಧೂಳಡಗಿ ಮರೆಯೊಳು ಮರೆಗೊಂಡಿಹ ಪರಬಯಲೇ ಕಿರಿದೊಂದೊಂದು ಅದೊಂದಾ- ಮರೆಯಲಿ ಸುಳಿದು ಹೊಗೆಯಾಗಿಸುವ ಹೊಗೆಯೂ ನೀ.
ಬಳಿಕ ಒಂದೊಂದರಲ್ಲೂಕುರುಹು ಬೇರೆಬೇರೆಯಾಗಿರಲುಅರಿಯುವೆವು ಹಲವಾಗಿ ಬೇರ್ಪಡಿಸುತ್ತಲಿಲ್ಲಿ ನಾವು.
ಬಳಿಯಲಿದ್ದು ನೀಡುವಂತ ವರವು ದಿನಮಣಿ ಹೊದ್ದ ಒಡೆಯನಿದೊಂದೂ ಅಣುವಿನಷ್ಟೂ ಬೇರಾಗದಿರುವೆನ್ನ ಮಣಿಗಳೆಮಗೆ ನೀಗಿಸುವವು ಬರುವ ಕಷ್ಟವನ್ನು.