ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಪಂಕಹರಿದು ಅಂಗವಿಲ್ಲದೆ ಪರಿಪಾವನವಾಗಿ ಸದಾ ಮನಸಿನ ಮನವಾಗಿ ತನ್ನೊಳು ತಾನೇ ಮೆರೆಯುತಲಿರ್ಪನು 
--------------
ನಾರಾಯಣ ಗುರು
ಪಂಜರವಾದೊಡಲು ಮೊದಲಾದ ಹತ್ತಿಯಲಿ ಅರಿವೆಂಬ ಕಿಚ್ಚಿಡಲು  ಮಂಜುಕಣಗಳ ಹಾಗೇ ಈ- ಮಂಜುಳಬಿಸಿಲು ಮುಟ್ಟಿ ಅಪಾಯವಡಗುವುದು.
--------------
ನಾರಾಯಣ ಗುರು
ಪತಿಯಾವುದೆಂದರಿಯದೆನ್ನ ಪತಿಯೇ ನಿನ್ನ ಹುಡುಕುತ ಹಲವರಿಗೋ ಮತಿಗೆಟ್ಟು ಒಂದರಲೂ ಇಲ್ಲದೆ ಅತಿವಾದದಿಂದ ನೀಗಿ ಹೋಗುವರು.
--------------
ನಾರಾಯಣ ಗುರು
ಪರಗತಿಯನಿಕ್ಕು ನೀ ಪುರಹರ ಒಡೆಯನಿಗಿದುವೇ ಕರ್ತವ್ಯ ಹರ ಹರ ಶಿವಪೆರುಮಾಡಿಯೇ ಹರ ಹರ ಬಯಲೂ ತುಂಬಿದ ಕಾರಿರುಳು.
--------------
ನಾರಾಯಣ ಗುರು
ಪರನೇ ಪರವಾದ ತೆರೆಯಲಿ ಪರನೇತಾರನಾದ ಪಶುಪತಿಯೇ ಹರನೇ ನಿನ್ನತ್ತ ಕೂಗು ಕ್ಷಣಹೊತ್ತೂ ಇಲ್ಲಿರಸಬಾರದೆಲೋ.
--------------
ನಾರಾಯಣ ಗುರು
ಪರಮಪಾವನ ಪಾಹಿ ಪುರಾರಿಯೇ ದುರಿತನಾಶನ! ಧೂರ್ಜಟಿಯೇ ನಮಃ ಚರಣಸಾರಸಯುಗ್ಮನಿರೀಕ್ಷಣೆ ಬರುವುದೆಂದು ವಲಾಂತಕವಂದಿತಾ
--------------
ನಾರಾಯಣ ಗುರು
ಪರಮಾರ್ಥವನೊರೆದು ತೇರೋಡಿಸುವ  ತಿರುಳೋ, ಭೂತದಯಾಕ್ಷಮಾಬ್ಧಿಯೋ, ಸರಳಾದ್ವಯ ಭಾಷ್ಯಕಾರನಾದ  ಗುರುವೋ ಈ ಅನುಕಂಪೆಯುಳ್ಳವನು?
--------------
ನಾರಾಯಣ ಗುರು
ಪರವದರ ಹಾಲು ಸವಿದ ಭಾಗ್ಯವಂತರಿಗೆ ಹತ್ತುಸಾವಿರವರ್ಷವೊಂದಲ್ಪಹೊತ್ತು; ಅರಿವು ಅಪರಪ್ರಕೃತಿಗಧೀನವಾದೊಡೆ ಅರೆಕ್ಷಣವೇ ಸಾವಿರವರುಷವಹುದು.
--------------
ನಾರಾಯಣ ಗುರು
ಪರವಶನಾಗಿ ಪರತತ್ವವೆನ್ನದೆಂದು ನೆನೆಯ ಬಾರದುಬಾರದೆಂದು ಕಥಿಸುವುದರಿಂದ ಬರುವರಿವ್ಯಾವುದೂ ಬಾರದು ಕಥಿಸುವುದರಿಂದ  ಪರಮಪದವ ಪರಿಚಿಂತೆ ಮಾಡಬೇಕು.
--------------
ನಾರಾಯಣ ಗುರು
ಪರವೊಂದು ದುಃಖವೆನಗೆ ನೀನಲ್ಲದೆ ಮತ್ತಾರೂ ಇಲ್ಲ ದಿಗಂಬರ! ನಿನ್ನ ಪದ ನೀಡು ಅದರಿಂದ ಪಾಪವೆಲ್ಲವ  ಕಳೆದು ನಾನು ದಾಟುವೆ ಭವದಕಡಲ. 
--------------
ನಾರಾಯಣ ಗುರು
ಪರವೊಂದು ಬಯಲು ಹರಡಿದ ಶಕ್ತಿ ಗಾಳಿಯು ಅರಿವನಲ, ಜಲವಕ್ಷ, ಇಂದ್ರಿಯಾರ್ಥವು ಧರಣಿ, ಇದು ಹೀಗೆ ಐದು ತತ್ವವಾಗಿ ನಿಂತು ಉರಿಯುವುದಿದರ ರಹಸ್ಯವೇಕವಹುದು.
--------------
ನಾರಾಯಣ ಗುರು
ಪರಿಪೂರ್ಣವಯಸ್ಸುಳ್ಳ ನರನಲ್ಲಿ ಗರಿಮೆಯನ್ನು ಅವರಂದು ನುಡಿದಂತ ವೇದವಿಲ್ಲಿ ತಿಳಿಸುವುದು
--------------
ನಾರಾಯಣ ಗುರು
ಪರೋಪಕಾರೀಸ್ಯಾದ್ದೀನ- ದಯಾಲುಃ ಸತ್ಯವಾಕ್ಪಟುಃ ಸದಾಚಾರರತಃ ಶೀಘ್ರ ಕರ್ತವ್ಯಕೃತತಂದ್ರಿತಃ
--------------
ನಾರಾಯಣ ಗುರು
ಪಶುಪತಿ ಪಾಶಬಿಡಿಸಿ ಪಾಹಿಮಾಮ- ಶುಭವೆನಗದೊಂದೂ ಬಾರದಂತೆ ಪಿಶಿತವುಂಡು ಬೆಳೆದ ಪಿಂಡವೇ ನಾ ಅಶುಚಿಯೆನ್ನೊಳಸುಮದೊಳು ನೆನೆಯದಂತೆ.
--------------
ನಾರಾಯಣ ಗುರು
ಪಾದಭಕ್ತಜನ ಪಾಲನಾಧಿಕ ಪರಾಯಣಾ ಭವಭಯಾಪಹಾ ಪೂತಮಾನಸ ಪುರಾಣಪೂರುಷ ಪುರಂದರಾದಿ ಪುರುಪೂಜಿತಾ ಸಾಧು ಸಾಧಿತ ಸರಸ್ವತೀ ಸಕಲ ಸಂಪ್ರದಾಯ ಸಮುದಾಹೃತಾ ಶಾತಶಾರದ ಶಶಾಂಕಶೇಖರ ಶಿವಾಶಿವಾ ಶಿವಮುದೀಯತಾಂ
--------------
ನಾರಾಯಣ ಗುರು