ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಅರಿವಿಗೆ ಶಕ್ತಿ ಅನಂತವುಂಟಿದೆಲ್ಲ ಕೊನೆಗೊಳ್ಳಬಹುದು ಸಮವನ್ಯವೆಂದು ಹೀಗೆ ಇದ್ದಿರುವಾಗಿ ಇದರೊಳನ್ಯಸಾಮ್ಯವಾಂತ ಒಡಲೊಳಡಗಿ ತಿಳಿದು ಎಚ್ಚರಿಸಬೇಕು.
--------------
ನಾರಾಯಣ ಗುರು
ಅರಿವಿನ ಕೆಂಕಿಚ್ಚೆಬ್ಬಿಸಿ ಮಿರ ಮಿರ ಮೆರೆವ  ಬಳುಕುಬಳ್ಳಿಯೊಳು ಮೌನದ ಹೂದಿಂಗಳೊಳಗೆ ಕರಗುವುದು ಅಮೃತ  ಹರಿಯುತ ಎದೆ ಕರಗಿ ನಾನೂ ನೀನೂ ತಿಕ್ಕಿಬೆರಯಲು ಒಲಿದು ತನ್ಮಯವಾಗಿ ನಿನ್ನಡಿಹೂವ ಜೇನು ಒಳಸೂಸುವ ಮುತ್ತುಕೊಡ ಅಡಿಯನ- ನಡಗಿಸಿ ನೀಡೆನ್ನ ಚಿತ್ತದ ಕೂಸೇ
--------------
ನಾರಾಯಣ ಗುರು
ಅರಿವಿನರಿವಾಗಿ ನಿಂದು ಯಾವುದು ಅರಿಯಿಸುತ್ತಿಹುದೋ ಅದುವೆ ನಾವು  ಅರಿವು ಯಾವ ತೆರದಿ ಹೇಗೆ ಈ  ಅರಿಯಲ್ಪಡುವುದು ಒರೆಡೊದಾವುದಿದು. 
--------------
ನಾರಾಯಣ ಗುರು
ಅರಿವಿನೊಳಿದ್ದಪರತ್ವವಾಂತುಕೊಳ್ಳದೆ ಈ ಅರಿವನಿಲ್ಲಿ ಅರಿಯುವುದಲ್ಲದೆ ತಾನು ಪರವಶನಾಗಿ ಅರಿಯೊಲ್ಲ ಪಂಡಿತನ  ಪರಮರಹಸ್ಯವಿದನ್ನು ನೋಡುವವರಾರು!
--------------
ನಾರಾಯಣ ಗುರು
ಅರಿವಿನೊಳಿದ್ದು ಕೆಡುವುದಿಲ್ಲ ಅರಿವೆಂದೊಡಿದು ಇಳಿಯುವುದು ಎಲ್ಲಿ  ಅರಿವನ್ನರಿಯುವುದಿಲ್ಲ ಎರಡೂ ಒಂದಾಗಿ  ಅರಿಯುತ್ತಿರುವಾಗ ಇಲ್ಲಿ.
--------------
ನಾರಾಯಣ ಗುರು
ಅರಿವಿನೊಳಿದ್ದು ಸದಸ್ತಿಯೆಂದಸಂಖ್ಯ ಕಿಡಿಚೆದರಿ ಭುವನ ಸ್ಫುರಿಸುವುದರಿಂದ ಅರಿವಲ್ಲದೆ ಯಾವ ವಸ್ತುವೂ ಇಲ್ಲವೆಂದು ಅರಿಯಬೇಕೀ ಅರಿವೀವುದೇಕರೂಪ. 
--------------
ನಾರಾಯಣ ಗುರು
ಅರಿವಿನೊಳಿದ್ದೊಂದು ಹಮ್ಮು ಮೊದಲುಂಟಾಗಿ ಬರುವುದು ಇದರೊಂದಿಗಿದಂತೆ ವಾಮೆಯಾಗಿಯೂ ಬರುವುವಿವೆರಡು ಲತೆಗಳಂತೆ ಮಾಯಾ- ಮರ ಹರಡುವುದು ಅಖಿಲ ಮೂಡುವಂತೆ.
--------------
ನಾರಾಯಣ ಗುರು
ಅರಿವಿಲ್ಲದೊಡೆ ಇಲ್ಲ ಈ  ಅರಿಯಲ್ಪಡುವುದೂ, ಇದೆ ಇದೆಂದರೂ ಅರಿವೊಂದಿಲ್ಲ ಎಂದೊಡೆ ಈ  ಅರಿವು ಯಾವ ಅರಿವಿಂಗೆ ಅದಿಲ್ಲರಿಯೋಣ.
--------------
ನಾರಾಯಣ ಗುರು
ಅರಿವು ನಿಜಸ್ಥಿತಿಯನರಿಯಲೋಸುಗ ಇಲ್ಲಿ  ಧರೆ ಮೊದಲಾದ ವಿಭೂತಿಯಾಗಿ ತಾನೇ ಉರುಳುವವಸ್ಥೆಯೊಳೇರಿ ಬದಲಾಗಿ ಸುತ್ತಿ ತಿರುಗುವ ಅಲಾತದಂತೆ ತಿರುಗುತಿಹುದು. 
--------------
ನಾರಾಯಣ ಗುರು
ಅರಿವುದರಿಂದ ಅವನಿವಿಕಾರವುಂಟೆಂ- ದೊರೆವುದ ನೆನೆದೊಡೆ ಹುಸಿ, ಉಳ್ಳದುರ್ವೀ; ಬಹುವಿಧವಾಗಿ ನೆಲೆಯಳಿದು ನಿಲ್ವುದೆಲ್ಲ ಅರಿವಿನೊಳೇಳ್ವ ಪ್ರಕೃತಿಸ್ವರೂಪವಹುದು.
--------------
ನಾರಾಯಣ ಗುರು
ಅರಿವುದು ಧರ್ಮಿಯನ್ನಲ್ಲ, ಧರ್ಮವನ್ನು, ಒರೆವ ಈ ಧರ್ಮಿ ಅದೃಶ್ಯನಾದರಿಂದ ಧರೆ ಮೊದಲಾದವು ಒಂದೂ ಇಲ್ಲ  ಹೊತ್ತ ರೂಪದರಿವುಳ್ಳದ್ದ ನೆನೆಯಬೇಕು.
--------------
ನಾರಾಯಣ ಗುರು
ಅರಿವುಹಮ್ಮುಗಳೆರಡೂ ಆವರಣವಳಿದವಂಗೆ ಒಂದೇ, ಉಳಿದವರಿಗೆ ವಾದವುಂಟು, ಅರಿವನು ಬಿಟ್ಟು ಹಮ್ಮು ಅನ್ಯವಾದೊಡೆ  ಅರಿವನರಿಯಲಿಕೂ ಯಾರು ಇಲ್ಲ ಇಲ್ಲಿ.
--------------
ನಾರಾಯಣ ಗುರು
ಅರಿವೂ ಅದರಂತೆ ಹೋಗಿ- ಅರಿವವನೊಳು ಸೇರಿ ಮತ್ತೆ ಅರಿಯಲ್ಪಡುವುದರೊಳೊಂದು ಈ  ಅರಿವಿನ ಕಿಡಿ ಬಿದ್ದು ಸೀಳಿತೈದಾಗಿ. 
--------------
ನಾರಾಯಣ ಗುರು
ಅರಿವೂ, ಅರಿಯುವ ಅರ್ಥವೂ, ಪುಮಾನ್ ತನ್ನ- ರಿವೂ ಒಂದೇ ಆದಿಮಹಸ್ಸು ಮಾತ್ರವಹುದು; ವಿರಳತೆ ಬಿಟ್ಟು ಬೆಳಗುವ ಆ ಮಹತ್ತಾದ ಅರಿವಲ್ಲಮರ್ದು ಅದು ಮಾತ್ರವಾಗಬೇಕು.
--------------
ನಾರಾಯಣ ಗುರು
ಅರಿವೆ ನೂಲು, ಇದು ಹತ್ತಿ ಇದಾದಿಮೂಲ- ಭೂತಪ್ರಘಾತವಿದು ನೆನೆದೊಡೆ ಈ ತೆರದಲಿ  ಬೋಧದೊಳು ನಿಂತು ಮೆರೆವುದು ಮರುಸ್ಥಳದ ನೀರಿನಂತೆ, ಪರಮಾವಧಿ ಬೋಧವಹುದು.
--------------
ನಾರಾಯಣ ಗುರು