ಪ್ರಾರಂಭ ಪದದ ಹುಡುಕು
ಕುವಲಯನಾಯಕನರ್ಕನಗ್ನಿಹೋತಾ- ವವನಿ ಮೊದಲಾದ ಭೂತಿಯೈದೂ ತವ ಹೆಮ್ಮಾಯೆಯಿದನಾರರಿವರು ಕವಿಜನಕಲ್ಪಿತಕಾವ್ಯವೆಂಬ ಹಾಗೆ.
ಕುವಲಯವೆಲ್ಲ ಬೆಳಗುವ ಹೊಸಹವಳಮಲೆಯಲ್ಲಿ ಮೊಳೆತೇಳುವ ತಿಂಗಳೂನೆರೆನಿಂತ ಬೆಳ್ಮಣಿ ತಾರೆಗಳು ನಿಂ-ತೆಡವದೆ ರಕ್ಷಿಸಲು ಕೈ ಮುಗಿವೆ.
ಕುಸಿಯುವಾಗ ಇವೆಲ್ಲವೂ ಪಾಳಲಿ ತಾನೇ ಹರಡಿ ಬರಿಬಯಲಾಗುವುದು ಸಾಗರದಡಿಯಲಿ ತಾನೇ ಬೀಳ್ವವನಲ್ಲ ಇದುವೇ ಕೈವಲ್ಯ.
ಕೂಡಲೆ ಕುದಿದೇಳ್ವ ಅಳಲಕಡಲನ್ನೀಜಿಯೇರಿ ಹೊರಬಂದು ಕಂಡಾಗ ಅಳಿದು ಇಲ್ಲವಾಗಿ ನಿಲ್ಲುವೆ ನೀ ಸುಳಿದು ಸುತ್ತಲೂ ಸುರಿವ ನಿನ್ನ ಸೂಕ್ತಿಯನು ಕಂಡುಕಂಡು ಬೇಡಿ ನಿಲ್ಲುವ ಎನ್ನ ಮುಡಿಗೆ ತೊಟ್ಟೆ ಈಶನೇ
ಕೃಪೆ ರೂಪತಳೆದೊಂದೇ ತೆರದಿ ತುಂಬಿ ನಿಲ್ವಪರಮಶಿವ ಭಗವಾನರಿತೆಲ್ಲವನೂಸುರನದಿ ತಿಂಗಳುಟ್ಟ ದೈವವೇ ನಿನ್ನ-ತಿರುವಡಿ ನಿತ್ಯವೂ ಪೊರೆಯ ಬೇಕು.
ಕೃಪೆಯಿಂದ ಮಣ್ಣುನೀರೊಡು ಮತ್ತಲ್ಲಿ ಗಾಳಿಯೊಡನೆ ಸೇರಿ ಬಯಲೊಳೂ ಅಂದೂ ಇಂದೂ ಒಂದುಗೂಡಿದ್ದು ಮಿಂಚುವ ಕಂಪುಳ್ಳ ಮೈಗೆ ನೀನು ತೊಡಿಸುವ ಮಣಿಯಂತೆ ಅದಕೆ ಅಳತೆಯಿಲ್ಲ ಕಾದಾಡುವ ಅಳಲೂ ಅದರೊಳಿಲ್ಲ
ಕೃಪೆಯಿಕ್ಕುತ ಎನ್ನಲನಂಗರಸ-ಕಾಯ ಕಿತ್ತೊಗೆದು ಕರವ ತೊಳೆದು ಮಾಗಿ ಬರಿಮುಕುತಿ ಸುರಿದುಹರಿವ-ಹೊಂಬಳ್ಳಿಯೆ ಕಾಲ್ಗಳ ನೀಡೆಲೆ ನೀ.
ಕೆಲವೊಮ್ಮೆ ಶಿವಸೇವೆ ತುಂಬುವುದರಿಂದ ಅಲುಗದಿದ್ದು ಕರಗುವುದು ಮನವು ಹಲವೊಮ್ಮೆ ಒಡೆಯನ ಮಾಯೆಯಲ್ಲಿ ಹಲವೊಮ್ಮೆ ಹೀಗೆಯೇ ಇರುವುದುಂಟೋ?
ಕೈಕಾಲು ಮೊದಲಾದೆನ್ನ ಅಂಗಗಳಲ್ಲೇನೂಗೈಯ್ಯದೊಂದು ಸತ್ಕರ್ಮ ಕಳೆದಲ್ಲಿ ಅವಿವೇಕದಿಆಗದ್ದ ಗೈಯ್ಯಲು ಮುಂದಾಗದಂತೆ ಮಾಡುವುದುಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ಕೈಮುಗಿವ ನನ್ನ ಅಲ್ಲಿಗೆ ಕರೆಯೇ ಇಲ್ಲಿಂದ ಕಡಲಲ್ಲಿತೆಪ್ಪಸಾಗಿಸುವ ಎನಗೆ ಯಾರಿಲ್ಲ ನೀನಲ್ಲದೆಅಗ್ಗಿಯಲ್ಲಿಟ್ಟ ಮೇಣವಲ್ಲ ತುಪ್ಪ ನನ್ನ ಮನಕುಸಿಯುತ್ತಿದೆ ಕೊಳಲೂದು ಕಾರುಗುರುಳೇ.
ಕೈಮುಗಿವ ಫಣಿಮಾಲೆ ಸುಳಿಸಿಬೆಸೆದು ತೊಡುವ ಜಡೆಯಾಡಿಬರುವ ನಿನ್ನ ಚೆಲುಮುಖಾಂಬುಜನಯನದಿಂದೆನಗೆ ತೊಡಬೇಕು ಕರುಣಾಕಲಶಗಡಲೇ.
ಕೈಮುಗಿವಡಿಯನ ನೀನೀ ಕೈತವನೆಲೆಯಿಂದೆತ್ತಿ ನಿನ್ನಡಿಯಲಿ ಕೈಯಲೆತ್ತಿ ಕೂಡಿಸು ನಿನ್ನ ಕಂದನಿವನೆಂದು ನೆನೆದು ನಿನ್ನ ಭರವೇ.
ಕೈಯೊಂದು ಗೈವುದದರಂತೆ ಗೈವುದು ಕಾಲು ಅಯ್ಯೋ ಮಲದೊಡನೆ ನೀರೂ ಹೊರಬರುವುದು ಸುಳ್ಳನು ಅಪ್ಪುವುದು ಇದು ಹೀಗೆ ಕಾದಾಡು- ತಿರಲಾಗಿ ಹೇಗೆ ಶಿವನೇ ಸಿರಿಮೈ ನೆನೆಯುವುದು.
ಕೈವಲ್ಯದ ಕಡಲೊಂದಾಗಿ ವಿಮಲತೆಯಾಂತಿರುವುದೊಂದು ಹಾದಿ ಜೀವಿಗುಣ ಕೆಡುವುದಂದೇ ಮಲವಳಿವಂದಿದು ಪರಗತಿಯು.
ಕೊಟ್ಟದ್ದನ್ನು ಮತ್ತೆ ಅತ್ತಕಿತ್ತುಕೊಳ್ಳುವನದೆಷ್ಟುನಿಸ್ವನು, ಅವನಿಗಿಂತಬೇರೆ ನಿಸ್ವನಿಲ್ಲ ಈ ಧರಯಲಿ.