ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಅರಿಯಲ್ಪಡುವ ಇದು ಬೇರಲ್ಲ  ಅರಿವಪ್ಪುದು ಅರಸುವ ಹೊತ್ತು ಅರಿವಿದರಲ್ಲಿ ಒಂದಾದುದರಿಂದ ಅರಿವಲ್ಲದೆ ಎಲ್ಲೂ ಇಲ್ಲ ಬೇರೊಂದು.
--------------
ನಾರಾಯಣ ಗುರು
ಅರಿಯುತಿಹುದೆಂದು ಇಲ್ಲೆಂದು ಇಲ್ಲಿ  ಅರಿವುದರೊಳು ಎತ್ತಲಿಂದೆತ್ತ ಏಳುವುದು? ಅರಿಯಲ್ಪಡುವುದಾದರೂ ಅಲ್ಲ ಅರಿವಲ್ಲೆಂದು ನಮ್ಮ ನೋಡಿದೊಡೆ ಇಲ್ಲಿ. 
--------------
ನಾರಾಯಣ ಗುರು
ಅರಿಯುತ್ತಿಲ್ಲಂದು ಒಂದೂ ಈ  ಅರಿಯಲ್ಪಡುವುದು ಉಂಡು ಹೋಗುವುದು  ಅರಿವಿನೊಳಿದು ಯಾವುದು ಅರಿಯುತ್ತಿಲ್ಲ ಅರಿವೆಂದೊಡೆ ಅದು ಬರುವುದೆಲ್ಲಿಂದ. 
--------------
ನಾರಾಯಣ ಗುರು
ಅರಿಯುವ ಮುನ್ನ ಯಾವುದೆಂದೊಡೆ ಅರಿವಲ್ಲದೆ ಒಂದೂ ಇಲ್ಲಿರದು ಅರಿವಳಿದುದಕ್ಕಾವ ಎಲ್ಲೆಯಿದೆ ಅರಿವಿಗೆಂದೊಡೆ ಒಂದೂ ಕಾಣೊಲ್ಲ ಇಲ್ಲಿ.
--------------
ನಾರಾಯಣ ಗುರು
ಅರಿವನ್ನು ಹೀಗೆ ಬಿಟ್ಟು ನಾನೂ ಇಲ್ಲ ಎನ್ನನು ಬಿಟ್ಟೊಡೆ ಅರಿವೂ ಇಲ್ಲ, ಪ್ರಕಾಶಮಾತ್ರವಹುದು; ಅರಿವರಿಯುವವನೆಂದು ಎರಡು ನೆನೆದೊಳು ತಿರುಳೊಂದೇ ಅದರಲ್ಲಿಲ್ಲ ವಾದವೇನೂ.
--------------
ನಾರಾಯಣ ಗುರು
ಅರಿವನ್ನೂ ಮಮತೆಗಧೀನಗೊಳಿಸಿ  ಹೇಳ್ವರಿದರ ಪರಮಾರ್ಥವ ನೆನೆಯದಂತೆ, ಹೇಳಿದರೂ ಆ ಪರತತ್ವವೆಂಬಹಾಗೀ- ಅರಿವು ಅನ್ಯವಾಗದು ಅರಿವವಂಗೆ 
--------------
ನಾರಾಯಣ ಗುರು
ಅರಿವನ್ನೂ ಮೀರಿ ಅರಿಯುವವ ತನ್ನ ಒಡಲೊಳು ಹೊಂದಿ ಹೊರಗೂ ಪ್ರಜ್ವಲಿಸುವ ತಿರುಳಿಗೆ ಕಣ್ಗಳೈದನು ಒಳಗಡಗಿಸಿ ಬಿರುಬಿರನೆ ಬಿದ್ದು ಬಾಗಿಯೋದಬೇಕು.
--------------
ನಾರಾಯಣ ಗುರು
ಅರಿವವನೆಂದು ಗೊತ್ತು  ಅರಿವೆಂದರಿಯುವನಿಗೆಂದೊಡೆ ಅರಿವೊಂದು, ಅರಿವವನೊಂದು ಎಂದು ಅರಿವುದರೊಳಿದು ಆರು, ಇದೆಂಟಾಗುವುದು.
--------------
ನಾರಾಯಣ ಗುರು
ಅರಿವಾದ ಅಂಕುಶದಿಂದ ಐದರಿವಾದ ಆನೆಗಳನ್ನು ಬಿಗಿದವನು ಮೋಕ್ಷನೆಲದಲ್ಲಿ ಚಿಗುರುವೊಂದು ಬೀಜವು
--------------
ನಾರಾಯಣ ಗುರು
ಅರಿವಾದ ಕಡಲಿಂದ ಬರುವೆಲ್ಲ ಒಡಲಿಗೂ ಬೀಜವೇ ಬಗೆ ಈ ನೀರ ನೆರೆಯೇ ಬೇರುತಾನಪ್ಪುದು.
--------------
ನಾರಾಯಣ ಗುರು
ಅರಿವಾದ ಕರ್ತಾರ ಗೈದ ಕಮ್ಮಟವೇ ಬಗೆ ನೆನೆದೊಡೆ ಕಮ್ಮಟವಾಂತು ಮತ್ತೆ ಮಾರ್ಪಡುತ ಬರುವುದೀ ಬಂದುದೆಲ್ಲವೂ.
--------------
ನಾರಾಯಣ ಗುರು
ಅರಿವಿಂಗಳತೆಯಿಲ್ಲದೆ ಯಾವು- ದರಿವುದರಿವಾಗಿ ಅದೂ ಬೆಳಗುತಿಹುದು; ಅರಿವಿನೊಳು ಏಳುವ ಕನಸಿಲ್ಲಿ ಅರಿವಾಗುವಂತೆ ಇದೆಲ್ಲವಲ್ಲಿ.
--------------
ನಾರಾಯಣ ಗುರು
ಅರಿವಿಂಗೆ ಎಡೆಯೊಂದುಂಟು ಅರಿಯಲ್ಪಡುವುದಕ್ಕಿಲ್ಲ ಬೇರಾಗಿ ಅರಿವೆನಲು ನೆನೆದೊಡೆ  ಅರಿಯಲ್ಪಡುವುದದು ಏರುವುದು ಯಾವುದಲ್ಲಿ?
--------------
ನಾರಾಯಣ ಗುರು
ಅರಿವಿಂದ ತುಂಬುತ್ತಲೆಲ್ಲ ಅರಿವ ಪರದೈವತಂ ಹಂಚಿ ಬೇರೆಬೇರೆಯಾಗಿ ನೀಡಿತ್ತು ಮುನ್ನಿನಂತೆ ಈ ವಿಶ್ವವೆಲ್ಲವೂ
--------------
ನಾರಾಯಣ ಗುರು
ಅರಿವಿಗೆ ತುಂಬುವಿಕೆಯಿರಲಾಗಿ ಅರಿವಲ್ಲದಿರುವುದೆಲ್ಲಿರುವುದು ಅರಿವ್ಯಾವುದು ಇಲ್ಲಿಂದದು ಹೋಗಿ ಅರಿವುದದೂ ಇದೆಲ್ಲಿರುತ್ತಿಹುದು? 
--------------
ನಾರಾಯಣ ಗುರು