ಪ್ರಾರಂಭ ಪದದ ಹುಡುಕು
ನೆನೆದೊಡೆ ಬಗೆಬಗೆಗೆ ತಕ್ಕ ಮೈಬಗೆಬಗೆಯ ಶಬ್ದವೂಗಂಧವೂ ಸವಿಯೂ ಕಾವೂತಣುವೂ ನೋಟವೂ.
ನೆನೆವುದೂ ಮಾಡುವುದೂ ಬುದ್ಧಿಯಿಡುವುದದೆಲ್ಲವೂ ಎಂದಿಗೂ ಸಫಲವಾಗುವುದು ಏನನ್ನೂ ಕೊಲ್ಲದವನಿಗೆ
ನೆಪಗಳನ್ನೊದರಿ ಜಾರಿಕೊಳ್ಳದೆ ನಿನ್ನ ಕಿಚ್ಚದರಲ್ಲಿಟ್ಟು ಕರಗುವ ಮೈಣದಂತೆ ಚರಣದ್ವಯದಲ್ಲಡಗುವುದಕ್ಕೆ ನೀ ದಾರಿಯನು ತೋರೊ ವಾಮದೇವ ಪಾಹಿ.
ನೆರಳೊಂದು ಬಿಂಬವಪೇಕ್ಷಿಸದೆ ನಿಲ್ವುದಿಲ್ಲಏಳುವ ಜಗವು ಬಿಂಬರಹಿತವಾದ್ದರಿಂದನೆರಳೂ ಅಲ್ಲವಿದು ನಿಜವೂ ಅಲ್ಲ ಪಂಡಿತಬರೆದಿಡುವ ಫಣಿಯಂತೆ ಕಾಣ್ವುದೆಲ್ಲ.
ನೆಲದೊಡನೆ ನೀರದರಂತೆ ಗಾಳಿ ಬೆಂಕಿಬಯಲು ಅಹಂಕೃತಿ ವಿದ್ಯೆ ಮನವು ತಾನುಅಲೆಗಳು ಕಡಲು ಎಂದಲ್ಲ ಎಲ್ಲಲೋಕಗಳೂ ಎದ್ದರಿವಾಗಿ ಮಾರ್ಪಡುವುದು.
ನೆಲೆಯಿಲ್ಲದೆ ಬಿರುಗಾಳಿ ಅಲೆಯುವಂದದಿ ಸೆಟೆದುಬರುವ ಇರುಳೋ ಅಲೆಯನು ತಲೆಯಲಿ ಧರಿಸಿ ಅಲೆಯುತಿಹುದು ತಾನು ಹೊದ್ದಿರುವ ತೊಗಲೇ.
ನೆಲ್ಲಿಗೆ ನೀರು ಬಿಟ್ಟೊಡೆ ಹುಲ್ಲಿಗೂ ಹೋಗಿಬಿಡುವುದುಕಲ್ಲಲ್ಲಂತೆ ನೀರು ನೆಲ್ಲಿಗೆಹೋಗುವುದ ತಡೆದೊಡೆ.
ನೋವುಂಟು ಅದಹೇಳಲು ತರವಲ್ಲದ ಮಗುವಿನಹಾಗಿಲ್ಲಿ ನಿರರ್ಥಕಧ್ವನಿಯಹುದೆನ್ನ ಮೊರೆತಆಲಂಬನವಾದೊಡೆಯೂ ತಾಯ್ಸಮನಾಗಿಂದೆನ್ನಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.