ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಅನ್ನ ವಸ್ತ್ರಗಳು ತಡೆಯಿಲ್ಲದಂತೆ ಕೊಟ್ಟು ನಮ್ಮನ್ನು ಧನ್ಯರಾಗಿ ಮಾಡುವಂಥ ನೀನೊಬ್ಬನೆ ನಮಗೆ ಒಡೆಯ
--------------
ನಾರಾಯಣ ಗುರು
ಅನ್ಯನ್ನ ಕಾರಣಾತ್ ಕಾರ್ಯಂ ಅಸದೇತದತೋ’ಖಿಲಂ ಅಸತಃ ಕಥಮುತ್ಪತ್ತಿ- ರನುತ್ಪನ್ನಸ್ಯ ಕೋ ಲಯಃ?
--------------
ನಾರಾಯಣ ಗುರು
ಅನ್ಯೇನ ವೇದಿತೋ ವೇತ್ತಿ ನ ವೇತ್ತಿ ಸ್ವಯಮೇವ ಯಃ ಸ ವರೀಯಾನ್ ಸದಾಬ್ರಹ್ಮ- ನಿರ್ವಾಣಮಯಮಶ್ನುತೇ.
--------------
ನಾರಾಯಣ ಗುರು
ಅಪಜಯವೊಂದೂ ಎನಗೆ ಬಾರದಂತೆ ತಪದಲ್ಲಿ ನಿರಂತರವೆನ್ನ ಮಲವೆಲ್ಲವೂ ಸಪದಿ ದಹಿಸಿ ಸುಖ ತಾರಲಿಕ್ಕೆನ್ನ- ಜಪಕುಸುಮಸಿರಿಮೈ ಜಯಹೊಂದಲಿ.
--------------
ನಾರಾಯಣ ಗುರು
ಅಪರನಿಗಾಗಿ ಅಹರ್ನಿಶ ಪ್ರಯತ್ನವು ಕೃಪಣತೆಬಿಟ್ಟು ಕೃಪಾಲು ಗೈವನು; ಕೃಪಣನು ಅಧೋಮುಖನಾಗಿಬಿದ್ದು ಮಾಳ್ಪ- ನಪಜಯಕರ್ಮ ತನಗೆ ಮಾತ್ರವಾಗಿ.
--------------
ನಾರಾಯಣ ಗುರು
ಅಪರವಿದೆಲ್ಲವನೂ ಪರಿಚಯಿಸಿ ಇದರೊಳಿದ್ದು  ಅಪಜಯವಾಗಿ ಬಂದುದಿದನು ಕಂಡರಿಯೊ ಮನವೇ ಜಪಮಾಲೆ ಅಂಗದಲ್ಲಿದ್ದು ಜಪಿಸುವೊಡಿಲ್ಲಿ ಉಪರತಿ ಬರುವುದು ಒಳಹೂವೊಳದುವೆ ಇಂಪು 
--------------
ನಾರಾಯಣ ಗುರು
ಅಮರವಾಹಿನಿ ಉಕ್ಕಿ ಬರುವ ತೆರೆ- ಗಮರವೆಂಬಂತಿರುವ ಫಣಗಳೂ ಸಮರಸದೊಳರಳಿಸಿ ಉರಗಗಳೊಡನೆ ಕೂಡಿ ಜಡೆಯಾಡಿ ಸನಿಹ ಬಾ ನೀ.
--------------
ನಾರಾಯಣ ಗುರು
ಅಮೃತ ಹರಿವ ತೆರೆಮಾಲಯಂತೆ ದೂಡುವ ತಿಮೃತಯುತ ಸಿರಿನುಡಿಯೆನ್ನ ಕಿವಿಗೆ ಕೆಂಡವುರಿದುಕ್ಕಿ ಏಳುವ ಮನದಕಿಚ್ಚಿಗೆ ಅಮೃತ ಸುರಿದಂತಿರುವ ನೋಟವೂ.
--------------
ನಾರಾಯಣ ಗುರು
ಅಯಾಚಿತಮಲಿಪ್ಸಯಾ ನಿಯತಿದತ್ತಮನ್ನಂ ಮುನಿಃ ತನೋಃ ಸ್ಥಿತಯ ಅನ್ವದನ್ ಪಥಿ ಶಯಾನಕೋ’ವ್ಯಾಕುಲಃ ಸದಾತ್ಮದೃಗನಶ್ವರಂ ಸ್ವಪರಮಾತ್ಮನೋರೈಕ್ಯತಃ  ಸ್ಫುರನ್ ನಿರುಪಮಂಪದಮುಪೈತಿ ಸಚ್ಚಿತ್ಸುಖಂ.
--------------
ನಾರಾಯಣ ಗುರು
ಅಯ್ಯೊ ಬಿದ್ದಳಲುವೀ ಹೊಲೆಯರಿಗೆ ನೀನೆನ್ನ ಮಯ್ಯನಿತ್ತು ಬೆಲೆಕಟ್ಟಿ ಮೆರೆವೆ ಮುನ್ನ ಕೈನೀಡು ದಡಸೇರಿಸಬೇಕೆನ್ನನೀ ಸುಳ್ಳಿಂದ ಬಂದು ಹೊಸಮೈಯನಪ್ಪಿಕೊಳಲ
--------------
ನಾರಾಯಣ ಗುರು
ಅಯ್ಯೋ ಈ ಬಿಸಿಲು ತಾಕಿ ಬೆಂದು ಕರಗಿ  ಬಾಡಿದ್ದೇನೆ ನೀನಲ್ಲದೆ  ಕೈ ನೀಡಲು ಕಂಡರೆ ಒಬ್ಬ ಕರುಣಾಮಯಿ  ಅವನು ಯಾರಹೋ  ಹಸಿವಾಂತೀ ಜನ ಕಡಲಲ್ಲಿ ಬೀಳುವ ಮುನ್ನ  ಹಬ್ಬಿ ಧರೆಯಲ್ಲಿ  ಸುರಿವಂತಾಗಲಿ ಹೆಮ್ಮಳೆ ಕೃಪೆಯಿಂದ  ಗಂಗಾನದಿಯ ಧಾಮವೇ 
--------------
ನಾರಾಯಣ ಗುರು
ಅಯ್ಯೋ ನೀನೆನ್ನೊಳಗೂ ಸುಳ್ಳೇ ಹೊರಗೂ ಹೊದ್ದು ಮೆರೆಯುವುದು ಮೈಯಾರಲು ನಾ ಬಂದೆನು ಕೈಹಿಡಿಯುತ ನೀಗಿಹೋಗುವುದಿನ್ನು.
--------------
ನಾರಾಯಣ ಗುರು
ಅರಣಿ ಕಡೆದೇಳ್ವ ಬೆಂಕಿಯಂತೆ ಹುಡುಕುವವ-  ರೊಳಿದ್ದು ಎಲ್ಲೆಮೀರಿ ಹೊಮ್ಮುವ ವಿವೇಕವು ಪರಮಚಿದಂಬರವಾಂತ ಭಾನುವಾಗಿ ನಿಂತು-  ರಿವುದಿದಕಾಗುವುದೆಲ್ಲವೂ ತುತ್ತು. 
--------------
ನಾರಾಯಣ ಗುರು
ಅರಸಿದೊಡೆ ನೀರಾಗಿಬಿಡುವುದು ತೆರೆಗಳು ಹಗ್ಗವಾಗುವುದು ಹಾವು ಮಣ್ಣಾಗುವುದು ಮಡಿಕೆ ನೇರವಾಗುವುದು ಲೋಕ ಅಲ್ಲದೊಡೆ ಉಂಟೆಲ್ಲವೂ  ಬೇರಾದ ನಿನ್ನ ಕಳಲನ್ನಾರಾಧಿಸಲು ಬಿಡು ಯಾರಿಂದ ವರವೊಂದು ನೇರಾಗಿ ಬಾರೆ ನೀ ಯಾರಿಲ್ಲ ಗತಿ ಬೇರೆ, ಹೇ ರಾಜಯೋಗಜನನೀ.
--------------
ನಾರಾಯಣ ಗುರು
ಅರಿಯಲ್ಪಡುವ ಇದಕೆ ಒಲಿದು ಈ  ಅರಿವೇಳು ಒಂದಿಲ್ಲಿ ತಾನು ಎಂಟಾಗಿ  ಅರಿವು ಹೀಗೆ ಬೇರುಬೇರಾಗಿ ಅರಿಯಲ್ಪಡುವುದು ಬಿಡಿಸಿದೊಡೆ.
--------------
ನಾರಾಯಣ ಗುರು