ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಹೆಸರೂ ಪ್ರತಿಭೆಯೂ ಯಾರೂ ಒಳ್ಳೆಯವರು ಬಿಡಲೊಲ್ಲರು ನಿಜವಿರದ ಕೃಪಣಿರಿಗಿನಿತು ಸೇರದು, ನೇರ ವಿಪರ್ಯಯ.
--------------
ನಾರಾಯಣ ಗುರು
ಹೇಯೋಪಾದೇಯತಾ ನಹ್ಯ- ಸ್ಯತ್ಮಾ ವಾ ಸ್ವಪ್ರಕಾಶಕಃ ಇತಿ ಮತ್ವಾ ನಿವರ್ತೇತ ವೃತ್ತಿರ್ನಾವರ್ತತೇ ಪುನಃ
--------------
ನಾರಾಯಣ ಗುರು
ಹೇಲಯಾಸ್ವದಿತ ಹಾಲಯಾಕುಲಿತಕಾಲಯಾ ಮಲಿನ ಶ್ರೀಲಯಾ ವ್ರೀಲಯಾ ಪಲಿತ ಫಾಲಯಾ ವಿಮಲಮಾಲಯಾ ಸಮರವೇಲಯಾ ಸ್ಥೂಲಯಾ ವಪುಷಿ ಬಾಲಯಾ ಕುಶಲಮೂಲಯಾ ಜಲದಕಾಲಯಾ  ಪಾಲಯೇತಿ ಪರಿಪಾಲಯೇತಿ ಪರಿಪಾಲಯೇತಿ ಜಪಮಾಲಯಾ.
--------------
ನಾರಾಯಣ ಗುರು
ಹೇಲಾದಾರಿತದಾರಿಕಾಸುರಶಿರಃ ಶ್ರೀವೀರಪಾಣೋನ್ಮದ- ಶ್ರೇಣೀಶೋಣಿತಶೋಣಿಮಾಧರಪುಟೀಂ ವೀಟೀರಸಾಸ್ವಾದಿನೀಂ ಪಾಟೀರಾದಿ ಸುಗಂಧಿಚೂಚುಕತಟೀಂ ಶಾಟೀಕುಟೀರಸ್ತನೀಂ ಘೋಟೀವೃಂದಸಮಾನಧಾಟಿಯುಯುಧೀಂ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಹೇಳಬೇಕೆಂದಿಲ್ಲವಲ್ಲ ಅರಿವಾದಡಿ ಎನ್ನಮುಡಿಗೆ ಮುಡಿಯುವುದೇ ಅರಿವು ಕಳಚಿ ಒಂದಾಗಿಬರುವುದು ಎಂದರಿಯದೆ ಒಂದಾಗಿದ್ದು ವೈದಿಕನೇ.
--------------
ನಾರಾಯಣ ಗುರು
ಹೊಂಗನ್ನಡಿಯ ಬಾಡಿಸುವ ಗಲ್ಲವೆರಡರ  ಬೆಳಕಲಿ ಓಲೆ ಕರ್ಣಬಿಂಬ ಕಣ್ಣಲಿ ಕಾಣಲಿ ಬಯಕೆ ಗಿಣಿಯ ಹವಳದುಟಿ ಸೋಲುವ ಮೂಗೂ ಬೆಣ್ಣೆಯ ತುಂಡಿಗಿರುವ ಬಯಲ ಬೆಳಕು ಕಳೆವ  ಗದ್ದವೂ ಹುಡುಕುವ ಈಯೆನ್ನ  ಪುಟ್ಟ ಮರಿಜೇನೇ, ತಪ್ಪ ಕ್ಷಮಿಸು ಇವ  ಗೈದದೂ ಗೈವುದೂ ನೀ
--------------
ನಾರಾಯಣ ಗುರು
ಹೊಗೆಯೇ ಧೂಳೇ ಹೊರಗೇ ಒಳಗೇ ಬಯಲೇ ತುಂಬಿದ ಹೊಸಮಳೆಯೇ ಇಹವೇ ಪರವೇ ಎಡೆಯೇ ಸುಖನೀಡುವುದೊಲಿದು ನೀಯೊಳಗೇ.
--------------
ನಾರಾಯಣ ಗುರು
ಹೊಟ್ಟೆ ನೊರೆವುದಕ್ಕುಂಟು ಕಂಡದೆಲ್ಲವೂ ಏರಿ ಉರುಳಿ ಸಾಯುವದರ ಮುನ್ನ ದಯೆ ತಿರುಮೈ ಮನದೊಳಿಟ್ಟು ಭಕ್ತಿಯ ಹಗ್ಗ ಕೊಟ್ಟು ಮೇಲೆತ್ತೋ ನನ್ನ ಮನವ.
--------------
ನಾರಾಯಣ ಗುರು
ಹೊನ್ನವಿಲನೇರಿ ಶೂಲವಿಡಿದು- ಕನಿಕರದಿ ಕಣ್ಣೆರಡು ನೀರತುಂಬಿ ಹುಟ್ಟುಸಾವಿನ ಸುಡುಗಾಡೊಳಾಡಿ ಬೂದಿ- ತೊಟ್ಟ ತಿರುಮೈ ನೆರೆನಿಲ್ಲಲಿ ಸದಾ ನನ್ನಲಿ.
--------------
ನಾರಾಯಣ ಗುರು
ಹೊರವಿಷಯ ಮೆರೆಯುತಿದೆ ಬೇರುಬೇರಾಗಿ ಅಳತೆಯಿಡುವ ಇಂದ್ರಿಯವಾಂತು ತನ್ನ ಧರ್ಮ ಜಳತೆ, ಅದಿಲ್ಲಿ ದಿಗಂಬರಾದಿ ನಾಮಾ- ವಲಿಯೊಂದಿಗೆದ್ದರಿವಾಗಿ ಮಾರುತಿಹುದು. 
--------------
ನಾರಾಯಣ ಗುರು
ಹೊಸ ಮಾವಿನಹಣ್ಣು ಹೊಸ ಸುಧೆಯೇ ಗುಡವೇ ಮಧುವೇ ಮಧುರ ಫಲವೇ ರಸವೇ ವಿಧಿಮಾಧವರಾದಿ ಅರಸುವೆನ್ನ ಪತಿಯೇ ಪದಪಂಕಜವೇ ಗತಿಯೇ.
--------------
ನಾರಾಯಣ ಗುರು
ಹೊಸ ಹೂವನು ಕಿತ್ತು ನಾ ನಿನ್ನ  ಮತಿಯೊಳು ನೆನೆಯುತ್ತಲೊಮ್ಮೆಯಾದರೂ ಗತಿಗಾಣುವಂತೆ ಪೂಜೆಯ ಮಾಡಲಿಲ್ಲ ಅದರ ಶಿಕ್ಷೆಯೇನೋ ಇದು ದೇವನೇ!
--------------
ನಾರಾಯಣ ಗುರು
ಹೊಸಮರವೇ ಹೂಬಳ್ಲಿ ಬಂದು ಅದುವಿದೆಲ್ಲ ಹರಡಿದ ನಿನ್ನಕೃಪೆಯೇ ಪದಸುಮದೆಣೆಗಳೆನ್ನ ತಲೆಯಲಿ ತಾಗಬೇಕೆನ್ನಮೈ ಬೆರೆತುಕೊಳ್ಳುವುದೇ.
--------------
ನಾರಾಯಣ ಗುರು
ಹೋಗದಿರಿನ್ನು ನಿನ್ನಡಿಯಲಿ ಸಾಯಲಿ ಅಲ್ಲದಿರೆ ಇವನಿಂದೂ ಬೇಯುವ ಇರುಳಕಡಲಲ್ಲಿ ಬಿದ್ದು ಆಕುಲವಾಗುವುದು ಅದಹೇಳಬೇಕೇ.
--------------
ನಾರಾಯಣ ಗುರು
ಹೋಗುವ ಮಣ್ಣೊಂದಿಗೆ ಕಿಚ್ಚು ನೀರು ಪಾಲದರಂತೆ ಮರುತನಗೂಡಿ ಬಯಲೂ ನಾಕದೊಂದಿಗೊಂದುನರಕ ಹೋಗಿ ಒಂದಾಯ್ತುಯ್ಯೊ ನುಂಗಿದೆಯಡಿಯನೆ ನೀ.
--------------
ನಾರಾಯಣ ಗುರು