ಮಾನವರೆಲ್ಲರೂ ಒಂದೇ ರೀತಿ ಬಯಸುವುದು ಸುಖವನ್ನೇ. ಲೌಕಿಕವಾಗಿಯೂ ವೈದಿಕವಾಗಿಯೂ ನಡೆಸಲಾಗುತ ಬಂದಿರುವ ಎಲ್ಲ ಸಭೆಗಳ ಲಕ್ಷ್ಯವೂ ಇದೇ ಆಗಿದೆ. ಕ್ಷಣಭಂಗುರಗಳಾದ ವಿಷಯಸುಖಗಳಿಗಿಂತ ಮಾನವಾತ್ಮಕ್ಕೆ ಹೆಚ್ಚು ಪ್ರಿಯವಾಗಿ ಕಾಣುವುದು ಸುಚಿರವಾಗಿ, ಶಾಶ್ವತವಾಗಿ ಬೆಳಗುವ ಸುಖದಲ್ಲಿಯೇ. ಇದನ್ನು ಲಕ್ಷ್ಯವಾಗಿಟ್ಟೂಕೊಂಡು ಮಾನವಾತ್ಮವು ಮಹತ್ತರವಾದ ಪಯಣವೊಂದನ್ನು ಬೆಳೆಸುತ್ತಿದೆ. ಆಯಾ ಸಮುದಾಯಗಳು ಅದೆಷ್ಟು ಆಂತರಿಕ ಸುಧಾರಣೆಯನ್ನು ಗಳಿಸುತ್ತವೆಯೋ ಅಷ್ಟರಮಟ್ಟಿಗೆ ಈ ಸುಖಪ್ರಾಪ್ತಿಯ ಆಳವೂ ಉತ್ತಮಗೊಳ್ಳುತ್ತಿರುತ್ತದೆ.
ದೈಹಿಕವಾಗಿಯೂ ಮಾನಸಿಕವಾಗಿಯೂ ಆತ್ಮೀಯವಾಗಿಯೂ ಉಳ್ಳ ಎಲ್ಲ ಶ್ರೇಯಸ್ಸುಗಳೂ ಸಮುದಾಯವೊಂದಕ್ಕೆ ಬಂದುಕೂಡುವುದರಲ್ಲಿ ಸಮುದಾಯದ ಸದಸ್ಯರ ಧರ್ಮನಿಷ್ಠೆ ಹಾಗು ಸದಾಚಾರ ಬಹು ನೆರವಾಗುತ್ತದೆ. ಇವುಗಳನ್ನು ಸಮುದಾಯದಲ್ಲಿರುವ ಎಲ್ಲ ಜನರಿಗೂ ದೊರಕುವಂತೆ ಮಾಡಲು ಆರಾಧನೆಯ ಸ್ಥಳಗಳೂ ಆಲಯಗಳೂ ಬಹಳ ಉಪಯುಕ್ತವೆಂದು ಕಂಡುಬಂದಿದೆ. ಆದರೆ, ಅವೆಲ್ಲ ಉಂಟಾಗಲು ಸಮುದಾಯದ ಸದಸ್ಯರ ಆರ್ಥಿಕ ಏಳಿಗೆಯು ಅತ್ಯಂತ ಅಗತ್ಯವಾಗಿದೆ. ಇದಕ್ಕೆ ಆರಂಬ, ವ್ಯವಸಾಯ, ತಾಂತ್ರಿಕ ಶಿಕ್ಷಣ ಮೊದಲಾದವು ಪರಿಷ್ಕೃತವಾಗಿರಬೇಕು.
ಲೌಕಿಕ, ಅತ್ಮೀಯಗಳೆರಡೂ ಪರಸ್ಪರ ಬೇರೆಯಲ್ಲ. ಅವೆರಡೂ ವಾಸ್ತವದಲ್ಲಿ ಒಂದೇ ಉದ್ದೇಶದಿಂದ ವರ್ತಿಸುತ್ತವೆ. ದೇಹದ ಎಲ್ಲ ಅಂಗಗಳೂ ಕೂಡಿ ವರ್ತಿಸುವುದರಿಂದ ದೇಹವು ಸುಖವನ್ನು ಅನುಭವಿಸುತ್ತದೆ. ಅಂತೆಯೇ, ಮಾನವಸಮುದಾಯದ ಪರಮಲಕ್ಷ್ಯವಾದ ಸುಖಪದವನ್ನು ಪಡಯಲು ಆತ್ಮೀಯವಾಗಿಯೂ, ಲೌಕಿಕವಾಗಿಯೂ ಇರುವ ಎಲ್ಲ ವಿಧದ ವ್ಯವಹಾರಗಳ ಏಕೀಕೃತ ಕಾರ್ಯಾಚರಣೆ ಅಗತ್ಯವಾಗಿದೆ.