ಪ್ರಾರಂಭ ಪದದ ಹುಡುಕು
ಹಾದಿಯೊಳಗಿದ್ದುಬರುವ ಬಾಧೆಯೆಲ್ಲ- ವಳಿಯಬೇಕ್ಕೆಂದೊಮ್ಮೆಯಾದರು ನನಗೆ ಕಣ್ಗಳಿಂದಮೃತ ಸೋರಿಹರಿದು ನಿನ್ನ ಚರಣವೆರಡನೂ ಕಂಡಾಡಲಿಕೆ ಬಯಕೆ.
ಹಾರಯಾ ಜಲದನೀರಯಾಶಮಿತಮಾರಯಾತಪ ವಿದಾರಯಾಭೂಮಯಾಧಿಕವಿಕಾರಯಾ ಚಕಿತಚೋರಯಾ ಸಕಲಸಾರಯಾವೀರಯಾಚ ಶಿವದಾರಯಾ ಮುಲಿತಹೀರಯಾ ನಮಿತಶೂರಯಾಪಾಲಯೇತಿ ಪರಿಪಾಲಯೇತಿ ಪರಿಪಾಲಯೇತಿ ಜಪಮಾಲಯಾ.
ಹಾವೂ ಎಲುಬೂ ಎಡೆಗೆಡೆಗೆ ತೊಟ್ಟ,ಕಾರ್ಮುಗಿಲುಕಂಡು ಬಾಗುವಂತ ಕೊರಳೂ ವರದಮಭೀತಿಕುರಂಗಶೂಲಪಾಣಿ-ತಿರುಮಲರು ನಾಲ್ಕೂತೊಟ್ಟು ಕಾಣಬೇಕು.
ಹಿಂದುಮುಂದರಿಯದೆ ಬಳಲುತಿರುವೆನ್ನ ನೀ ಭಗವತಿಯೊಂದಿಗೆ ಮೆರೆದುಬಂದು ಎದೆ ಕರಗುವಂತೆ ನೋಡು ಒಮ್ಮೆ ನನ್ನ ಅಘವೆಂದಿಗೂ ಹತ್ತಿರ ಬರದಂತೆ ಇನ್ನು.
ಹಿರಿದಾದ ಬಾನಲ್ಲಿ ಬಾಳುವವರಿಗೆ ತಲೆಯಾದ ಇಂದ್ರ ಧರೆಯಲಿ ಜಿತೇಂದ್ರಿಯನ ಶಕ್ತಿಗೆ ಸಲ್ಲುವಂತೊಬ್ಬ ಸಾಕ್ಷಿಯು
ಹಿರಿದೂ ಕಿರಿದೂ ನಡುಮಧ್ಯವೂ ಆಗಿ ಅಲೆನೀಗಿ ಏಳುವ ಚಿದಂಬರವೇ ಮಲದ ಮಾಯೆಯೊಳು ಮೋಹಗೊಂಡು ಮನ ನೆಲೆಬಿಟ್ಟು ಸೆಟೆದಲಯದಂತೆ ಪೊರೆಯೋ.
ಹಿರಿಯವೇದಗಳು ನಾಲ್ಕನೋದಿ ಮುನ್ನಕಾರ್ಮುಗಿಲ್ವರ್ಣಂಗೆ ಹಂಚುತ ನೀಡಿಪರವನ್ನು ವಳ್ಳುವರ್ನಾಲಗೆಮೇಲೆ ನುಡಿದಪರಿಮಳಭಾರತಿ ಕಾಯೇ ನಿತ್ಯ ನೀ.
ಹುಟ್ಟಿ ಆದಿಯಿಂದ ಒಂದಾಗಿಬಂದಿಲ್ಲಿ ಸೃಷ್ಟಿಯೂಸ್ಥಿತಿಯೂ ನಾಶವೂ ಮಾಳ್ಪಸೂರ್ಯ ನೀಗಿಸು ರಶ್ಮಿಯನ್ನು
ಹುಡುಕಿದೊಡೆ ಈ ಜಗವಿಲ್ಲ ಇದವಿದ್ಯೆ, ತತ್ವ ತಿಳಿಯದವರಿಗಿದು ಜಗವಾಗಿ ಮೆರೆವುದು ಭ್ರಮೆಯಿಂದ ಬಳಿಯಲ್ಲಿ ಬೆಳಕುರಿವೊಡಿಲ್ಲ ಪ್ರೇತವಲ್ಲಿ ಕತ್ತಲೆಗೆ ಹೆದರುವಂಗಿರುಳೇ ಪ್ರೇತವಹುದು
ಹುಸಿ ನುಡಿವರು ಬಗೆಯ ಹೇಳುವುದುಕುಂದೆಂದು ನೆನೆಯುತ್ತಲಾಗಿಕುಂದಿಲ್ಲ ಬಗೆಯೊಂದೇಯಾರೂ ನುಡಿಯಬಾರದು ಹುಸಿಯ.
ಹೆಚ್ಚಿದಕಾಂತಿಬೆರೆತ ತ್ರಿವಲಿಯ ಕೆಳಗೆ ಕಟಿಸ್ಥಲದಲ್ಲಿಸುತ್ತಿದ ಕಾಂಚನಕಾಂಚಿತುಂಬಿದ ಅರಿವೆಯೂ ಕಟಿಸೂತ್ರವೂರೂಢವಾಗಿಬೆಳಗುವ ತಿರುದೊಡೆ ಮಂಡಿಯೂ ಕಾಲ್ಗಳಪ್ರೌಢಿಯೂ ಕಾಣಬೇಕೆನಗೆ ಚಂದದಲಿ ಷಣ್ಮುಖ ಪಾಹಿಮಾಂ
ಹೆಸರು ಕಾಪಾಡುವ ಒಳ್ಳೆಯ ನಾರಿಯಿಲ್ಲದಿದ್ದೊಡದೇ ಧರೆಯಲ್ಲಿ ಸಿಂಹಯಾನ ಗಾಂಭೀರ್ಯ ತನ್ನಲಿ ಬಾರದು
ಹೆಸರು ಸಾವಿರ ಪ್ರತಿಭೆ ಸಾವಿರ ಇದರೊಳಿಲ್ಲಿ ಏಳುವ ವಿಷಯಗಳ ಸಾವಿರ ಪ್ರಪಂಚವುಹುಡುಕದೊಡೆ ದಿಟವಿದು ಕನಸು ಎಚ್ಚರಿಸುವ ತನಕದಿಟ ಎದ್ದಮೇಲೆದ್ದವನಷ್ಟೆ ಉಳಿವ.
ಹೆಸರು, ಊರು, ಕಾಯಕ ಮೂರೂಸಲ್ಲುವುದು ಕೇಳಿರೈಯಾರು ನೀನೆಂದು ಕೇಳದಿರುದೇಹವೇ ದಿಟವ ಹೇಳುತಿರಲು.
ಹೆಸರುವೆತ್ತ ಈ ಪ್ರಪಂಚದಲ್ಲಿ ಮಳೆ ಬರದಂತಾದೊಡೆ ದಾನ ತಪಸ್ಸುಗಳೆರಡಕ್ಕೂ ಸ್ಥಾನವಿಲ್ಲದಂತಾಗುವುದು.