ಪ್ರಾರಂಭ ಪದದ ಹುಡುಕು
ಮನೋಮಯಮಿದಂ ಸರ್ವಂನ ಮನಃ ಕ್ವಾಪಿ ವಿದ್ಯತೇಅತೋ ವ್ಯೋಮ್ನೀವ ನೀಲಾದಿದೃಶ್ಯತೇ ಜಗದಾತ್ಮನಿ.
ಮನೋಮಾತ್ರಮಿದಂ ಚಿತ್ರ-ಮಿವಾಗ್ರೇ ಸರ್ವಮೀದೃಶಂಪ್ರಾಪಯಾಮಾಸ ವೈಚಿತ್ರ್ಯಂಭಗವಾಂಶ್ಚಿತ್ರಕಾರವತ್.
ಮನ್ಯೇ ವದಾಮಿ ಗೃಹ್ಣಾಮಿಶ್ರುಣೋಮೀತ್ಯಾದಿ ರೂಪತಃಕ್ರಿಯತೇ ಕರ್ಮ ಪರಮಾ-ತ್ಮನಾ ಚಿತ್ತೇಂದ್ರಿಯಾತ್ಮನಾ.
ಮರಣವೂ ಇಲ್ಲ ಜನನವಿಲ್ಲ ಬಾಳೂನರಸುರರಾದಿಗಳೂ ಇಲ್ಲ ನಾಮರೂಪಮರುವೊಳಡಗಿದ ಮರೀಚಿನೀರಂತೆನಿಲ್ವೊಂದು ತಿರುಳು ತಿರುಳಲ್ಲಿದು ನೆನೆಯಬೇಕು.
ಮರಳು ಅಳತೆಬಿಟ್ಟುಸುರಿದ ಬಾವಿಮೇಲೆಸಾಲುಸಾಲಾಗಿ ಅಲೆಬೀಸುತ್ತಿರುವ ಹಾಗೇಅನೃತಪರಂಪರೆ ಬೀಸಿ ಅಂತರಾತ್ಮನನ್ನುಒಳಗೇ ಬಹುರೂಪವಾಗಿಸುವುದು.
ಮರೀಚಿಕಾವತ್ ಪ್ರಾಜ್ಞಸ್ಯಜಗ್ಗದಾತ್ಮನಿ ಭಾಸತೇಬಾಲಸ್ಯ ಸತ್ಯಮಿತಿ ಚಪ್ರತಿಬಿಂಬಮಿವ ಭ್ರಮಾತ್.
ಮಲಜಲವುಂಟಪಾರ ತುಂಬಿ ಮುನ್ನಿನ ಮಲವದರೊಳ್ ಮುಳುಗಿ ಮೊಳೆದೋರಲು ಬೆಳೆನೆಲವಲ್ಲಿ ಬಿತ್ತಿ ಬೆಳೆದುಕೊಯ್ದು ಲೋಕರು ಭುಜಿಸಿ ಅಲೆವುದು ಕಷ್ಟವಯ್ಯ.
ಮಲರಕಂಪಂತೆ ಮೂರೂ ಲೋಕ- ದೊಳೊಂದಾಗಿ ಹರಡಿ ತುಂಬಿ ಬೀಸಿ ಕಲಶಜಲಪ್ರತಿಬಿಂಬನಭದಂತೆ ಹಲದರೊಳೆಲ್ಲವೂ ನೆರೆದ ಕರುಣವೇ ಜಯ.
ಮಲರಡಿಯೆರಡಲೂಯಿಟ್ಟ ಹೂವಗೆಜ್ಜೆ- ಗೊನೆಗಳು ಪೋಣಿಸಿ ಕುಣಿವ ಹೊತ್ತು ಕಲಕಲಯೆಂದು ಮೊಳಗುವ ಗೆಜ್ಜೆಯ ಸದ್ದು ಕಿವಿಯೆರಡಲೂ ನಾ ಕೇಳ್ವೆನೆಂದು.
ಮಲೆಮಗಳುಂಟು ಬಹುದೂರದಲ್ಲಲ್ಲದೆಮೊಲೆಬಳುಕಿಯಮೃತ ಸುರಿದು ಮುದದಿಮಲೆಮೇಲಿಂದ ಹರಿವ ತೊರೆಗಡಲೆನ್ನತಲೆಮೇಲೆಂದಿಗೆ ಹರಿವುದು ಶಂಕರನೇ.
ಮಲೆಮೇಗಳಿಂದು ಬರುವೊಂದು ಬಂಡೆಯಂತೆ ಮೊಲೆಯುಂಬುದು ಕಳೆದಮೇಲೆನ್ನ ಮನವು ಮದನಶರದೊಂದಿಗೆ ಸೆಣೆಸುತ್ತ ನಿನ್ನ ಮಲರಡಿಗಳನು ಮರೆತೆ ಜಗದೀಶ ನಾನು.
ಮಲೆಯದರಲ್ಲುಂಟು ಮದ್ದು ಮೂರು ಹಾವೂಹುಲಿಯು ಅದಕ್ಕೆರಡುಕಡೆಯುಂಟು ಕಾಪುಹೊಲೆಯನೆತ್ತಿ ಭುಜಿಸಿದನರ್ಧವಿನ್ನೂಮೆರೆಯುವೆ ನೀನೂ ಎತ್ತಿಕ್ಕೊಳ್ಳೆದೆಯೇ.
ಮಲೆಯಮೇಲೇರಿ ಮೃಗಗಳ ಕೊಂದು ತೊಗಲತೆಗೆದು ಕೊಡುವುದಕ್ಕಿಂದಿವನು ಬೇಡಬೇಡೆಂದು ನೆನೆದು ನಡೆದೊಡೆ ಹಲವು ನಗೆನುಡಿಯ ನುಡಿದು ನಗುವೆಯೋ
ಮಲ್ಲೀಕೃತತ್ರಿದಶಮಲ್ಲೀ ಸದಾ ಸುದತಿವಲ್ಲೀಕುಚಾಂಕಣಲಸತ್ಸಲ್ಲೀನ ಕುಂಕುಮರಸೋಲ್ಲೀನವತ್ಸ ಯುಧಿ- ಭಲ್ಲೀಸ್ಮಯೋ’ಸಿ ಧಿತಿಚೈಃ ಸ್ಫುಲ್ಲೀಕುರುಷ್ವ ಸ ಚವಲ್ಲೀತ ಗೋಥಿತಲ ವಲ್ಲೀ ವಿಲೋಲ ಬುಧಹೃದ್- ವಲ್ಲೀನಿವಾಸ ಮಮ ಸೋಲ್ಲೀನಕೇಕಿಹಯಸಲ್ಲೀಲಪಾ ಹೃದುದಜಂ
ಮಳೆ ಸುರಿಯದಂತಾದೊಡೆ ಬಾನವರಿಗೂ ಮನುಜರಿಂದ ಮಖವೂ ಪೂಜೆಯೂ ಧರೆಯಿಂದ ಹೋಗದಂತಾಗುವುದು