ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಬಳುಕುನಯನೆಯರ ಚೆಲುವ ನೋಡಿನಿಲ್ವ ನೆಲೆ ಹಣೆಸಿರಿನೋಟದಿಂದ ಹರಿದು ಹಲವು ಲೀಲೆಗಳ ತೊಡರದೆ ಪಾಲಿಸಿ ದಯೆಯಿಂದ ನಿನ್ನ ಪದಪಂಕಜವ ನೀಡು.
--------------
ನಾರಾಯಣ ಗುರು
ಬಹುದದರಲ್ಲೊಂದು ನೆನೆದೊಡೆ ಕರಳು ಕರಗಿ ಹರಿವಪ್ರೀತಿ ಕಡಿವುದು ನೆನೆಯದಿದ್ದೊಡೆ ಇವೊಂದನ್ನೂ ಒಂದೇ ತಿರುಳಾಗುವನು ಅಂದೇ ಅವನು.
--------------
ನಾರಾಯಣ ಗುರು
ಬಾಗಿಲೈದೂ ಗೆದ್ದವನ ನೀತಿಯು ನಿಜವೂ ಆಗುವ ದಾರಿಯಲಿ ಹತ್ತಿ ನಿಲ್ಲಲು ಬಾಳುವನು ಅವನೆಂದಿಗು
--------------
ನಾರಾಯಣ ಗುರು
ಬಾನಿಂದ ಮಳೆಯ ಹನಿ ಬೀಳದಿದ್ದೊಡೆ ಎಲ್ಲಿಯೂ ಹಸಿರು ಹುಲ್ಲೊಂದೂ ಕೂಡ ಕಾಣಲಾಗದು ಕಣ್ಣೊಳು.
--------------
ನಾರಾಯಣ ಗುರು
ಬಾರದು ಹೇಳಲು ಪ್ರಾಣ ದೊಂದಿಗೆ ಹೆಬ್ಬಯಲಾದ ನಿನ್ನ ಮಹಿಮೆ ಕಿರಿದೂ ನಿನ್ನ ಕೃಪೆಯಿಲ್ಲದೆ ಸುಮ್ಮನೆ ನಾನಿಲ್ಲಿರುವೆನೇ ಶಿವನೇ.
--------------
ನಾರಾಯಣ ಗುರು
ಬಾಲಾರ್ಕಾಯುತಕೋಟಿಭಾಸುರಕಿರೀ- ಟಾಮುಕ್ತಮುಗ್ಧಾಲಕ- ಶ್ರೇಣೀನಿಂದಿತವಾಸಿಕಾಮರುಸರೋ- ಜಾಕಾಂಚಲೋರುಶ್ರಿಯಂ ವೀಣಾವಾದನಕೌಶಲಾಶಯಶಯ- ಶ್ರ್ಯಾನಂದಸಂದಾಯಿನೀ- ಮಂಬಾಮಂಬುಜಲೋಚನಾಮನುದಿನಂ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಬಾವುಗಳಂತೆ ಹುಟ್ಟಿ ಎದೆಯಮೇಲೆ ಕರಳು ಕೀಳುವುದಕ್ಕೆ ಕಚ್ಚೆಕಟ್ಟುತ ತರನೋಡಿ ಬರುವ ಕಿಚ್ಚಿನ ಹಗೆಗೆನ್ನ ಇನ್ನೊಮ್ಮೆಯೂ ಕಳಿಸದಿರು ಮಹೇಶನೇ!
--------------
ನಾರಾಯಣ ಗುರು
ಬೀಜವೊಂದೇ ಹಲವಿಧವಾಗಿ ಮೆರೆಯುವುದಿ- ದರಲ್ಲಿ ಅರ್ಥಾಂತರವಿನಿತೂ ಇಲ್ಲ ಹೇಳಲಿಕ್ಕೆ. ಹಗ್ಗರೂಪವರಿಯದೆ ಇರುಳಿಂದ ಹೊಮ್ಮಿದ  ಹಾವು ನೆನೆವೊಡೆ ಹಗ್ಗದಿಂದ ಬೇರೆಯಹುದೆ
--------------
ನಾರಾಯಣ ಗುರು
ಬುಗುರಿಯನ್ನು ಬೆರೆಗುಗೊಳಿಸುವ ಭ್ರಮಣವೇಗದ ಮತಿಯಿಂದ ಬಂದು ಅಂಬರದಲ್ಲಿ ನಿಲ್ಲಲಿವನು ಶಕ್ತಿಹೀನನೆಂದು ಬಗೆಯುವುದು ನೀ ಒಲವಬೇಡಿ ಅಡಿಗಳಹೊಗಳಿ ನಿಲ್ಲುವ ಅಗತಿಗೆ ಸದ್ಗತಿಯಿಕ್ಕುವ ನಿನ್ನ ಪಾದದಲಿ ಲಯಿಸಿಕೊಳ್ಳಲು ನಿಯತ ವರವ ಕೊಡು ಮಂಗಲೇ.
--------------
ನಾರಾಯಣ ಗುರು
ಬುರುಡೆಯಲಿ ಹಚ್ಚಿ ರಂಧ್ರದ ಸಿರಿಬಯಲಿನತ್ತ  ಹೊಯ್ ಹೊಯ್ಯೆಂದು ಹೂಡುತ್ತ ಕುದುರೆಯ  ನಡುಬೀದಿಯಲ್ಲೋಡಿಸಿ ಬೇಗನೆ ಒಡಲಗೂಡಲ್ಲಿ ಅತಿಚಂಚಲ ಸುಳಿಯುವ ಪಂಚರಾಜರುಗಳು ಹೊರಡುವಮುನ್ನ ಗುಂಪುವಾದ್ಯದೊಡನೆ ಕೋಟೆಯೊಳಗೇರಿ ಸುಖಿಸಲು ನೀನು ನೀಡು ವರವ.
--------------
ನಾರಾಯಣ ಗುರು
ಬೆಳಕು ಮೊದಲಾದ ಹಣ್ಣೈದನುಂಡು ನಾರುವ ನಳಿಕೆಯಲ್ಲೇರಿ ನಯದಲ್ಲಿ ತಿರುಗಿಯಾಡುವ ಗಿಣಿಗಳೈದನ್ನು ಹರಿದು ಕೆಳಗೆಸೆಯುವ ಬೆಳಗಿನೊಡಲೆತ್ತಿಯೊಳಗೆ ಬೆಳಗಬೇಕು.
--------------
ನಾರಾಯಣ ಗುರು
ಬೆಳಕುಬೆಳದಿಂಗಳ ನುಂಗಿ ಕೆಂಡಬೆಳಗನಡುವೆ  ಕಾಲನೂರಿಹಿಡಿದಾ ನವಿಲಮೇಲಾಡುವ ಕಂದಾ  ಮರೆಯದಿರು ಮನೋಮೌನಬೀಡಿನ ಬೆಳಕೇ ರೈಲಿನ ವೇಗವನ್ನು ಜಯಿಸುವ ಜರೆನರೆ ಮೊದಲಾದ ಮೂಢರೂ ನಾನೂ ಕೂಡಿ ಈ ಜಯಿಲೊಳಿರಲಾರೆ  ಬೇಗನೆನ್ನ ಪರಮನೇ ಚಿತ್ಸುಖವನೀಡೋ ನೀನು.
--------------
ನಾರಾಯಣ ಗುರು
ಬ್ರಹ್ಮಮುಖಾಮರವಂದಿತಲಿಂಗಂ ಜನ್ಮಜರಾಮರಣಾಂತಕಲಿಂಗಂ ಕರ್ಮನಿವಾರಣಕೌಶಲಲಿಂಗಂ ತನ್ಮೃದುಪಾತುಚಿದಂಬರಲಿಂಗಂ
--------------
ನಾರಾಯಣ ಗುರು
ಬ್ರಹ್ಮೈವಾಹಂ.
--------------
ನಾರಾಯಣ ಗುರು
ಬ್ರಹ್ಮೈವಾಹಮಸ್ಮಿ.
--------------
ನಾರಾಯಣ ಗುರು