ಪ್ರಾರಂಭ ಪದದ ಹುಡುಕು
ಒಬ್ಬಂಗೊಳಿತು ಅನ್ಯಂಗಳಲು ಮಾಳ್ಪಕಾರ್ಯವಾತ್ಮವಿರೋಧಿಯೆಂದು ತಿಳಿಯಬೇಕು,ಪರಂಗೆ ಪರಮ ಪರಿತಾಪನೀಡುವವಉರಿನರಕಾಬ್ಧಿಯೊಳು ಬಿದ್ದುರಿವನಹುದು.
ಒಬ್ಬರೂ ಇಲ್ಲ ನಮಗೆ ನೀನಲ್ಲ-ದಿಲ್ಲೊಂದಾಸರೆ ತಾಂಡವಮೂರ್ತಿ ಧರೆಯೊಳುಸ್ಮರಹರ! ಸಾಂಬ! ಸದಾಪಿ ನೀನೊಲಿ-ದಿಲ್ಲೊಂದು ಕೃಪೆ ನೀಡಲು ಮತ್ತೇನು ಬೇಕು
ಒಮ್ಮೆ ನಾವರಿಯದದೇನೂ ಇಲ್ಲವಿಲ್ಲಿ ಒಡಲಮರೆಯಿಂದರಿವುದಿಲ್ಲೆಚ್ಚರಗೊಂಡೆಲ್ಲಅರಿವವರಿಲ್ಲ ಎಲ್ಲೆಯಿಲ್ಲದಿರಲಾಗಿ ಈ-ಒಲುಮೆ ಯಾರರಿವರು ವಿಚಿತ್ರವಯ್ಯೋ!
ಒಮ್ಮೆ ನಿನ್ನ ತಿರುಮೈ ಬಂದು ಮುಂದೆಸಿರಿಮುಖವ ತಿರುಗಿಸಿ ನೋಡಿಯೆನ್ನೊಳುಹೆಚ್ಚುವ ಸಂಕಟದ ಹೆಗ್ಗಡಲು ದಾಟಿಸ-ಲೆಂದಿಗೆ ತರವಾದೀತು ದಯಾಕರನೇ
ಒರೆದ ಶಕ್ತಿಗಳನನುಸರಿಸಿ ಎರಡನೆಯತಿರುವು ಇವಯೊಳು ಸಮದ ವಿಶೇಷವೊಂದೇ.ವಿರತಿ ಬಾರದ ವಿಷಮಾವಿಶೇಷವೊಂದೀ-ಪರಿ ಇವಿಬ್ಬಗೆಯದಾಗಿರುವವು.
ಒಲಿದು ಇಮ್ಮೊಲೆಗಳ ಕುಣಿಸಿ ಉಸಿರುಣ್ಣುವ ಹೆಣಗಳ ಬಗ್ಗೆ ಬೆಳೆಯುತಿದೆ ಬಲುವಾಗಿ ಭೀತಿ ಕಂಪು ಮೊದಲಾದೈದರಲೂ ಕೂಡಿ ಮೆರೆವಹೆಣಗಳೊಡನೆ ಕನಸಲೂ ನಾ ಬೆರೆಯಲಾರೆ.
ಒಲಿಯಬೇಕೆನ್ನಲಿ ಕೃಪೆದೋರಿ; ಬಿದ್ದು ನಾನೀ ಗುಣವಿರದ ಕುಲಟೆಯರೊಡನೆ ಅಲೆಯಲೇಕೆ ?ಬಳಸಿ ಅಪ್ಪುವ ಬಲುಹುಚ್ಚಿಯ ಬುಡಹರಿದುಕಂಪುಗಳು ತೀರಲೆಂದು ಇಗೋ ಕೂಗುತಿಹೆನು.
ಒಳ ಒಡಲಿಗೂ ಇಂದ್ರಿಯದೊಡನೆ ಮನವಳಿದು ಏಳುವ ಈ ಹಗಲಿರುಳಿಗೂ ಮುನ್ನವಿದ್ದರಿವ ಅರಿವಿನ ಬೆಳಕಲಿ ಇದೆಲ್ಲವೂ ಸುತ್ತ ತಿಳಿದುಬರುವ ನಾವು ವಂಚನೆಯಿಲ್ಲದ ವೈಭವಗಳಲ್ಲಿ ಅಡಗಿದ್ದು ಬದುಕೋಣ
ಒಳಕಿಚ್ಚಾರಿಸಲು ಉಪಾಯನೆರವುಗಳನಿನ್ನು ಇನಿಮೆಯ ಕ್ಕಣ್ಮಣಿಯೇ ನೀ ನೀಡದಿರಲುಒಳತೀವ್ರವೆದ್ದಿರುವ ದಹನಶಿಖೆಯಲಿ ನಾನುಬೆಂದುಹೋಗಲು ನಿಶ್ಚೈಸಿರುವೆಯೇ? ಹುಚ್ಚು ಭ್ರಾಂತಿನ ಬಾಧೆಯಳಿಯಲಲೆಯುವ ಈ ಹುಚ್ಚುನಾಯಿಗುಂಟೇ ಸುಬೋಧ, ತಪ್ಪೆಲ್ಲವೂ ನೀ ಮನ್ನಿಸಿ ಆಳ್ವೆಯಲ್ಲೋ.
ಒಳಗಿರುತ್ತಿಹ ದೋಷಭಾರ ನೀಗಿಸಲು ಅತಿಸೌರಭದಬೆಳ್ಳಿಮುತ್ತು ಹರಳುಗಳಕೂಡಿ ಪೋಣಿಸಿತೊಟ್ಟ ಎದೆಯನೂವಳ್ಳಿಯ ಮಧುವಣಿಗನೇ, ನಿನ್ನ ಉದರಾಭೆ ತಿರುನಾಭಿಯೂಎನ್ನೊಳಗಾಗಲಿ ಸದಾ ಪರಿಶುದ್ಧಯೇ ಗುಹ ಪಾಹಿಮಾಂ
ಒಳಗೂ ಹೊರಗೂ ಕಳೆಯುತಲೆನ್ನ ಒಡೆಯನೆ ನೀ ತುಂಬಿ ಬಾಳುತಿಹೆ ಹೊಗಳಿಕೆ ಪಡೆದ ನಿನ್ನ ಕಣ್ಣಲ್ಲಿ ಹೊಗೆಯೇ ಈ ಕಂಡುದೆಲ್ಲವೂ ಹಗೆಯೇ.
ಒಳಗೂ ಹೊರಗೂ ತುಂಬಿರುವಮಹಿಮೆಯುಳ್ಳ ನಿನ್ನ ಪದವನ್ನುಹೊಗಳುವೆವು ನಾವುಒಡೆಯನೇ, ಜಯಿಸು.
ಒಳಿತಲ್ಲ ಒಬ್ಬ ಗೈದಒಳ್ಳೆಕಾರ್ಯವ ಮರೆವುದುಒಳಿತಲ್ಲದನ್ನೊಡನೇಮರೆತುಬಿಡುವುದುತ್ತಮ