ಅಣುವಿಂದ ಆನೆವರೆಗೆ ಉಳ್ಳದೆಲ್ಲವು ಜಂಗಮವೂ ಹುಲ್ಲಿಂದ ಭೂರುಹ ವರೆಗೆ ಸ್ಠಾವರವು ಆಗಿವೆ. ಮಾತ್ರವಲ್ಲ, ನಮ್ಮ ಕಣ್ಣು, ಮೂಗು ಮೊದಲಾದ ಇಂದ್ರಿಯಗಳಿಂದ ಬ್ರಹ್ಮದವರೆಗೆ ಎಲ್ಲವು ಚಿತ್ತವು, ಮಣ್ಣಿನಿಂದ ಮೂಲಾತಿರಸ್ಕರಣಿವರೆಗೆ ಕಂಡುಬರುವುದೆಲ್ಲವು ಜಡವು ಆಗಿವೆ. ಈ ಎರಡು ಸರಣಿಗಳಲ್ಲಿಯಾಗಿ ಸೂತ್ರದಲ್ಲಿ ಪೋಣಿಸಿದ ಮಣಿಗಳಂತೆ ಎಲ್ಲವೂ ಅಡಗಿವೆ. ಈ ಎರಡು ಸರಣಿಗಳಲ್ಲಿರುವ ಒಡವೆಗಳೆಲ್ಲವನ್ನು ತಿಳಿವಿಗೆ ತರಲು ಒದಗುವ ನಾಮಭೇದ ಒಂದು. ಇವುಗಳಲ್ಲಿಂದ ಆತ್ಮೀಯವಾಗಿಯೂ ಭೌತಿಕವಾಗಿಯೂ ಪ್ರಕಾಶಗೊಳ್ಳುವ ಶಬ್ದಭೇದ ಒಂದು. ಇವೆರಡೂ ಕಿವಿಯಲ್ಲಿಯೂ, ತಾನು ಆಶ್ರಯಿಸಿರುವ ಒಡವೆ ಇಂಥದೆಂಬ ಸೂಚನೆಯೊಂದಿಗೆ ಬರುವ ಸ್ಪರ್ಶಭೇದ ತೊಗಲಲ್ಲಿಯೂ, ಸೂರ್ಯ, ಚಂದ್ರ, ಅಗ್ನಿ ಮೊದಲಾದ ಜ್ಯೋತಿಸ್ಸುಗಳು ಎಂದಲ್ಲ, ಇವುಗಳಿಂದ ಹೊಳೆಯುವ ಎಲ್ಲ ಪದಾರ್ಥಗಳನ್ನು ಹೊತ್ತುಕೊಂಡುನಿಲ್ಲುವ ವರ್ಣಭೇದ ಕಣ್ಣಲ್ಲೂ, ದ್ರಾಕ್ಷಿ ಮೊದಲಾದ ರಸವರ್ಗಗಳನ್ನು ತನ್ನಲಿ ಅಡಗಿಸಿಕೊಂಡುಬರುವ ರಸಭೇದ ನಾಲಗೆಯಲ್ಲೂ, ತಾನಿದ್ದು ಚಿಮ್ಮಿಬರುವುದು ಇಂಥದಲ್ಲಿಂದ ಎಂದು ಆ ಗಂಧದ್ರವ್ಯವನ್ನು ಮನವರಿಸುವ ತಂತ್ರದೊಂದಿಗೆ ಬರುವ ಗಂಧಭೇದ ಮೂಗಲ್ಲಿಯೂ ಆಗಿ ಅಡಗಿದೆ ಎಂಬುದು ಸ್ಪಷ್ಟವಾಗಿದೆ.
ಆದರೆ ಈ ಐದೂ ಶಬ್ದಾದಿ ವಿಷಯಗಳು ಶ್ರೋತ್ರ ಮೊದಲಾದ ಇಂದ್ರಿಯಗಳಿಂದ ಆಗಾಗ ಹೊರದೂಡಿ ಬಂದು ಕಾಣುವುದೋ, ಅಲ್ಲ, ಭೌತಿಕವಾಗಿ ಹೊರಗೆನಿಂತಾಗ ಅವುಗಳಲ್ಲಿ ಇಂದ್ರಿಯಗಳು ಬಂದುಸೇರಿ ಅರಿವಿಗೆ ಬರುವುದೋ, ಎಂದುನೋಡಿದಲ್ಲಿ, ಭೌತಿಕವಾಗಿ ಹೊರಗೆ ನಿಲ್ಲುವಾಗ ಇಂದ್ರಿಯಗಳು ಬಂದು ಸೇರಿ ಅರಿವಿಗೆ ಬರುವುದಾದರೆ ಅದು ಅಸಂಭವವೇ ಸರಿ. ಹೇಗೆಂದರೆ, ನಾವು ಕಾಣುವ ಈ ಕೊಡ ಮಾಡಿ ಈಗ ಸುಮಾರು ಒಂದು ವರ್ಷಕ್ಕಿಂದ ಹೆಚ್ಚಾಗಿದೆ ಎಂದು ತೋರುತ್ತದೆ. ಆದರೆ ಕಾಣುವ ಕ್ಷಣದಲ್ಲಿ ಎದ್ದು ಹೊಳೆಯುತ್ತಿರುವ ಈ ಕೊಡ ನೋಡುವಮುನ್ನ ಇರಲಿಲ್ಲ ಎಂದಲ್ಲದೆ ಇತ್ತು ಎಂಬುದು ಶುದ್ಧ ಅಸಂಬಂಧವೇ ಸರಿ. ಹಾಗಲ್ಲ, ನಾವು ಕಂಡಿಲ್ಲ ಆಷ್ಟೇ, ಕೊಡ ಇತ್ತು ಎಂದಾದರೆ ಅದು ಈ ಕೊಡದಲ್ಲಿ ಕಾಣುವ ಪಳಮೆಯಿಂದ ರೂಡಿಬರುವುದರಲ್ಲಿ ಒಂದು ವ್ಯವಹಾರವಹುದು.
ಅದು ಹಾಗಿರಲಿ. ನಾವು ಕಾಣುವ ಕೊಡ ನಾವಿಲ್ಲದ ದಿಕ್ಕಿನಲ್ಲಿ ಇರಲಿಲ್ಲ ಎಂದಲ್ಲದೆ ಇತ್ತು ಎಂದು ಹೇಳಕೂಡದು. ಅದಲ್ಲ, ಇತ್ತು ಎಂದಾದರೆ, ಅಲ್ಲಿ ಆಗ ಕಂಡವರಲ್ಲಿ ಒಬ್ಬ ಅಗತ್ಯವಾಗುತ್ತಾನೆ, ಕಾಣುವ ದಿಕ್ಕಲ್ಲಿ ಕಂಡವನು ಇರುವನೆಂದಲ್ಲದೆ ಕಾಣದ ದಿಕ್ಕಲ್ಲಿ ಕಂಡವನು ಇದ್ದನೆಂದು ಹೇಳುವುದು ಹೇಗೆ? ಹಾಗೆ ಕಂಡವನು ಇಲ್ಲವೆಂದಲ್ಲಿ ಕಾಣುವುದೂ ಇಲ್ಲ. ಆಗ ಈ ಕೊಡ ಈಮೊದಲು ಇರಲಿಲ್ಲವೆಂದೂ, ಈಗ ಈ ಕ್ಷಣದಲ್ಲಿ ಎದ್ದು ಹೊಳೆಯುತ್ತಿದೆ ಎಂದೂ ಸ್ಪಷ್ಟವಾಗುತ್ತದೆ.
ಹೀಗೆ ಕೊಡವೇ ಇಲ್ಲದಿರುವಾಗ, ಕೊಡದಿಂದ ದೂಡಿಬರುವ, ‘ಈ ಕೊಡ ಮಾಡಿ ಒಂದು ವರ್ಷಕ್ಕೂ ಅಧಿಕವಾಗಿದೆ’, ಎಂಬ ವ್ಯವಹಾರ ಹೇಗೆ ನೆಲೆಗೊಂಡೀತ್ತು? ಅದಲ್ಲ, ಇಂದ ಹೊತ್ತಲ್ಲಿ ನಿರ್ಮಿತವಾದ ಇಂತಿಂಥ ಲಕ್ಷಣಗಳು ಕೂಡಿರುವ ಕೊಡವೊಂದು ಇಂಥ ದಿಕ್ಕಲ್ಲಿ ಇದೆ ಎಂದು ನಾವು ಹೀಗೆ ಆಪ್ತನೋರ್ವನಿಂದ ಅರಿತುಬಂದು, ಇಗೊ ಈಗ ಆ ಗುರುತ್ತುಗಳಿಂದ ಕೂಡಿದ ಈ ಕೊಡವನ್ನು ಕಾಣುತ್ತೇವೆ, ಆದ್ದರಿಂದಲೇ ಅಂದಿನಿಂದ ಇಂದಿನವರೆಗಿನ ಅಳತ್ತೆನೋಡಿದರೆ ಈಗ ಈ ಕೊಡ ಮಾಡಿ ಒಂದು ವರ್ಷಕ್ಕಿಂದ ಹೆಚ್ಚಾಗಿದೆ ಎಂದು ಹೇಳಿದಲ್ಲಿ, ಅದೂ ಈ ಕೊಡದಿಂದ ಈಗ ದೂಡಿಬರುವುದಲ್ಲದೆ ಮೇಲಿನಂತೆ ಈಹಿಂದೆ ಇರಲಿಲ್ಲ ಎಂದೇ ಹೇಳಬೇಕ್ಕು.
ಅದಲ್ಲ ನಾವೇ ಹಿಂದೊಮ್ಮೆ ಕಂಡಿದ್ದ ಕೊಡವೇ ಇದು. ಅಂದು ಕಂಡಿದ್ದ ಎಲ್ಲ ಗುರುತುಗಳೂ ಇಗೊ ಇದರಲ್ಲಿ ಕಾಣುತ್ತಿವೆ. ಆ ಕೋಡವೇ ಈ ಕೊಡ. ಆದ್ದರಿಂದಲೇ ಈ ಕೊಡಮಾಡಿ ಒಂದು ವರ್ಷಕ್ಕಿಂದ ಹೆಚ್ಚು ಕಳೆದಿದೆ ಎಂದು ಹೇಳಿದಲ್ಲಿ, ಈಗ ನಮ್ಮಒಂದಿಗಿರುವ ಈ ಕೊಡ ಆಗ ಈ ರೀತಿ ನಮ್ಮೊಂದಿಗೆ ಇತ್ತು ಎಂದೂ, ನಡುವಲ್ಲಿ ನಾಶವಾಯಿತ್ತು, ಆ ಶುದ್ಧಶೂನ್ಯದಿಂದ ಹೀಗೆ ನಮ್ಮೊಂದಿಗೆ ಎದ್ದಿದೆ ಎಂದೂ ವ್ಯವಹಾರ ಮುಂದಾಗುತ್ತದೆ. ಆಗ ನಾವು ಇಲ್ಲದಿದ್ದ ಶೂನ್ಯದ ಆಚ್ಚೆಗಿನ ಕಥೆಯನ್ನು ನಾವಿಲ್ಲಿ ಪ್ರಸ್ತಾಪಿಸುವುದು ಭ್ರಮೆಯಿಂದಲೇ ಎಂದಾಗುತ್ತದೆ. ಅಲ್ಲದಿದ್ದಲ್ಲಿ ನಮ್ಮ ಪೂರ್ವಜನ್ಮದ ಕಥೆಗಳ ನೆನಪು ನಮಗೆ ಈಗ ಉಂಟಾಗಬೇಕ್ಕು, ಅದಿಲ್ಲವಲ್ಲಾ. ಆದರೆ ಅದರಂತೆಯೇ ಇದನ್ನೂ ಯೋಚಿಸಿ ನೋಡಿದಾಗ ಅರಿವಿಗೆ ಬಂತೀತ್ತು. ಅದಲ್ಲ, ಸುಷುಪ್ತಿಯಿಂದ ಎದ್ದು ಬರುವಾಗ ಆ ಸುಷುಪ್ತಿಗೆ ಹಿಂದಿನ ಅವವ್ಸ್ಥೆಯ ನೆನಪು ಇರುವಂತಾದಲ್ಲಿ, ಅದು ಬಂಜೆಯ ಮಗ ಇಲ್ಲವೆಂದು ಹೇಳಿದಾಗ, ಅಲ್ಲ ಅವನು ಮೊಲದಕೊಂಬಿನಂದೆ ಉಳ್ಳವನೆಂದು ಹೇಳಿದಂದಾಗುತ್ತದೆ.
ಹೀಗೇನು ಅಲ್ಲವೆಂದರೆ, ಮತ್ತೆ ಹೇಗೆ ಈ ಕೊಡದಲ್ಲಿ ಈ ರೀತಿ ಭೂತಕಾಲವ್ಯವಹಾರ ಒದಗಿಬಂದಿದೆ ಎಂದು ಕೇಳಿದರೆ, ಈ ವರ್ತಮಾನಕ್ಷಣದಲ್ಲಿ ಕೊಡ ಉಂಟಾಗಿ ಈ ವಿಧದಲ್ಲಿರುವುದಕ್ಕೆ ಸಾದ್ಧ್ಯತೆ ಇಲ್ಲವಲ್ಲಾ ಎಂಬ ಊಹೆ ಒಳಗಿಂದ ದೂಡಿಹೊರಗೆಬಂದು ಕೊಡದಲ್ಲಿ ಬಿದ್ದು, ಅದರಲ್ಲಿ ಪೂರ್ವಕಾಲೀನ ವ್ಯವಹಾರವನ್ನು ಬೆಸೆದು ಹೀಗೆ ಅಸಂಬಂಧವಾಗಿ ವ್ಯವಹರಿಸುತ್ತಿರುವುದಲ್ಲದೆ ಮತ್ತೇನೂ ಇಲ್ಲ. ಅದು ಹೇಗೆಂದರೆ, ಕನಸ್ಸಿನಲ್ಲಿ ನಾವು ವೃಕ್ಷವೊಂದನ್ನು ಕಂಡು ಹತ್ತಿರಹೋಗಿನಿಂದು, ‘ ಹಾ! ಈ ವೃಕ್ಷ ಉಂಟಾಗಿ ಈಗ ಒಂದುನೂರು ಸಂವತ್ಸರಗಳಿಗಿಂತ ಹೆಚ್ಚಾಗಿದೆ’ಎಂದು ತಿಳಿಯುವುದಾದರೂ ಈಗ ನೋಡಿದಲ್ಲಿ ನಿನ್ನೆಯ ಕನಸ್ಸಿನಲ್ಲಿನ ವೃಕ್ಷದಲ್ಲಿ ಕಂಡ ನೂರು ಸಂವತ್ಸರಗಳ ಪಳಮೆ ಅಸಂಬಂಧವೆಂದೂ, ವೃಕ್ಷವು ಆಗ ಸ್ವಪ್ನದೃಷ್ಟಿಯಿಂದ ಹೊರಗೆ ದೂಡಿಬಂದು ಕಂಡದ್ದೆಂದೂ, ಕನಸು ಭೌತಿಕವಾಗಿ ಹೊರಗಿದ್ದುದ್ದಲ್ಲವೆಂದೂ ಸ್ಪಷ್ಟವಾಗುತ್ತದೆ. ಅದರಂತೆಯೇ ಈ ಕೊಡವು ಈಗ ಕಣ್ಣಿನಿಂದ ಹೊರದೂಡಿ ಕಾಣುವುದಲ್ಲದೆ ಭೌತಿಕವಾಗಿ ಹೊರಗಿರುವುದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇನ್ನೂ ಇದರಂದೆಯೇ ಇತರ ವಿಷಯಗಳೂ ಆಯ ಇಂದ್ರಿಯಗಳಿಂದ ಆಗಾಗ ಹೊರದೂಡಿಬರುತ್ತದೆ ಎಂಬುದು ಹೇಳಬೇಕ್ಕಿಲ್ಲವಷ್ಟೇ.
ಹಾ! ಸೊಗಸಾಗಿದೆ. ಸರಿ. ಈಗ ಶರೀರಾದಿ ಸಕಲ ಪ್ರಪಂಚಗಳೂ ಒಳಗಿಂದ ಹೊರಗೆ ದೂಡಿಬರುತ್ತದೆ ಎಂಬುದು ಚೆನ್ನಾಗಿ ಮನವರಿಕ್ಕೆಯಾಯಿತ್ತು. ಆದಾಗಿಯೂ ಇದರಲ್ಲೂ ಸಂಶಯವೊಂದು ಸೇರಿಕ್ಕೊಂಡಿದೆ. ಅದೇನೆಂದೊಡೆ, ತೇಜೋಮಯಗಳಾಗಿರುವ ಇಂದ್ರಿಯಗಳಿಂದ ತಮೋಮಯಗಳಾದ ವಿಷಯಗಳು ಬರುವುದಾದರೆ ಅದರಲ್ಲಿ ಸೂರ್ಯನಿಂದ ಇರುಳೆದ್ದು ಬರುತ್ತಿದೆ ಎಂಬ ವಿರೋಧ ನೇರಾಗುತ್ತದೆ. ಆದರಿಂದ ಹಾಗೆ ಹೇಳುವುದು ಸಲ್ಲ. ಮತ್ತೆ ಇಂದ್ರಿಯಗಳೊಂದಿಗೆ ಬರುವುದಕ್ಕೆ ಏನಾದರೂ ನ್ಯಾಯವುಂಟೇ ಎಂದು ನೋಡಿದಾಗ ಅದೂ ಕಾಣುತ್ತಿಲ್ಲ. ಏಕೆಂದರೆ ಹಾಗಿದ್ದಲ್ಲಿ ಇರುಳೂ ಬೆಳಕ್ಕೂ ಸೇರಿ ಒಂದೇದಿಕ್ಕಲ್ಲಿದ್ದು ಒಂದೇ ವೇಳೆಗೆ ಎದ್ದು ಬರುತ್ತದೆ ಎನ್ನಬೇಕು. ಅದು ಎಂದಿಗೂ ನಡೆಯುವುದಿಲ್ಲ.
ಅಯ್ಯೋ, ಈ ಪ್ರಪಂಚವು ಇದೆಂಥ ಇಂದ್ರಜಾಲ! ಹೊರಗೆ ಕಾಣುವುದೂ ಅಲ್ಲ, ಇಂದ್ರಿಯಗಳಿಂದ ದೂಡಿಬರುವುದೂ ಅಲ್ಲ, ಇಂದ್ರಿಯಗಳೊಂದಿಗೆ ಬರುವುದೂ ಅಲ್ಲ. ಮತ್ತೆ ಈ ರೀತಿ ಹೇತುವಿಲ್ಲದೆ ಕಾಣುವುದು ಹೇಗೆಂದು ಕೇಳಿದರೆ, ಅದು ಅವಿಚಾರಾವಸ್ಥೆಯಲ್ಲಿ ಬಿಸಿಲುಕುದುರೆಯಂತೆ ತೋರುವುದಲ್ಲದೆ, ನೆನೆದುನೋಡಿದಲ್ಲಿ ಇದೆಲ್ಲವೂ ಶುದ್ಧ ಚಿತ್ತಾಗಿಯೇ ಬೆಳಗುತ್ತದೆ. ಅದು ಹೇಗೆಂದರೆ, ‘ಒಂದು ಹಗ್ಗದ ತುಂಡಲ್ಲಿ ಕಲ್ಪಿತವಾಗಿರುವ ನಾಗವು ಬೆಳಕು ಚಲ್ಲಿದಾಗ ನಿಧಾನವಾಗಿರುವ ಆ ಹಗ್ಗದಲ್ಲಿಯೇ ಮರೆಯಾಗುತ್ತದೆ. ಅಗ ಮುಂದೆ, ‘ ಇದು ನಾಗ’ ಎಂದು ಹೀಗೆ ಇದಂ ವೃತ್ತಿಯಿಂದ ಗ್ರಹಿಸಲಾಗಿದ್ದ ಕಲ್ಪಿತ ನಾಗದಿಂದ ಬಿಟ್ಟು ಕಣ್ಣು ಆ ಹಗ್ಗದಲ್ಲಿಯೇ ಆಂತುನಿಂದು ಹೊಳೆಯುವಂತೆ, ಅವಿಚಾರಾವಸ್ಥೆಯಲ್ಲಿ ಕಾಣಲಾಗುವ ಈ ಶರೀರಾದಿ ಪ್ರಪಂಚವಷ್ಟೂ ಹೀಗೆ ಕಾರಣವಿಲ್ಲದೆ ಅಖಂಡ ಚಿನ್ಮಾತ್ರವಾಗಿರುವ ಬ್ರಹ್ಮದಲ್ಲಿ ಇರುವುದಕ್ಕೆ ಎಂದಿಗೂ ಸಾಧ್ದ್ಯವಿಲ್ಲ ಎಂದು ನೆನೆದು ನೆನೆದು ಉಂಟಾಗುವ ಬೋಧೋದಯದಲ್ಲಿ ಇದೆಲ್ಲವೂ ನಿಧಾನವಾದ ಬ್ರಹ್ಮದಲ್ಲಿಯೇ ಮರೆಯಾಗುತ್ತದೆ. ಆಗ ಇದು ಹಿಂದೆ ಕಂಡಿದ ಕಲ್ಪಿತ ಪ್ರಪಂಚವನ್ನು ಬಿಟ್ಟು, ನಿರಾಧಾರವಾದ ಇದಂವೃತ್ತಿಯೂ ಊರ್ಧ್ವಮುಖಿಯಾಗಿ ಜೀವಬೋಧದೊಂದಿಗೆ ಅಖಂಡಚಿತ್ತಿನಲ್ಲಿ ಬೆರೆತು ಚಿನ್ಮಾತ್ರವಾಗಿ ಬರುತ್ತದೆ.
ಮತ್ತೆ ಪೂರ್ವವಾಸನೆಗಳು ಹೆಚ್ಚಿ ಹಿಂದಿನಂತೆಯೇ ಪ್ರಪಂಚ ತೋರುತ್ತದೆ. ಇದೂ ಮೇಲೆ ಹೇಳಿದಂತೆ ಆಮೂಲಾಗ್ರ ಯೋಚಿಸಿ ಚಿತ್ತಿನಲ್ಲಡಗಿಸಿ ಚಿತ್ತಾಗಿ ನಿಲ್ಲಬೇಕು. ಹೀಗೆ ಮಾಡಿಮಾಡಿ ಬರುವಾಗ ಅಶುದ್ಧವಾಸನೆ ಕ್ಷಯಿಸಿ ನಿರಾಧಾರವಾಗಿ ಶುದ್ಧವಾಸನೆಯಲ್ಲಿ ತನ್ಮಾತ್ರೆಯಲ್ಲಿಯೇ ಅಡಗಿ, ಈ ಎರಡೂ ವಾಸನೆಗಳಲ್ಲಿ ಸಿಲುಕ್ಕಿದ್ದ ಅಹಂಕಾರಿಯೂ ಕೆಟ್ಟು ಪೂರ್ಣವಾಗಿ ನಿಲ್ಲುತ್ತಾನೆ. ಈ ಸ್ಥಾನವು ಚಿತ್ತೂ ಅಲ್ಲ, ಜಡವೂ ಅಲ್ಲ, ಸತ್ತೂ ಅಲ್ಲ, ಅಸತ್ತು ಅಲ್ಲ, ಸುಖದುಃಖಾದಿ ಯಾವ ದ್ವಂದ್ವಗಳೂ ಅಲ್ಲ. ಹೀಗೆ ಅನಿರ್ವಚನೀಯವಾಗಿರುವ ಇದರಲ್ಲಿಂದ ಸೃಷ್ಟ್ಯಾದಿಗಳು ನಡೆಯುತ್ತಿರುವುದೇ ಅತ್ಯಾಶ್ಚರ್ಯ! ಇದರ ಮಹಿಮೆ ಅಲ್ಪಬೋಧಿಗಳಾದ ಚೇತನಗಳು ಏನರಿತ್ತಾರು! ಹಾ! ಜಯ ಜಯ ನಟೇಶ! ನಟೇಶ! ನಟೇಶ!