ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲೆಯದೆ ಇನ್ನು ನಿನ್ನಡಿಗಳಿಗೆ ದಾಸ ನಾನು ದಿನವೂ ಮನಮಲರನ್ನಿತ್ತು ನಮಿಸುವೆ ನಿನಗಿದು ಗೊತ್ತುಂಟು ಹುಟ್ಟಿ ನಾನಿವುಗಳಲ್ಲಿ ಹಲವಾಗಿ ಬಳಲಿದೆ ಅನಿಶ ಇದಕ್ಕಿಂತ ಬಲುಬೇನೆ ಯಾವುದೂ ಇಲ್ಲೆನಗೆ 
--------------
ನಾರಾಯಣ ಗುರು
ಅಲೆಯೆದ್ದುಬಂದು ನೊರೆತೂದಿದ ಒಳಗಡಲು ನಿಂ- ತಲೆಯುತ್ತಿದೆ ಹೆಣ್ಗುದುರೆಯಲ್ಲ ಸೆಣೆತಕ್ಕೆ ನೀ ನೆಲೆಗೊಂಡು ನಿಂತಿದ ನುಚ್ಚುನೂರಾಗಿಸಿ ನೀರಾಡು ನೀರಲೆಯುವುದಿಲ್ಲ ನೆರಳೆಂದರಿತು ನುಡಿಯೆ ನೀ
--------------
ನಾರಾಯಣ ಗುರು
ಅಲೆಯೊಂದುಕೋಟಿಯಲೆದು ಬರುವುದು ತಲೆಯೊಳು ತೊಟ್ಟು ಘನಗೊಂಡು ಸದಾ  ನೆಲೆ ಕದಲದೆ ತುಂಬುತ್ತ ಚಿದಂಬರ- ಸ್ಥಲವದರೊಳು ಸಂತತವುಳ್ಳವನೇ ನಮೋ
--------------
ನಾರಾಯಣ ಗುರು
ಅಲ್ಲದೊಡೆ ಕೊನೆತನಕ  ಕರ್ಮ ಮಾಡುತಲಿಲ್ಲಿ ಅಸಂಗನಾಗಿರು ಇಲ್ಲಿ ಇದಲ್ಲದೆ ಇಲ್ಲ  ಒಂದೂ ನರಂಗೆ ಮಾಡಲು
--------------
ನಾರಾಯಣ ಗುರು
ಅಳಲುಕ್ಕಿ ಐದೆಸಳಾಂತೆರಡು ಮಹಡಾಗಿ ತಿರುಗುವ ಅನಾದಿ ಬೆಳಕು ತೂಗಿಯಾತ್ಮ- ನೆಳಲೊಡಲಾಗಿ ಹುರಿವುದು ತುಪ್ಪವೋ ಮುನ್ನಿನ  ಹಳಸು ವಾಸನೆ ಬತ್ತಿಯು ವೃತ್ತಿಯಹುದು.
--------------
ನಾರಾಯಣ ಗುರು
ಅಳಲೆನಗೆ ಬಾರದಂತಿನ್ನು ನಿನ್ನ ಸೇವೆ ಮಾಡಲ್ಕೆ ಭಕ್ತಿ ದೃಢಗೊಳ್ಳಲಿ ನೆರಳೊಳಿದ್ದು ದಯೆಮಾಳ್ಪುದು ಕೆಂಜಡೆಗೆ ತೊಡುವ ಅಂಬರಗಂಗೆಯದರ ತೆರೆಯು.
--------------
ನಾರಾಯಣ ಗುರು
ಅವನಿವನೆಂದರಿಯುವುದೆಲ್ಲ ನೆನೆದೊಡೆ ಅವನಿಯೊಳಾದಿಮವಾದ ಆತ್ಮರೂಪ, ಅವನವನಾತ್ಮಸುಖಕ್ಕೆ ಆಚರಿಸುವುದೆಲ್ಲ ಅಪರಂಗೆ ಸುಖವನೀಯಲು ಒದಗಬೇಕು.
--------------
ನಾರಾಯಣ ಗುರು
ಅವಯವವೆಲ್ಲ ಅಡಗಿಸಿ ಆಣಿಯಾಗಿ ನಿಂತು ಆವರಿಸುವನು ಅವಯವಿ ಆವಿಯನ್ನು, ಅವನಿವನೆಂದದರಿಂದ ನೆನೆಯುವನು ಅವಶತೆಯಾದ ಅವಿವೇಕ ಮಾತ್ರದಿಂದ.
--------------
ನಾರಾಯಣ ಗುರು
ಅವಿದ್ಯೆಯನ್ನು ಉಪಾಸಿಸುವವರು ಅಂಧಂತಮಸ್ಸೊಳು  ಹೋಗುವರು ವಿದ್ಯಾರತರು ಅದಕ್ಕಿಂತ ಕಾರ್ಗತ್ತಲೆಯೊಳು
--------------
ನಾರಾಯಣ ಗುರು
ಅಶುದ್ಧಶುದ್ಧಂ ವಿರಜ- ಸ್ತಮೊನ್ಯತ್ ಸರಜಸ್ತಮಃ ಮುಮುಕ್ಷೌ ಪ್ರಥಮಂ ವಿದ್ಯಾತ್ ದ್ವಿತೀಯಂ ಸಿದ್ಧಿಕಾಮಿಷು.
--------------
ನಾರಾಯಣ ಗುರು
ಅಷ್ಟತನುಪ್ರತಿಭಾಸುರಲಿಂಗಂ ವಿಷ್ಟಪನಾಥವಿಕಸ್ವರಲಿಂಗಂ ಶಿಷ್ಟಜನಾವನಶೀಲಿತಲಿಂಗಂ ತನ್ಮೃದುಪಾತುಚಿದಂಬರಲಿಂಗಂ
--------------
ನಾರಾಯಣ ಗುರು
ಅಸಂಭೂತಿಯನು ಆರಾಧಿಸುವವರು ಅಂಧಂತಮಸ್ಸೊಳೂ ಹೋಗುವರು ಸಂಭೂತಿರತರು ಅದಕ್ಕಿಂತ ಕಾರ್ಗತ್ತಲೆಯೊಳು
--------------
ನಾರಾಯಣ ಗುರು
ಅಸತ್ಸದಿತಿ ವಾದತೋ ಬಹಿರಚಿಂತ್ಯಮಗ್ರಾಹ್ಯಮ- ಣ್ವಖರ್ವಮಮಲಂ ಪರಂ ಸ್ತಿಮಿತನಿಮ್ನಮತ್ಯುನ್ನತಂ ಪರಾಜ್ಮುಖ ಇತಸ್ತತಃ ಪರಿಸಮೇತಿ ತುರ್ಯಂ ಪದಂ ಮುನಿಸ್ಸದಸತೋರ್ದ್ವಯಾದುಪರಿ ಗಂತುಮಭ್ಯುದ್ಯುತಃ
--------------
ನಾರಾಯಣ ಗುರು
ಅಸನ್ನಿಕೃಷ್ಟತ್ವಾದಸ್ಯ ಪ್ರತ್ಯಕ್ಷಂ ಧರ್ಮಧರ್ಮಿಣೋಃ ಅಸೃಷ್ಟಸಾಹಚರ್ಯ್ಯಾಚ್ಚ ಧರ್ಮಿಣ್ಯನುಮಿತಿಃ ಕುತಃ
--------------
ನಾರಾಯಣ ಗುರು
ಅಸ್ತಿ ಧರ್ಮೀತ್ಯನುಮಿತಿಃ ಕಥಂ ಭವತಿ ವಾಗಪಿ ಅಸನ್ನಿಕೃಷ್ಟತ್ವಾದಸ್ಮಿನ್ ಪ್ರತ್ಯಕ್ಷಮನುಮಾನವತ್
--------------
ನಾರಾಯಣ ಗುರು