ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವಿನ ಕೆಂಕಿಚ್ಚೆಬ್ಬಿಸಿ ಮಿರ ಮಿರ ಮೆರೆವ  ಬಳುಕುಬಳ್ಳಿಯೊಳು ಮೌನದ ಹೂದಿಂಗಳೊಳಗೆ ಕರಗುವುದು ಅಮೃತ  ಹರಿಯುತ ಎದೆ ಕರಗಿ ನಾನೂ ನೀನೂ ತಿಕ್ಕಿಬೆರಯಲು ಒಲಿದು ತನ್ಮಯವಾಗಿ ನಿನ್ನಡಿಹೂವ ಜೇನು ಒಳಸೂಸುವ ಮುತ್ತುಕೊಡ ಅಡಿಯನ- ನಡಗಿಸಿ ನೀಡೆನ್ನ ಚಿತ್ತದ ಕೂಸೇ
--------------
ನಾರಾಯಣ ಗುರು
ಅರಿವಿನರಿವಾಗಿ ನಿಂದು ಯಾವುದು ಅರಿಯಿಸುತ್ತಿಹುದೋ ಅದುವೆ ನಾವು  ಅರಿವು ಯಾವ ತೆರದಿ ಹೇಗೆ ಈ  ಅರಿಯಲ್ಪಡುವುದು ಒರೆಡೊದಾವುದಿದು. 
--------------
ನಾರಾಯಣ ಗುರು
ಅರಿವಿನೊಳಿದ್ದಪರತ್ವವಾಂತುಕೊಳ್ಳದೆ ಈ ಅರಿವನಿಲ್ಲಿ ಅರಿಯುವುದಲ್ಲದೆ ತಾನು ಪರವಶನಾಗಿ ಅರಿಯೊಲ್ಲ ಪಂಡಿತನ  ಪರಮರಹಸ್ಯವಿದನ್ನು ನೋಡುವವರಾರು!
--------------
ನಾರಾಯಣ ಗುರು
ಅರಿವಿನೊಳಿದ್ದು ಸದಸ್ತಿಯೆಂದಸಂಖ್ಯ ಕಿಡಿಚೆದರಿ ಭುವನ ಸ್ಫುರಿಸುವುದರಿಂದ ಅರಿವಲ್ಲದೆ ಯಾವ ವಸ್ತುವೂ ಇಲ್ಲವೆಂದು ಅರಿಯಬೇಕೀ ಅರಿವೀವುದೇಕರೂಪ. 
--------------
ನಾರಾಯಣ ಗುರು
ಅರಿವು ನಿಜಸ್ಥಿತಿಯನರಿಯಲೋಸುಗ ಇಲ್ಲಿ  ಧರೆ ಮೊದಲಾದ ವಿಭೂತಿಯಾಗಿ ತಾನೇ ಉರುಳುವವಸ್ಥೆಯೊಳೇರಿ ಬದಲಾಗಿ ಸುತ್ತಿ ತಿರುಗುವ ಅಲಾತದಂತೆ ತಿರುಗುತಿಹುದು. 
--------------
ನಾರಾಯಣ ಗುರು
ಅರಿವುದರಿಂದ ಅವನಿವಿಕಾರವುಂಟೆಂ- ದೊರೆವುದ ನೆನೆದೊಡೆ ಹುಸಿ, ಉಳ್ಳದುರ್ವೀ; ಬಹುವಿಧವಾಗಿ ನೆಲೆಯಳಿದು ನಿಲ್ವುದೆಲ್ಲ ಅರಿವಿನೊಳೇಳ್ವ ಪ್ರಕೃತಿಸ್ವರೂಪವಹುದು.
--------------
ನಾರಾಯಣ ಗುರು
ಅರಿವೂ ಅದರಂತೆ ಹೋಗಿ- ಅರಿವವನೊಳು ಸೇರಿ ಮತ್ತೆ ಅರಿಯಲ್ಪಡುವುದರೊಳೊಂದು ಈ  ಅರಿವಿನ ಕಿಡಿ ಬಿದ್ದು ಸೀಳಿತೈದಾಗಿ. 
--------------
ನಾರಾಯಣ ಗುರು
ಅರಿವೂ, ಅರಿಯುವ ಅರ್ಥವೂ, ಪುಮಾನ್ ತನ್ನ- ರಿವೂ ಒಂದೇ ಆದಿಮಹಸ್ಸು ಮಾತ್ರವಹುದು; ವಿರಳತೆ ಬಿಟ್ಟು ಬೆಳಗುವ ಆ ಮಹತ್ತಾದ ಅರಿವಲ್ಲಮರ್ದು ಅದು ಮಾತ್ರವಾಗಬೇಕು.
--------------
ನಾರಾಯಣ ಗುರು
ಅರಿವೆ ನೂಲು, ಇದು ಹತ್ತಿ ಇದಾದಿಮೂಲ- ಭೂತಪ್ರಘಾತವಿದು ನೆನೆದೊಡೆ ಈ ತೆರದಲಿ  ಬೋಧದೊಳು ನಿಂತು ಮೆರೆವುದು ಮರುಸ್ಥಳದ ನೀರಿನಂತೆ, ಪರಮಾವಧಿ ಬೋಧವಹುದು.
--------------
ನಾರಾಯಣ ಗುರು
ಅರೆಕ್ಷಣಾದಿ ಆರೆಕಾಲುಗಳುಳ್ಳ ಉರುಳುತೇರನ್ನೇರಿ ಉರುಳುವುದು ಜಗವು, ಅರಿವಿನೊಳನಾದಿಯಾಗಿ ನಡೆವ ತನ್ನ- ಸಿರಿಯಾಟವೆಂದಿದನ್ನರಿಯಬೇಕು.
--------------
ನಾರಾಯಣ ಗುರು
ಅರ್ಕಬಿಂಬಗಳಾರುದಿಸಿ ಬರುವಂತೆ ಬೆಳಗುವ ಶ್ರೀಕಿರೀಟದ  ಜಡೆಯೆಡೆಯಲಿ ಹಾವು ಚಂದ್ರ ತುಂಬೆಯೂ, ದುಷ್ಕೃತಿಗಳ ನೀಗಿಸಲು ಹರಿಯುವ ಅಂಬರಗಂಗೆಯೂ, ಪುಟ್ಟ ಎದೆಯಲಿ ಕಾಣಬೇಕೆನೆಗೆಂದಿಗೂ ಗುಹ ಪಾಹಿಮಾಂ
--------------
ನಾರಾಯಣ ಗುರು
ಅರ್ಕಾದ್ಯಥಾಕ್ರಮಂ ವಿಶ್ವಂ ತಥಾ ನೈವೇದಮಾತ್ಮನಃ ಸುಪ್ತೇರಿವ ಪ್ರಾದುರಾಸೀ- ದ್ಯುಗಪತ್ಸ್ವಸ್ಯ ವೀಕ್ಷಯಾ.
--------------
ನಾರಾಯಣ ಗುರು
ಅಲೆದಾಡುವ ಇದೆಲ್ಲವೂ ಕಪಟನಾಟಕವೆಂದರಿಯುವ ಪರಿಯಲ್ಲಿದ್ದರಿತು ಅಳಿವುದಕ್ಕೆ ನೆನೆಯೋ ನೀನು ತಲೆಯೊಳೇಳುವ ತರಂಗದ ಸಾಲು ಉಕ್ಕಿಬಂದು ಮರೆಸುವ ಸುಮಶರವೈರೀ ನಿನ್ನಡಿಗಳನ್ನು ಸೇರುವುದೆಂದಿಗೆ ನಾ
--------------
ನಾರಾಯಣ ಗುರು
ಅಲೆದು ಮೊಲೆತಲೆಯೆತ್ತಿ ಒಳಗೆಲ್ಲಾ ಕಲಕಿಯುಕ್ಕುವ ಕಡಲೂ ಕುಣಿವ ಕಣ್ಣೂ ಬೆಳಗಿ ಕುಣಿದಾಡಿ ಬರುವ ಇವರೊಡನೆ ಈ  ಮಲಗಳು ಹರಿವ ಗುಡಿಸಲಲಿದ್ದು ಬಳಲುತಿಹೆನು.
--------------
ನಾರಾಯಣ ಗುರು
ಅಲೆಯಡಗಿದ ಕಡಲೊಳುಂಟನಂತ ಮಾಯಾ- ಕಲೆಯಿದು ಕಲ್ಯೆಯನಾದಿ ಕಾರ್ಯವಿದು, ಸಲಿಲ ರಸಾದಿ ಶರೀರವೆತ್ತಿ ನಾನಾ- ಲೋಕವೊಡಲಾಗಿ ಒಡಲಾಗಿ ನಿಲ್ಲುತಿಹುದು.
--------------
ನಾರಾಯಣ ಗುರು