ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರನು ಅಂದು ಬರೆದು ಕೀರ್ತಿವೆತ್ತ  ವೇದವೊಂದೋದಿದ ಮಾಮುನೀಂದ್ರನೋ? ಸಾಯದೆ ಒಡಲಿಂದ ಹೋದ ಆ ಪರಮೇಶನ ಪರಾರ್ಥ್ಯ ಭಕ್ತನೋ?
--------------
ನಾರಾಯಣ ಗುರು
ಹರಿಭಗವಾನರವಿಂದಸೂನುವೂ ನಿನ್ನ ಸಿರಿಯಾಟವಿದನರಿಯಲಿಲ್ಲವೊಂದೂ, ಹರ ಹರ ಮತ್ತೆಯಿದಾರರಿವರುಂಟು ಎದೆಯೊಳಗಿದ್ದು ಕುಣಿವ ಮೂರುತಿಯನ್ನು?
--------------
ನಾರಾಯಣ ಗುರು
ಹರಿಯಲು ಇರುಳಲ್ಲಿರುವ ಸೋದರ ಇವನೆನೆ ನೋವುನೀಗುವುದು ಸುತ್ತಲೂ ನೇಸರ ತನ್ನ ಸುತ್ತಲೂ ಮತ್ತೊಂದಿರುಳು ಮೆರೆಯುವುದೇ?
--------------
ನಾರಾಯಣ ಗುರು
ಹರಿವ ಅಂಬರಗಂಗೆ ತನ್ನ ನೀರೊಳು ಸುಳಿಯಂತೆ ಉದಿಸಿಯೇಳುವ ನಾಭಿ- ಗುಂಡಿಯೊಳೇಳುವ ಕಳಿಂದಕನ್ಯೆ ಮೇಲಕ್ಕೆ ಹರಿವಂತ ಹಾಗೆ ರೋಮರಾಜಿ. 
--------------
ನಾರಾಯಣ ಗುರು
ಹಲಮತಸಾರವೂ ಏಕವೆಂದು ಕಾಣದೆ ಜಗದೊಳೊಂದಾನೆಯಲ್ಲಿ ಅಂಧರಂತೆ  ಹಲವಿಧ ತರ್ಕವನ್ನೊದರುತ್ತ ಪಾಮರರು ಅಲೆಯುವುದ ಕಂಡಲೆಯದೆ ಅಡಗಬೇಕು.
--------------
ನಾರಾಯಣ ಗುರು
ಹಲವು ವಿಧವಾಗಿ ಅರಿಯುವುದನ್ಯವೊಂದಾಗಿ- ಮೆರೆಯುವುದೇ ಸಮವೆಂದು ಮೇಲೆ ಹೇಳ್ವ ನೆಲೆಯನರಿತು ನೆಟ್ಟನೆ ಸಾಮ್ಯವೇಳುವ ಕಲೆಯದರೊಳಮರುತ್ತ ಬೆರೆಯಬೇಕು.
--------------
ನಾರಾಯಣ ಗುರು
ಹಳೆಯ ಕರ್ಮಗಳನ್ನೆಲ್ಲವಳಿಸುವ ತೊಂಡೆ- ಹಣ್ಣನ್ನು ಕಾಳಗದಿ ಮೆಟ್ಟುವ ತುಟಿಗಳೂ ತೊಳೆದೆತ್ತಿದ ಮುತ್ತಿನಂತ ಹಲ್ಲೂ ಬೆಳತಿಂಗಳಂತ ನಿನ್ನ ಕೆನ್ನೆದಡಗಳೂ.
--------------
ನಾರಾಯಣ ಗುರು
ಹಾದಿಯೊಳಗಿದ್ದುಬರುವ ಬಾಧೆಯೆಲ್ಲ- ವಳಿಯಬೇಕ್ಕೆಂದೊಮ್ಮೆಯಾದರು ನನಗೆ ಕಣ್ಗಳಿಂದಮೃತ ಸೋರಿಹರಿದು ನಿನ್ನ ಚರಣವೆರಡನೂ ಕಂಡಾಡಲಿಕೆ ಬಯಕೆ. 
--------------
ನಾರಾಯಣ ಗುರು
ಹಾರಯಾ ಜಲದನೀರಯಾಶಮಿತಮಾರಯಾತಪ ವಿದಾರಯಾ ಭೂಮಯಾಧಿಕವಿಕಾರಯಾ ಚಕಿತಚೋರಯಾ ಸಕಲಸಾರಯಾ ವೀರಯಾಚ ಶಿವದಾರಯಾ ಮುಲಿತಹೀರಯಾ ನಮಿತಶೂರಯಾ ಪಾಲಯೇತಿ ಪರಿಪಾಲಯೇತಿ ಪರಿಪಾಲಯೇತಿ ಜಪಮಾಲಯಾ.
--------------
ನಾರಾಯಣ ಗುರು
ಹಿರಿದಾದ ಬಾನಲ್ಲಿ ಬಾಳುವವರಿಗೆ ತಲೆಯಾದ ಇಂದ್ರ ಧರೆಯಲಿ ಜಿತೇಂದ್ರಿಯನ ಶಕ್ತಿಗೆ ಸಲ್ಲುವಂತೊಬ್ಬ ಸಾಕ್ಷಿಯು
--------------
ನಾರಾಯಣ ಗುರು
ಹಿರಿದೂ ಕಿರಿದೂ ನಡುಮಧ್ಯವೂ ಆಗಿ ಅಲೆನೀಗಿ ಏಳುವ ಚಿದಂಬರವೇ ಮಲದ ಮಾಯೆಯೊಳು ಮೋಹಗೊಂಡು ಮನ ನೆಲೆಬಿಟ್ಟು ಸೆಟೆದಲಯದಂತೆ ಪೊರೆಯೋ.
--------------
ನಾರಾಯಣ ಗುರು
ಹುಟ್ಟಿ ಆದಿಯಿಂದ ಒಂದಾಗಿ ಬಂದಿಲ್ಲಿ ಸೃಷ್ಟಿಯೂ ಸ್ಥಿತಿಯೂ ನಾಶವೂ ಮಾಳ್ಪ ಸೂರ್ಯ ನೀಗಿಸು ರಶ್ಮಿಯನ್ನು
--------------
ನಾರಾಯಣ ಗುರು
ಹುಸಿ ನುಡಿವರು ಬಗೆಯ ಹೇಳುವುದು ಕುಂದೆಂದು ನೆನೆಯುತ್ತಲಾಗಿ ಕುಂದಿಲ್ಲ ಬಗೆಯೊಂದೇ ಯಾರೂ ನುಡಿಯಬಾರದು ಹುಸಿಯ.
--------------
ನಾರಾಯಣ ಗುರು
ಹೆಚ್ಚಿದಕಾಂತಿಬೆರೆತ ತ್ರಿವಲಿಯ ಕೆಳಗೆ ಕಟಿಸ್ಥಲದಲ್ಲಿ ಸುತ್ತಿದ ಕಾಂಚನಕಾಂಚಿತುಂಬಿದ ಅರಿವೆಯೂ ಕಟಿಸೂತ್ರವೂ ರೂಢವಾಗಿಬೆಳಗುವ ತಿರುದೊಡೆ ಮಂಡಿಯೂ ಕಾಲ್ಗಳ ಪ್ರೌಢಿಯೂ ಕಾಣಬೇಕೆನಗೆ ಚಂದದಲಿ ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಹೆಸರು ಕಾಪಾಡುವ ಒಳ್ಳೆಯ ನಾರಿಯಿಲ್ಲದಿದ್ದೊಡದೇ ಧರೆಯಲ್ಲಿ ಸಿಂಹಯಾನ ಗಾಂಭೀರ್ಯ ತನ್ನಲಿ ಬಾರದು
--------------
ನಾರಾಯಣ ಗುರು