ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಶ್ರಯವೆಲ್ಲೂ ತುಂಬಿಹನಾದರೂ ಭಕ್ತರಿಗೆ ಇಂತಹದೊಂದು ರೂಪ ಭಜನೆಗೆ ಧರಿಸುವವನು ಆಲಸ್ಯವ ಕಳೆದು ಆ ಪರಬೋಧವ ನೀಡೆನಗೆ ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಸಲೆ ಕಾರುಗೊಂಡ ಮೋಡವನುಂಡು ಕರುಕಾದ ಕೂದಲು ಕಂಡು ವಿಷವನುಂಡ ಕಂಠನಾದರೂ ಕರುಣೆದೋರಲಾಗಿ ಎಳೆಯದಿಂಗಳಿದ್ದು ಮಿಂಚುವ ಎತ್ತರದ ತಲೆಯ ಕೊಳ ತುಳುಕುವ ಕೋಮಳಗೊಡವ ಹೊತ್ತ ಕುಂಜರ
--------------
ನಾರಾಯಣ ಗುರು
ಸವನವಳಿದು ಸಮತ್ವವಾಂತು ನಿಲ್ವುದಿಲ್ಲ ಅವನಿಯೊಳ್ಯಾರೂ, ಅನಾದಿಲೀಲೆಯಹುದು; ಅವಿರಳವಾಗುವುದಿದೆಲ್ಲವನ್ನೂ ಅರಿದೊಡೆ ಅವಂಗೆ ಭವಿಸುವುದೆಲ್ಲೆಯಿಲ್ಲದ ಸುಖವು.
--------------
ನಾರಾಯಣ ಗುರು
ಸವಿ ಬೆಳಕು ಸ್ಪರ್ಶಗಳಳಿದು ಶೀತ- ರಶ್ಮಿಗವಮಾನವಿಕ್ಕುವ ನಿನ್ನ ನೋಟ ಭವಮೃತಿ ಬುಡ ಕಡಿದುಹೋಗುವಂತೆ ನೀಡಲಿವನಿಗದಕ್ಕೆ ವಂದನೆಯು ನಿನಗೆ.
--------------
ನಾರಾಯಣ ಗುರು
ಸಾಂಬಸದಾಶಿವಶಂಕರಲಿಂಗಂ ಕಾಮ್ಯವರಪ್ರದಕೋಮಳಲಿಂಗಂ ಸಾಮ್ಯವಿಹೀನಸುಮಾನಸಲಿಂಗಂ ತನ್ಮೃದುಪಾತುಚಿದಂಬರಲಿಂಗಂ
--------------
ನಾರಾಯಣ ಗುರು
ಸಾಧಿಸುವುದೆಲ್ಲವೂ ಸಮಸ್ತಭುವನಗಳಿಗೆ ಹಿತ ನೀಡಿ ನೀ ಚೇತನೆಯಲ್ಲಿರುವುದರಿಂದ ಜನನೀ ಚೈತನ್ಯವಾಗಿ ಸದಾ ಬೋಧಿಸುವುದೆಲ್ಲವನು ಅಂಬುಧಿಯಲಿ ಬಂದೆದ್ದು ಬೆರೆಯುವ ಸ್ರೋತವೆಂಬಂತೆ ನಿನ್ನಡಿಗೆ ಬಂದು ಮಾರ್ಪಡುವುದು.
--------------
ನಾರಾಯಣ ಗುರು
ಸಾಶಯಾ ವಿಧುತಪಾಶಯಾ ವಿಧೃತಪಾಶಯಾ ಸರಜನೀಶಯಾ ಶೋಷಯಾನಪತಪಾಶಯಾ ಕುಚವಿಕೋಶಯಾ ವಿನುತಮೇಶಯಾ ಸೇನಯಾ ಸುಮಥನಾಶಯಾ ಹೃತಹರಾಶಯಾ ದಮಿತನಾಶಯಾ ಹೇಲಯಾದೃತಸುಕೋಶಯಾ ದಿವಿ ವಿಮೋಚಯೇ ವಿಮತನಾಶಯಾ.
--------------
ನಾರಾಯಣ ಗುರು
ಸಿರಿದೇವಿ ತೊಡುವ ಆ ತಾವರೆಹೂವಿನಂತೆ  ಶೋಭೆಯುಳ್ಳ ನಿನ್ನಡಿಗಳು ನನ್ನ  ಒಳಹೂವಲ್ಲಿ ಬಳಿಬಂದು, ಅಮರರಿಗೆ  ಬೀಜವಾದ ಮೂಲಮುರುಗನೇ, ನೀಯೆನ್ನ ತಾಪಗಳ ಹರಿದು ಕೂಡಲೆ ಹೆನ್ನವಿಲಮೇಲೇರಿ  ವಲ್ಲಿಯೊಂದಿಗೆ ಈ  ಸಂಸಾರಸಾಗರವ ಕಾಲಿಟ್ಟೊದ್ದು ಈಜುವ ನನ್ನ  ಸ್ಥಿರವಾಗಿ ಪೊರೆಯಬೇಕೋ 
--------------
ನಾರಾಯಣ ಗುರು
ಸಿರಿದೇವಿಯ ಮಗನಾದ ಮಾರನೂ ನಿನ್ನ  ಮೈಕಾಂತಿಯಿಂದ ಉರುಳಿ  ಸಾವಿರಹೆಜ್ಜೆ ದೂರವಿದ್ದು ಕಂಡೊಡೆಯೂ  ಮನಸ್ಸಾಗದು ನಿನ್ನ ಮೈಯಿಂದಾಗಿ   ಭಿಕ್ಷೆ ಬೇಡುವರಿಗಲ್ಲದೆ ಉಂಟಾಗದು ಶಿತಿಕಂಠಾದಿ  ದೇವತೆಗಳ ಕೃಪೆಯು; ನೀನು ಬಾನಲ್ಲಿ ಮೆರೆಯುತ್ತ ಅಡಿಯನಲಿ  ಕೃಪೆದೋರೊ ಮುರುಗನೇ
--------------
ನಾರಾಯಣ ಗುರು
ಸಿಲುಕುತ ಹಚ್ಚುತ ಉರುಳಿ ಹೆಣದ ಗುಡಿಸಲಲಿ ನೆಲೆಗೊಂಡು ಗುಣಗಳೊಡು ನೆಲೆಗೊಂಡು ಕುಡಿವ ಒಲವನೀರು ಅಡಿಮುಟ್ಟಿ ನನ್ನೊಳಗೆ ತುಂಬಿರು ನೀ.
--------------
ನಾರಾಯಣ ಗುರು
ಸೀಮಾವಿಹೀನಗುಣ ಸೋಮಾವಚೂಡ ಜಿತ- ಕಾಮಾಭಿಮಾನ ಸುಮತೇ ಭೂಮಾಧವಾದಿನುತ ಭೂಮಾಸಮಾನ ಪುರ- ಕಾಮಾಂಧಕಾಂತಕ ಗುರೋ ನಾಮಾಲಿ ಜಾಪಿಜನ ಕಾಮಾವಸಾನ ಫಲ- ದಾಮಾಶಮಾತನು ವಿಭೋ ಹೇಮಾರುಣಾ’ಹಿತನಿಕಾಮಾತಿಭೀಮ ಗುಹ ಸಾಮಾದಿ ವೇದವಿದಯಂ.
--------------
ನಾರಾಯಣ ಗುರು
ಸುಖವದೊಮ್ಮೆಯೂ ಇಲ್ಲ ದುಃಖವಲ್ಲದೆ ಇಹಪರಲೋಕಗಳು ಕೊಂಚವೂ ಇಲ್ಲ ಸಕಲವಿದು ಹೀಗೆ ಶಾಸ್ತ್ರಸಮ್ಮತವು ನಾ ಹಗಲಿರುಳೊಂದೂ ಅರಿಯಲಿಲ್ಲ ಪಾಹಿ.
--------------
ನಾರಾಯಣ ಗುರು
ಸುತ್ತಿ ಬರುವಾಳುಗಳನೆಲ್ಲ ಬೆಲೆಗೊಂಡಿಲ್ಲಿ ಮೆರೆದು ಬರುವೆ ನೀನೆಂದು ಬಲ್ಲೆ ನಾನಿಂದಿಗೂ  ಅಲೆವವರೊಳು ಎದೆ ಅಲೆಯದೆ ಒಂದಾಗಿಲ್ಲಿ ಕೈಮುಗಿವೆ ಉಸಿರೊಡನೆ ನಿನ್ನಡಿಗಳಿಗೆಂದು 
--------------
ನಾರಾಯಣ ಗುರು
ಸುಮಶರಕಾರ್ಯ ತೊಲಗಿಸುತ್ತ ನೀನೇ ನಿಲ್ಲಬೇಕೆನ್ನ ಮನದ ಕುಸುಮದಲ್ಲಿ ಕುಮತಿಕುಲ ಕೊಲೆಯಾನೆಯಂತೆ ಗುದ್ದಿ- ತಿಮಿರನೆರೆಯು ತುಳಿಯದಂತಿರ್ಪುದಕ್ಕೆ.
--------------
ನಾರಾಯಣ ಗುರು
ಸೃಷ್ಟ್ವೇದಂ ಪ್ರಕೃತೇರನುಪ್ರವಿಶತೀ ಯೇಯಂ ಯಯಾ ಧಾರ್ಯತೇ ಪ್ರಾಣೇತಿ ಪ್ರವಿವಿಕ್ತಭುಕ್ ಬಹಿರಹಂ ಪ್ರಾಜ್ಞಃ ಸುಷುಪ್ತೌ ಯತಃ ಯಸ್ಯಾಮಾತ್ಮಕಲಾ ಸ್ಫುರತ್ಯಹಮಿತಿ ಪ್ರತ್ಯಂತರಂಗಂ ಜನೈಃ ಯಸ್ಯೈ ಸ್ವಸ್ತಿ ಸಮರ್ಥ್ಯತೇ ಪ್ರತಿಪದಾ ಪೂರ್ಣಾ ಶೃಣು ತ್ವಂ ಹಿ ಸಾ.
--------------
ನಾರಾಯಣ ಗುರು