ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪಜಯವೊಂದೂ ಎನಗೆ ಬಾರದಂತೆ ತಪದಲ್ಲಿ ನಿರಂತರವೆನ್ನ ಮಲವೆಲ್ಲವೂ ಸಪದಿ ದಹಿಸಿ ಸುಖ ತಾರಲಿಕ್ಕೆನ್ನ- ಜಪಕುಸುಮಸಿರಿಮೈ ಜಯಹೊಂದಲಿ.
--------------
ನಾರಾಯಣ ಗುರು
ಅಪರವಿದೆಲ್ಲವನೂ ಪರಿಚಯಿಸಿ ಇದರೊಳಿದ್ದು  ಅಪಜಯವಾಗಿ ಬಂದುದಿದನು ಕಂಡರಿಯೊ ಮನವೇ ಜಪಮಾಲೆ ಅಂಗದಲ್ಲಿದ್ದು ಜಪಿಸುವೊಡಿಲ್ಲಿ ಉಪರತಿ ಬರುವುದು ಒಳಹೂವೊಳದುವೆ ಇಂಪು 
--------------
ನಾರಾಯಣ ಗುರು
ಅಮರವಾಹಿನಿ ಉಕ್ಕಿ ಬರುವ ತೆರೆ- ಗಮರವೆಂಬಂತಿರುವ ಫಣಗಳೂ ಸಮರಸದೊಳರಳಿಸಿ ಉರಗಗಳೊಡನೆ ಕೂಡಿ ಜಡೆಯಾಡಿ ಸನಿಹ ಬಾ ನೀ.
--------------
ನಾರಾಯಣ ಗುರು
ಅಮೃತ ಹರಿವ ತೆರೆಮಾಲಯಂತೆ ದೂಡುವ ತಿಮೃತಯುತ ಸಿರಿನುಡಿಯೆನ್ನ ಕಿವಿಗೆ ಕೆಂಡವುರಿದುಕ್ಕಿ ಏಳುವ ಮನದಕಿಚ್ಚಿಗೆ ಅಮೃತ ಸುರಿದಂತಿರುವ ನೋಟವೂ.
--------------
ನಾರಾಯಣ ಗುರು
ಅಯಾಚಿತಮಲಿಪ್ಸಯಾ ನಿಯತಿದತ್ತಮನ್ನಂ ಮುನಿಃ ತನೋಃ ಸ್ಥಿತಯ ಅನ್ವದನ್ ಪಥಿ ಶಯಾನಕೋ’ವ್ಯಾಕುಲಃ ಸದಾತ್ಮದೃಗನಶ್ವರಂ ಸ್ವಪರಮಾತ್ಮನೋರೈಕ್ಯತಃ  ಸ್ಫುರನ್ ನಿರುಪಮಂಪದಮುಪೈತಿ ಸಚ್ಚಿತ್ಸುಖಂ.
--------------
ನಾರಾಯಣ ಗುರು
ಅಯ್ಯೊ ಬಿದ್ದಳಲುವೀ ಹೊಲೆಯರಿಗೆ ನೀನೆನ್ನ ಮಯ್ಯನಿತ್ತು ಬೆಲೆಕಟ್ಟಿ ಮೆರೆವೆ ಮುನ್ನ ಕೈನೀಡು ದಡಸೇರಿಸಬೇಕೆನ್ನನೀ ಸುಳ್ಳಿಂದ ಬಂದು ಹೊಸಮೈಯನಪ್ಪಿಕೊಳಲ
--------------
ನಾರಾಯಣ ಗುರು
ಅಯ್ಯೋ ಈ ಬಿಸಿಲು ತಾಕಿ ಬೆಂದು ಕರಗಿ  ಬಾಡಿದ್ದೇನೆ ನೀನಲ್ಲದೆ  ಕೈ ನೀಡಲು ಕಂಡರೆ ಒಬ್ಬ ಕರುಣಾಮಯಿ  ಅವನು ಯಾರಹೋ  ಹಸಿವಾಂತೀ ಜನ ಕಡಲಲ್ಲಿ ಬೀಳುವ ಮುನ್ನ  ಹಬ್ಬಿ ಧರೆಯಲ್ಲಿ  ಸುರಿವಂತಾಗಲಿ ಹೆಮ್ಮಳೆ ಕೃಪೆಯಿಂದ  ಗಂಗಾನದಿಯ ಧಾಮವೇ 
--------------
ನಾರಾಯಣ ಗುರು
ಅಯ್ಯೋ ನೀನೆನ್ನೊಳಗೂ ಸುಳ್ಳೇ ಹೊರಗೂ ಹೊದ್ದು ಮೆರೆಯುವುದು ಮೈಯಾರಲು ನಾ ಬಂದೆನು ಕೈಹಿಡಿಯುತ ನೀಗಿಹೋಗುವುದಿನ್ನು.
--------------
ನಾರಾಯಣ ಗುರು
ಅರಸಿದೊಡೆ ನೀರಾಗಿಬಿಡುವುದು ತೆರೆಗಳು ಹಗ್ಗವಾಗುವುದು ಹಾವು ಮಣ್ಣಾಗುವುದು ಮಡಿಕೆ ನೇರವಾಗುವುದು ಲೋಕ ಅಲ್ಲದೊಡೆ ಉಂಟೆಲ್ಲವೂ  ಬೇರಾದ ನಿನ್ನ ಕಳಲನ್ನಾರಾಧಿಸಲು ಬಿಡು ಯಾರಿಂದ ವರವೊಂದು ನೇರಾಗಿ ಬಾರೆ ನೀ ಯಾರಿಲ್ಲ ಗತಿ ಬೇರೆ, ಹೇ ರಾಜಯೋಗಜನನೀ.
--------------
ನಾರಾಯಣ ಗುರು
ಅರಿಯಲ್ಪಡುವ ಇದಕೆ ಒಲಿದು ಈ  ಅರಿವೇಳು ಒಂದಿಲ್ಲಿ ತಾನು ಎಂಟಾಗಿ  ಅರಿವು ಹೀಗೆ ಬೇರುಬೇರಾಗಿ ಅರಿಯಲ್ಪಡುವುದು ಬಿಡಿಸಿದೊಡೆ.
--------------
ನಾರಾಯಣ ಗುರು
ಅರಿಯಲ್ಪಡುವ ಇದು ಬೇರಲ್ಲ  ಅರಿವಪ್ಪುದು ಅರಸುವ ಹೊತ್ತು ಅರಿವಿದರಲ್ಲಿ ಒಂದಾದುದರಿಂದ ಅರಿವಲ್ಲದೆ ಎಲ್ಲೂ ಇಲ್ಲ ಬೇರೊಂದು.
--------------
ನಾರಾಯಣ ಗುರು
ಅರಿವನ್ನೂ ಮಮತೆಗಧೀನಗೊಳಿಸಿ  ಹೇಳ್ವರಿದರ ಪರಮಾರ್ಥವ ನೆನೆಯದಂತೆ, ಹೇಳಿದರೂ ಆ ಪರತತ್ವವೆಂಬಹಾಗೀ- ಅರಿವು ಅನ್ಯವಾಗದು ಅರಿವವಂಗೆ 
--------------
ನಾರಾಯಣ ಗುರು
ಅರಿವನ್ನೂ ಮೀರಿ ಅರಿಯುವವ ತನ್ನ ಒಡಲೊಳು ಹೊಂದಿ ಹೊರಗೂ ಪ್ರಜ್ವಲಿಸುವ ತಿರುಳಿಗೆ ಕಣ್ಗಳೈದನು ಒಳಗಡಗಿಸಿ ಬಿರುಬಿರನೆ ಬಿದ್ದು ಬಾಗಿಯೋದಬೇಕು.
--------------
ನಾರಾಯಣ ಗುರು
ಅರಿವಿಂಗಳತೆಯಿಲ್ಲದೆ ಯಾವು- ದರಿವುದರಿವಾಗಿ ಅದೂ ಬೆಳಗುತಿಹುದು; ಅರಿವಿನೊಳು ಏಳುವ ಕನಸಿಲ್ಲಿ ಅರಿವಾಗುವಂತೆ ಇದೆಲ್ಲವಲ್ಲಿ.
--------------
ನಾರಾಯಣ ಗುರು
ಅರಿವಿಗೆ ಶಕ್ತಿ ಅನಂತವುಂಟಿದೆಲ್ಲ ಕೊನೆಗೊಳ್ಳಬಹುದು ಸಮವನ್ಯವೆಂದು ಹೀಗೆ ಇದ್ದಿರುವಾಗಿ ಇದರೊಳನ್ಯಸಾಮ್ಯವಾಂತ ಒಡಲೊಳಡಗಿ ತಿಳಿದು ಎಚ್ಚರಿಸಬೇಕು.
--------------
ನಾರಾಯಣ ಗುರು