ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಳೆ ಸುರಿಯದಂತಾದೊಡೆ ಬಾನವರಿಗೂ ಮನುಜರಿಂದ ಮಖವೂ ಪೂಜೆಯೂ ಧರೆಯಿಂದ ಹೋಗದಂತಾಗುವುದು
--------------
ನಾರಾಯಣ ಗುರು
ಮಳೆ ಸುರಿಯುವಂತೆ ಕಂಗಳಿಂದ ಹರಿದುಹೋಗಿ ಕರಗಿ ತಿರುಮನವು ಹಳೆಯ ಭಕ್ತಜನ ಭವಸಾಗರ- ಗುಂಡಿಯದರಿಂದ ಪಾರಾದೆ ಕಶ್ಮಲ ನಾನು. 
--------------
ನಾರಾಯಣ ಗುರು
ಮಳೆಯಾದೊಂದು ಸಂಪತ್ತಿನ ಸಂವೃದ್ಧಿ ಕಡಿಮೆಯಾದೊಡೆ ಆರಂಬ ಗೆಯ್ಯದೆ ಇಲ್ಲಿ ಇರುವರು ರೈತರೊಬ್ಬೊಬ್ಬರೂ
--------------
ನಾರಾಯಣ ಗುರು
ಮಾಂಸವುಣ್ಣುವುದೂ ಪ್ರಾಣಿ- ವಧೆಯೂ ಪೀಡೆ ಕೊಡುವುದೂ  ಮನದಲ್ಲಿ ನೆನೆದು ಬಿಟ್ಟುಬಿಡಿರಿ  ಮಾಂಸಭೋಜನವನ್ನೆಲ್ಲರೂ.  
--------------
ನಾರಾಯಣ ಗುರು
ಮಾಡುವ ಕರ್ಮಗಳೆಲ್ಲವೂ ಅರಿಯುತ್ತಿರುವ ದೇವ ನೀ ವಂಚನೆಗೈಯ್ಯುವ ಪಾಪವ ನಮ್ಮಿಂದ ನೀಗಿಸು ನಿಮಗೆ ನಾವು ಮಾಡುವೆವು ನಮೋವಾಕ ಮಹತ್ತರ
--------------
ನಾರಾಯಣ ಗುರು
ಮಾತಂಗಶೃತಿಭೂಷಿಣೀಂ ಮಧುಧರೀ- ವಾಣೀಸುಧಾಮೋಷಿಣೀಂ ಭ್ರೂವಿಕ್ಷೇಪಕಟಾಕ್ಪವೀಕ್ಪಣವಿಸರ್- ಗ್ಗಕ್ಷೇಮಸಂಹಾರಿಣೀಂ ಮಾತಂಗೀಂ ಮಹಿಷಾಸುರಪ್ರಮಥಿನೀಂ ಮಾಧುರ್ಯಧುರ್ಯಾಕರ- ಶ್ರೀಕಾರೋತ್ತರಪಾಣಿಪಂಕಜಪುಟೀಂ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಮಾತಂಗಾನನಬಾಹುಲೇಯಜನನೀಂ ಮಾತಂಗಸಂಗಾಮಿನೀಂ ಚೇತೋಹಾರಿ ತನುಚ್ಛವೀಂ ಶಫರಿಕಾ- ಚಕ್ಷುಷ್ಮತೀಮಂಬಿಕಾಂ ಜೃಂಭತ್ ಪ್ರೌಢನಿಸುಂಭಸುಂಬಮಥಿನೀ- ಮಂಭೋಜಭೂಪೂಜಿತಾಂ ಸಂಪತ್ಸಂತತಿದಾಯಿನೀಂ ಹೃದಿ ಸದಾ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಮಾದಿಗಿತ್ತಿಯಿಂದ ಮುನ್ನ ಪರಾಶರ ಮಹಾಮುನಿ ಹುಟ್ಟಿದ ವೇದ ಸೂತ್ರಿಸಿದ  ಮುನಿಯು ಬೆಸ್ತಕನ್ನೆಯಲಿ.
--------------
ನಾರಾಯಣ ಗುರು
ಮಾನವರೆಲ್ಲರೂ ಒಂದೇ ರೀತಿ ಬಯಸುವುದು ಸುಖವನ್ನೇ. ಲೌಕಿಕವಾಗಿಯೂ ವೈದಿಕವಾಗಿಯೂ ನಡೆಸಲಾಗುತ ಬಂದಿರುವ ಎಲ್ಲ ಸಭೆಗಳ ಲಕ್ಷ್ಯವೂ ಇದೇ ಆಗಿದೆ. ಕ್ಷಣಭಂಗುರಗಳಾದ ವಿಷಯಸುಖಗಳಿಗಿಂತ ಮಾನವಾತ್ಮಕ್ಕೆ ಹೆಚ್ಚು ಪ್ರಿಯವಾಗಿ ಕಾಣುವುದು ಸುಚಿರವಾಗಿ, ಶಾಶ್ವತವಾಗಿ ಬೆಳಗುವ ಸುಖದಲ್ಲಿಯೇ. ಇದನ್ನು ಲಕ್ಷ್ಯವಾಗಿಟ್ಟೂಕೊಂಡು ಮಾನವಾತ್ಮವು ಮಹತ್ತರವಾದ ಪಯಣವೊಂದನ್ನು ಬೆಳೆಸುತ್ತಿದೆ. ಆಯಾ ಸಮುದಾಯಗಳು ಅದೆಷ್ಟು ಆಂತರಿಕ ಸುಧಾರಣೆಯನ್ನು ಗಳಿಸುತ್ತವೆಯೋ ಅಷ್ಟರಮಟ್ಟಿಗೆ ಈ ಸುಖಪ್ರಾಪ್ತಿಯ ಆಳವೂ ಉತ್ತಮಗೊಳ್ಳುತ್ತಿರುತ್ತದೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಆತ್ಮೀಯವಾಗಿಯೂ ಉಳ್ಳ ಎಲ್ಲ ಶ್ರೇಯಸ್ಸುಗಳೂ ಸಮುದಾಯವೊಂದಕ್ಕೆ ಬಂದುಕೂಡುವುದರಲ್ಲಿ ಸಮುದಾಯದ ಸದಸ್ಯರ ಧರ್ಮನಿಷ್ಠೆ ಹಾಗು ಸದಾಚಾರ ಬಹು ನೆರವಾಗುತ್ತದೆ. ಇವುಗಳನ್ನು ಸಮುದಾಯದಲ್ಲಿರುವ ಎಲ್ಲ ಜನರಿಗೂ ದೊರಕುವಂತೆ ಮಾಡಲು ಆರಾಧನೆಯ ಸ್ಥಳಗಳೂ ಆಲಯಗಳೂ ಬಹಳ ಉಪಯುಕ್ತವೆಂದು ಕಂಡುಬಂದಿದೆ. ಆದರೆ, ಅವೆಲ್ಲ ಉಂಟಾಗಲು ಸಮುದಾಯದ ಸದಸ್ಯರ ಆರ್ಥಿಕ ಏಳಿಗೆಯು ಅತ್ಯಂತ ಅಗತ್ಯವಾಗಿದೆ. ಇದಕ್ಕೆ ಆರಂಬ, ವ್ಯವಸಾಯ, ತಾಂತ್ರಿಕ ಶಿಕ್ಷಣ ಮೊದಲಾದವು ಪರಿಷ್ಕೃತವಾಗಿರಬೇಕು. ಲೌಕಿಕ, ಅತ್ಮೀಯಗಳೆರಡೂ ಪರಸ್ಪರ ಬೇರೆಯಲ್ಲ. ಅವೆರಡೂ ವಾಸ್ತವದಲ್ಲಿ ಒಂದೇ ಉದ್ದೇಶದಿಂದ ವರ್ತಿಸುತ್ತವೆ. ದೇಹದ ಎಲ್ಲ ಅಂಗಗಳೂ ಕೂಡಿ ವರ್ತಿಸುವುದರಿಂದ ದೇಹವು ಸುಖವನ್ನು ಅನುಭವಿಸುತ್ತದೆ. ಅಂತೆಯೇ, ಮಾನವಸಮುದಾಯದ ಪರಮಲಕ್ಷ್ಯವಾದ ಸುಖಪದವನ್ನು ಪಡಯಲು ಆತ್ಮೀಯವಾಗಿಯೂ, ಲೌಕಿಕವಾಗಿಯೂ ಇರುವ ಎಲ್ಲ ವಿಧದ ವ್ಯವಹಾರಗಳ ಏಕೀಕೃತ ಕಾರ್ಯಾಚರಣೆ ಅಗತ್ಯವಾಗಿದೆ.
--------------
ನಾರಾಯಣ ಗುರು
ಮಾನ್ಯಂ ಮುನಿಭಿರಮಾನ್ಯಂ ಮಂಜುಜಟಾಸರ್ಪಂ ಜಿತ ಕಂದರ್ಪಂ ಆಕಲ್ಪಾಮೃತತರಲತರಂಗಮನಾಸಂಗಂ ಸಕಲಾಸಂಗಂ ಭಾಸಾ ಹ್ಯಧರಿತಭಾಸ್ವಂತಂ ಭವಿಕಸ್ವಾಂತಂ ಜಿತಭೀಸ್ವಾಂತಂ ಕಾಮಂ ಕಾಮನಿಕಾಮಂ ಪ್ರಣಮತ ದೇವೇಶಂ ಗುಹಮಾವೇಶಂ.
--------------
ನಾರಾಯಣ ಗುರು
ಮಾಯೈವ ಜಗದಾಮಾದಿ- ಕಾರಣಂ ನಿರ್ಮಿತಂ ತಯಾ ಸರ್ವಂ ಹಿ ಮಾಯಿನೋ ನಾನ್ಯ- ದಸತ್ಯಂ ಸಿದ್ಧಿಜಾಲವತ್.
--------------
ನಾರಾಯಣ ಗುರು
ಮಿರುಗಿಚಿಮ್ಮುವ ರತ್ನದಬೊಬ್ಬೆಗಳು  ಕಣಕಾಲಿಗೆ ತಿರುಗಾಣಿಕೆಯಿಟ್ಟು ಪುಟ್ಟ ಕೆಂದಾವರೆಹೂವಡಿಯಲ್ಲಿ  ದಾಸ್ಯವೃತ್ತಿಯ ನಡೆಸಲು ತನ್ನಲಿ ಹೊನ್ನಗೆಜ್ಜೆಯ ಝಣಝಣ ನಾದದಿಂದ ಎದ್ದುಬಂದೆನ್ನ ಮುಂದೆ ಹೊನ್ನಬಳ್ಳಿಯೇ, ನಿನ್ನ ಹೊಸತನಗಳಡಿಯನು  ಕಾಂಬುದೆಂದು ಮುದ್ದಿನ ಕಂದಾ 
--------------
ನಾರಾಯಣ ಗುರು
ಮುಂದೆಸಾಗಿ ವಿಷಯಕುರಿತುಳ್ಳ ವೃತ್ತಿ  ಮುಂದೆನಿಲ್ವ ಆವರಣದ ತೆರೆ ನೀಗಿಸುವುದು ಬಳಿಕ ಕಾಣುವ ಅರಿವೂ ಪ್ರಭೆಯ ಬೆನ್ನಹತ್ತಿ ಕಣ್ಣೆಂಬ ಹಾಗೆ ಅರಿವು ಕಾಣುವುದಿಲ್ಲ ತಾನೇ.
--------------
ನಾರಾಯಣ ಗುರು
ಮುಚ್ಚಲಾಗುವುದು ಹೊಂಬಾತ್ರೆಯಿಂದ ಸತ್ಯವದರ ಮುಖವು ಬಿಚ್ಚುವುದು ಅದನ್ನು ನೀ ಪೂಷಾ ಸತ್ಯಧರ್ಮಂಗೆ ಕಾಣಲು
--------------
ನಾರಾಯಣ ಗುರು
ಮುಡಿನಡುವಾದಿ ತೊಲಗಿ ಮೂರೂ ಒಂದಾಗಿ ಚಂದದಿ ನಿಂತು ಬೆಳಗುವ ಬೆಳಕಿನ ಸುಡುಬೆಳಕ ಸುಟ್ಟು ತೊಡೆದು ಶೋಕವಾದ ಕಡಲನದರಿಂದ ದಾಟಿಬಿಡುವನು. 
--------------
ನಾರಾಯಣ ಗುರು