ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾನಿಂದ ಮಳೆಯ ಹನಿ ಬೀಳದಿದ್ದೊಡೆ ಎಲ್ಲಿಯೂ ಹಸಿರು ಹುಲ್ಲೊಂದೂ ಕೂಡ ಕಾಣಲಾಗದು ಕಣ್ಣೊಳು.
--------------
ನಾರಾಯಣ ಗುರು
ಬಾರದು ಹೇಳಲು ಪ್ರಾಣ ದೊಂದಿಗೆ ಹೆಬ್ಬಯಲಾದ ನಿನ್ನ ಮಹಿಮೆ ಕಿರಿದೂ ನಿನ್ನ ಕೃಪೆಯಿಲ್ಲದೆ ಸುಮ್ಮನೆ ನಾನಿಲ್ಲಿರುವೆನೇ ಶಿವನೇ.
--------------
ನಾರಾಯಣ ಗುರು
ಬಾಲಾರ್ಕಾಯುತಕೋಟಿಭಾಸುರಕಿರೀ- ಟಾಮುಕ್ತಮುಗ್ಧಾಲಕ- ಶ್ರೇಣೀನಿಂದಿತವಾಸಿಕಾಮರುಸರೋ- ಜಾಕಾಂಚಲೋರುಶ್ರಿಯಂ ವೀಣಾವಾದನಕೌಶಲಾಶಯಶಯ- ಶ್ರ್ಯಾನಂದಸಂದಾಯಿನೀ- ಮಂಬಾಮಂಬುಜಲೋಚನಾಮನುದಿನಂ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಬಾವುಗಳಂತೆ ಹುಟ್ಟಿ ಎದೆಯಮೇಲೆ ಕರಳು ಕೀಳುವುದಕ್ಕೆ ಕಚ್ಚೆಕಟ್ಟುತ ತರನೋಡಿ ಬರುವ ಕಿಚ್ಚಿನ ಹಗೆಗೆನ್ನ ಇನ್ನೊಮ್ಮೆಯೂ ಕಳಿಸದಿರು ಮಹೇಶನೇ!
--------------
ನಾರಾಯಣ ಗುರು
ಬುಗುರಿಯನ್ನು ಬೆರೆಗುಗೊಳಿಸುವ ಭ್ರಮಣವೇಗದ ಮತಿಯಿಂದ ಬಂದು ಅಂಬರದಲ್ಲಿ ನಿಲ್ಲಲಿವನು ಶಕ್ತಿಹೀನನೆಂದು ಬಗೆಯುವುದು ನೀ ಒಲವಬೇಡಿ ಅಡಿಗಳಹೊಗಳಿ ನಿಲ್ಲುವ ಅಗತಿಗೆ ಸದ್ಗತಿಯಿಕ್ಕುವ ನಿನ್ನ ಪಾದದಲಿ ಲಯಿಸಿಕೊಳ್ಳಲು ನಿಯತ ವರವ ಕೊಡು ಮಂಗಲೇ.
--------------
ನಾರಾಯಣ ಗುರು
ಬುರುಡೆಯಲಿ ಹಚ್ಚಿ ರಂಧ್ರದ ಸಿರಿಬಯಲಿನತ್ತ  ಹೊಯ್ ಹೊಯ್ಯೆಂದು ಹೂಡುತ್ತ ಕುದುರೆಯ  ನಡುಬೀದಿಯಲ್ಲೋಡಿಸಿ ಬೇಗನೆ ಒಡಲಗೂಡಲ್ಲಿ ಅತಿಚಂಚಲ ಸುಳಿಯುವ ಪಂಚರಾಜರುಗಳು ಹೊರಡುವಮುನ್ನ ಗುಂಪುವಾದ್ಯದೊಡನೆ ಕೋಟೆಯೊಳಗೇರಿ ಸುಖಿಸಲು ನೀನು ನೀಡು ವರವ.
--------------
ನಾರಾಯಣ ಗುರು
ಬೆಳಕು ಮೊದಲಾದ ಹಣ್ಣೈದನುಂಡು ನಾರುವ ನಳಿಕೆಯಲ್ಲೇರಿ ನಯದಲ್ಲಿ ತಿರುಗಿಯಾಡುವ ಗಿಣಿಗಳೈದನ್ನು ಹರಿದು ಕೆಳಗೆಸೆಯುವ ಬೆಳಗಿನೊಡಲೆತ್ತಿಯೊಳಗೆ ಬೆಳಗಬೇಕು.
--------------
ನಾರಾಯಣ ಗುರು
ಬೆಳಕುಬೆಳದಿಂಗಳ ನುಂಗಿ ಕೆಂಡಬೆಳಗನಡುವೆ  ಕಾಲನೂರಿಹಿಡಿದಾ ನವಿಲಮೇಲಾಡುವ ಕಂದಾ  ಮರೆಯದಿರು ಮನೋಮೌನಬೀಡಿನ ಬೆಳಕೇ ರೈಲಿನ ವೇಗವನ್ನು ಜಯಿಸುವ ಜರೆನರೆ ಮೊದಲಾದ ಮೂಢರೂ ನಾನೂ ಕೂಡಿ ಈ ಜಯಿಲೊಳಿರಲಾರೆ  ಬೇಗನೆನ್ನ ಪರಮನೇ ಚಿತ್ಸುಖವನೀಡೋ ನೀನು.
--------------
ನಾರಾಯಣ ಗುರು
ಬ್ರಹ್ಮೈವಾಹಮಸ್ಮಿ.
--------------
ನಾರಾಯಣ ಗುರು
ಭಂ ಭಂ ಭಂ ಭಾಗಧೇಯಂ ಭಗವದನುಚರ- ಪ್ರಾಂಜಲಿ ಸ್ತೋತ್ರಪೂರಂ ಭಿಂ ಭಿಂ ಭಿಂ ಭೀಮನಾದಾಂತಕಮದನಹರಂ ಭೀಷಿತಾರಾತಿವರ್ಗಂ ಭುಂ ಭುಂ ಭುಂ ಭೂತಿಭೂಷಾರ್ಚಿತಮಮಿತಸಮ- ಸ್ತಾರ್ಥಶಾಸ್ತ್ರಾಂತರಂಗಂ ಭೌಂ ಬೌಂ ಭೌಂ ಬೌಮಮುಖ್ಯಂ ಗ್ರಹಗಣನಪಟುಂ ಭಾವಯೇ ಬಾಹುಲೇಯಂ.
--------------
ನಾರಾಯಣ ಗುರು
ಭಕ್ತಪ್ರಿಯಾಯ, ಭವಶೋಕವಿನಾಶನಾಯ  ಮುಕ್ತಿಪ್ರದಾಯ ಮುನಿವೃಂದನಿಷೀವಿತಾಯ ನಕ್ತಂದಿವಂ ಭಗವತೇ ನತಿರಸ್ಮದೀಯಾ     ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
--------------
ನಾರಾಯಣ ಗುರು
ಭಕ್ತರಲಿ ಒಲುಮೆಯುಂಟು ಬೂದಿ ಎಳೆಹೂ  ಕಳಭದೊಂದಿಗೆ ತೊಟ್ಟು ಬೆಳಗುವ ಎದೆಯಲ್ಲಿ ನೀಗುವ ಮನದ ಕಿಚ್ಚು ಒಲುಮೆಯಿಂದ  ಬೆಟ್ಟದ ಸಾರವಾದ ಎನ್ನ ಕಲ್ಲೆದೆಯೇ, ಉಕ್ಕುವ ಭಕ್ತಿಯಿಂದ ಒಳಹೂವನರಸು, ಬೆಳಕಲಿ ಆಗ ಸಿರಿರೂಪವಷ್ಟೂ   ಕರಗಿ ದಹಿಸುವುದು ನೆರೆನರಕವೂ   ಬಾಣವಿಕ್ಕುವ ಪಂಚಶರನ ದರ್ಪವೂ 
--------------
ನಾರಾಯಣ ಗುರು
ಭಕ್ತಿರಾತ್ಮಾನುಸಂಧಾನ- ಮಾತ್ಮಾನಂದ ಘನೋ ಯತಃ ಆತ್ಮಾನಮನುಸಂಧತ್ತೇ ಸದೈವಾವಿದಾತ್ಮನಾ.
--------------
ನಾರಾಯಣ ಗುರು
ಭಗವತಿಯವ್ವ ಹಂಚಿಯರ್ಧ ಕೊಂಡಳು ಅರ್ಧ ಮುಕುಂದಗೆ ನೀಡಿ ಮುನ್ನವೇ ನೀ ಭಗವತಿ ನಿನ್ನ ಸಿರಿಮೈತನ್ನೊಳಿಂದೊಂದ- ಗತಿ ಇರುವುದಕ್ಕಾಸೆ ಪಟ್ಟಿರ್ಪನು
--------------
ನಾರಾಯಣ ಗುರು
ಭಸಿತತೊಟ್ಟು ಸ್ಫಟಿಕದಂತೆ ನಿಂದಂ- ಭಸಿ ತಲೆಯೊಳ್ ತೆರೆಮಾಲೆ ಮಾಲೆ ತೊಟ್ಟು ಶ್ವಸಿತವುಣ್ಣುವಲಂಕೃತೀ ಕಲಾಪಿಸುವ  ಸಿರಿಮೈಕೃಪೆತೋರಲೆಂದು ನನ್ನೊಳು
--------------
ನಾರಾಯಣ ಗುರು