ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಗುತ್ಪತ್ತೇರಿದಂ ಸ್ವಸ್ಮಿನ್ ವಿಲೀನಮಥ ವೈ ಸ್ವತಃ ಬೀಜಾದಂಕುರವತ್ಸ್ವಸ್ಯ ಶಕ್ತಿರೇವಾಸೃಜತ್ಸ್ವಯಂ
--------------
ನಾರಾಯಣ ಗುರು
ಪ್ರಾಗುತ್ಪತ್ತೇರ್ಯಥಾ’ಭಾವೋ ಮೃದೇವ ಬ್ರಹ್ಮಣ ಪೃಥಕ್ ನ ವಿದ್ಯತೇ ಬ್ರಹ್ಮ ಹಿ ಯಾ ಸಾ ಮಾಯಾ’ಮೇಯವೈಭವಾ.
--------------
ನಾರಾಯಣ ಗುರು
ಪ್ರಾಣೀಕೃತ ಸ್ವನಖರಾಣೀತ ಭಕ್ತಜನ- ವಾಣಿಶ ಮುಖ್ಯ ಸುಮನಶ್- ಶ್ರೇಣೀ ಸುಜಾನುತಲತೂಣೀ ತಮಾಲತಿಮಿ- ರಾಣೀಲ ಚೂಚುಕಭರಾ ವಾಣೀವಿಲಾಸಮಳಿ ವೇಣೀ ವಿಪಂಚಿಮೃದು- ವಾಣೀ ತವಾಂಗರಮಣೀ ಶ್ರೇಣೀಘನಾ ಸುಮತಿ ಶಾಣೀತನೋತು ಭ್ರುಶ- ಮೇಣೀ ವಿಶಾಲನಯನಾ.
--------------
ನಾರಾಯಣ ಗುರು
ಪ್ರಿಯವಪರನದು ಅದೆನ್ನ ಪ್ರಿಯ, ಸ್ವಕೀಯ- ಪ್ರಿಯವಪರಪ್ರಿಯ ಹೀಗಿರುವುದು ಕಟ್ಟಳೆ ಅದರಿಂದ ನರನಿಗೆ ನಲುಮೆ ನೀಡುವ ಕ್ರಿಯೆ ಅಪರಪ್ರಿಯಹೇತುವಾಗಿ ಮೂಡಬೇಕು.
--------------
ನಾರಾಯಣ ಗುರು
ಪ್ರಿಯವಿಷಯಂ ಪ್ರತಿ ಮಾಡುತ್ತಿರ್ಪ ಯತ್ನವು ನಿಯತವೂ ಹಾಗೆಯೇ ನಿಲ್ಲುತಿರಲು ಪ್ರಿಯವಜವು ಅವ್ಯಯವು ಅಪ್ರಮೇಯವು  ಏಕಾದ್ವಯವಿದು ತಾನೆ ಸುಖವಾಂತು ನಿಂತಿಹುದು.
--------------
ನಾರಾಯಣ ಗುರು
ಬಂದವರ ಕೂಡೆಲ್ಲ ನೆರೆನಿಂತು ಸೆಣೆಸುವ ರಣನಾಯಕಿಯರೊಡನೆ ಸೆಣೆಸಲಾಳು ನಾನೇ? ಎತ್ತಿ ಬಳಿಯಲ್ಲಿರಿಸಿ ದಯೆತೋರಿನ್ನು ನಿನ್ನ ಹೊನ್ನಡಿಯ ಚಿಗುರ ಮರೆತಲೆವುದೇಕೆ ಇಲ್ಲಿ?
--------------
ನಾರಾಯಣ ಗುರು
ಬಗೆಯೆಂದು ಇದಕೆ ಹೇಳುವು- ದಿಂಥದ್ದೆಂದು ತಿಳಿಸಲು ಬಗೆಯಿಲ್ಲದೊಡೆ ಇಲ್ಲ ಏನೂ ಇಂಥದ್ದೆಂಬುದು ಧರೆಯಲಿ.
--------------
ನಾರಾಯಣ ಗುರು
ಬಡತನ ಹೆಚ್ಚಿತು ಹುಲ್ಲು ಮರಗಳು ದಹಿಸಿದವು ದೈವವೇ! ನೀರಿಲ್ಲದೆ ತುಂಬಿತು ಸಂಕಟವಯ್ಯೋ  ನೀನೇನೂ ನೆನೆಯಲಿಲ್ಲವೇ? ಯಾರಿರುವರು ಇಷ್ಟು ಕೃಪಾಮೃತ ಸುರಿಯ- ಲೆಂದು ನೆನೆದಿದ್ದವರಲ್ಲಿ ಈ  ಕ್ರೂರಕಿಚ್ಚಿಕ್ಕಲು ಮುಂದಾದದ್ದು ಸರಿಯೇ ಹೇಳರ್ಧನಾರೀಶ್ವರಾ 
--------------
ನಾರಾಯಣ ಗುರು
ಬಯಕೆ ಹುಟ್ಟಿಸುವ ಈ ವಿಷಯದಲ್ಲಿಂದು  ನಟನೆಗೈಯ್ಯಬಾರದು ಇನ್ನು  ಸವಿಯುಳ್ಳ ಹೆಂಡದಂತ ಯೌವನವಲ್ಲದೆ  ಹೆಚ್ಚಿತು ಇವನಿಗೆ ಕೂಟತನ ತುಂಬಿದೊಡೆ  ಕಟ್ಟಿಹಾಕುವ ಕರಣದ ಮುಚ್ಚಲವನ್ನು  ಸುಟ್ಟುಹಾಕಲೊದಗಿದ ಹಣೆಯ  ಕಿಚ್ಚು ಇಂತಿರಲು ಓಡಿಹೋಗಲು  ಮುದದಿಂದ ಕೃಪೆದೋರೋ ಮುರುಗನೇ
--------------
ನಾರಾಯಣ ಗುರು
ಬಯಸುವುದೂ ಹಗೆಯುವುದೂ ಎಂಬುದಿಲ್ಲವನ ಕಾಲು ಸೇರುವೊಡೆ ಅವರಿಗೇನೂ ಇಲ್ಲ ಬವಣೆ ಯಾವ ಕಾಲದ್ಲಲೂ
--------------
ನಾರಾಯಣ ಗುರು
ಬರಿಸುಳ್ಳ ಬಿತ್ತಿ ಹಳೆತಪ್ಪು ಗುಡಿಸಲುಗಟ್ಟಿ- ದೀಯೊಡಲು ಎಂಜಲನ್ನವನುಂಡು ತಿರುಪೆಯ ಪಾತ್ರೆ ಕೋಲೆತ್ತಿ ಬುಡವಂತು ಮಾಸಿಹೋಗುವ ಮುನ್ನ ಹಚ್ಚೆ ಹೊನ್ನವಿಲೇರಿ ಚಂದದಲಿ ಮೆರೆಯುತ್ತ ಹೊಸ್ತಿಲಲಿ ಮಲಗಿರುವ ತಿರುಕನಿಗೆ ನೀಡಯ್ಯ ಗತಿಯೊಂದೂ ಮತ್ತೆನಗೆ ಇಲ್ಲ ಯಾರೂ ಈಗ
--------------
ನಾರಾಯಣ ಗುರು
ಬಲುಮಾಯೆಯ ಧೂಳಡಗಿ ಮರೆಯೊಳು ಮರೆಗೊಂಡಿಹ ಪರಬಯಲೇ ಕಿರಿದೊಂದೊಂದು ಅದೊಂದಾ- ಮರೆಯಲಿ ಸುಳಿದು ಹೊಗೆಯಾಗಿಸುವ ಹೊಗೆಯೂ ನೀ.
--------------
ನಾರಾಯಣ ಗುರು
ಬಳಿಕ ಒಂದೊಂದರಲ್ಲೂ ಕುರುಹು ಬೇರೆಬೇರೆಯಾಗಿರಲು ಅರಿಯುವೆವು ಹಲವಾಗಿ ಬೇರ್ಪಡಿಸುತ್ತಲಿಲ್ಲಿ ನಾವು.
--------------
ನಾರಾಯಣ ಗುರು
ಬಳಿಯಲಿದ್ದು ನೀಡುವಂತ ವರವು  ದಿನಮಣಿ ಹೊದ್ದ ಒಡೆಯನಿದೊಂದೂ ಅಣುವಿನಷ್ಟೂ ಬೇರಾಗದಿರುವೆನ್ನ ಮಣಿಗಳೆಮಗೆ ನೀಗಿಸುವವು ಬರುವ ಕಷ್ಟವನ್ನು. 
--------------
ನಾರಾಯಣ ಗುರು
ಬಳುಕುನಯನೆಯರ ಚೆಲುವ ನೋಡಿನಿಲ್ವ ನೆಲೆ ಹಣೆಸಿರಿನೋಟದಿಂದ ಹರಿದು ಹಲವು ಲೀಲೆಗಳ ತೊಡರದೆ ಪಾಲಿಸಿ ದಯೆಯಿಂದ ನಿನ್ನ ಪದಪಂಕಜವ ನೀಡು.
--------------
ನಾರಾಯಣ ಗುರು