ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರವೊಂದು ಬಯಲು ಹರಡಿದ ಶಕ್ತಿ ಗಾಳಿಯು ಅರಿವನಲ, ಜಲವಕ್ಷ, ಇಂದ್ರಿಯಾರ್ಥವು ಧರಣಿ, ಇದು ಹೀಗೆ ಐದು ತತ್ವವಾಗಿ ನಿಂತು ಉರಿಯುವುದಿದರ ರಹಸ್ಯವೇಕವಹುದು.
--------------
ನಾರಾಯಣ ಗುರು
ಪರಿಪೂರ್ಣವಯಸ್ಸುಳ್ಳ ನರನಲ್ಲಿ ಗರಿಮೆಯನ್ನು ಅವರಂದು ನುಡಿದಂತ ವೇದವಿಲ್ಲಿ ತಿಳಿಸುವುದು
--------------
ನಾರಾಯಣ ಗುರು
ಪರೋಪಕಾರೀಸ್ಯಾದ್ದೀನ- ದಯಾಲುಃ ಸತ್ಯವಾಕ್ಪಟುಃ ಸದಾಚಾರರತಃ ಶೀಘ್ರ ಕರ್ತವ್ಯಕೃತತಂದ್ರಿತಃ
--------------
ನಾರಾಯಣ ಗುರು
ಪಶುಪತಿ ಪಾಶಬಿಡಿಸಿ ಪಾಹಿಮಾಮ- ಶುಭವೆನಗದೊಂದೂ ಬಾರದಂತೆ ಪಿಶಿತವುಂಡು ಬೆಳೆದ ಪಿಂಡವೇ ನಾ ಅಶುಚಿಯೆನ್ನೊಳಸುಮದೊಳು ನೆನೆಯದಂತೆ.
--------------
ನಾರಾಯಣ ಗುರು
ಪಾದಭಕ್ತಜನ ಪಾಲನಾಧಿಕ ಪರಾಯಣಾ ಭವಭಯಾಪಹಾ ಪೂತಮಾನಸ ಪುರಾಣಪೂರುಷ ಪುರಂದರಾದಿ ಪುರುಪೂಜಿತಾ ಸಾಧು ಸಾಧಿತ ಸರಸ್ವತೀ ಸಕಲ ಸಂಪ್ರದಾಯ ಸಮುದಾಹೃತಾ ಶಾತಶಾರದ ಶಶಾಂಕಶೇಖರ ಶಿವಾಶಿವಾ ಶಿವಮುದೀಯತಾಂ
--------------
ನಾರಾಯಣ ಗುರು
ಪೀತಾಂಬರಂ ಭೃಂಗನಿಭಂ ಪಿತಾಮಹ- ಪ್ರಾಮುಖ್ಯವಂದ್ಯಂ  ಜಗದಾದಿದೇವಂ  ಕಿರೀಟಕೇಯೂರಮುಖೈ ಪ್ರಶೋಭಿತಂ   ಶ್ರೀಕೇಶವಂ ಸಂತತಮಾನತೋಸ್ಮಿ. 
--------------
ನಾರಾಯಣ ಗುರು
ಪುರಹರ ಪೂರ್ವದೊಳಿದಾವ ತಪ್ಪೆನಗೀ ಪರವಶಭಾವ ಅಳಿಯದೆಯಿರ್ಪದಕ್ಕೆ ಪುರವನ್ನು ಸುಟ್ಟಹಾಗೆ ನನ್ನ ಜನ್ಮ- ಜನ್ಮಾಂತರಕರ್ಮಗಳ ಸುಡಬೇಕು ಕ್ಷಣದಿ.
--------------
ನಾರಾಯಣ ಗುರು
ಪುಷ್ಟಧಿಯಸ್ಸುಚಿದಂರಲಿಂಗಂ ದೃಷ್ಟಮಿದಂ ಮನಸಾನು ಪಠಂತಿ ಅಷ್ಟಕಮೇತದವಾಂಗ್ಮನಸೀಯಂ ಅಷ್ಟತನುಂ ಪ್ರತಿ ಯಾಂತಿ ನರಾಸ್ತೇ
--------------
ನಾರಾಯಣ ಗುರು
ಪೂರ್ವಂ ಸದಿದಮನುಸೃತ್ಯ ಚಕ್ಷುರಾದಯಶ್ಚೈಕಂ ಚೇತಿ.
--------------
ನಾರಾಯಣ ಗುರು
ಪ್ರಕೃತಿ ಒಡೆದೊಂದುಭಾಗ ಭೋಕ್ತೃರೂಪ ಸಕಲವಾಗಿ ಹೊರಗೆ ಮೆರೆಯುತಿಹುದು  ಇಹಪರವಾದೊಂದು ಭಾಗವಿದಂತೆಯಿಂದ ಅರಳುವುದಿದು ಭೋಗ್ಯವಿಶ್ವವಹುದು.
--------------
ನಾರಾಯಣ ಗುರು
ಪ್ರಕೃತಿ ಹಿಡಿದು ಸುಳಿದಾಡಿಸುವಂತೆ  ಸುಕೃತಿಗಳು ಕೂಡ ಸುಳಿಯುತಿಹರು ಅಯ್ಯೋ, ವಿಕೃತಿ ಬಿಡಲಿಕ್ಕಾಗಿ ದುಡಿಯುವುದಿಲ್ಲ  ಅಕೃತಿ ಫಲದ ಬಯಕೆಯನ್ನಳಿದರಿಯಬೇಕು.
--------------
ನಾರಾಯಣ ಗುರು
ಪ್ರಕೃತಿಯೆ ನೀರು ತನುವೆ ನೊರೆ ಕಡಲದಾತ್ಮನು ಅಹಮಹಂ ಎಂದಲೆವುದೂರ್ಮಿಜಾಲವು ಒಳಹೂವೊಳೇಳ್ವ ಅರಿವೆಲ್ಲವು ಮುತ್ತು, ತಾನು  ಸವಿಯುವಂತ ಅಮೃತವಾಗಿರುವುದಿಲ್ಲಿ ದಿಟವು.
--------------
ನಾರಾಯಣ ಗುರು
ಪ್ರಜ್ಞಾನಂ ತ್ವಹಮಸ್ಮಿ, ತತ್ವಮಸಿ, ತದ್- ಬ್ರಹ್ಮಾಯಮಾತ್ಮೇತಿ ಸಂ- ಗಾಯನ್ ವಿಪ್ರಚರ ಪ್ರಶಾಂತಮನಸಾ ತ್ವಂ ಬ್ರಹ್ಮಬೋಧೋದಯಾತ್ ಪ್ರಾರಬ್ಧಂ ಕ್ವ ನು ಸಂಚಿತಂ ತವ ಕಿಮಾ- ಗಾಮಿ ಕ್ವ ಕರ್ಮಾಪ್ಯಸತ್ ತ್ವಯ್ಯಧ್ಯಸ್ತಮತೋ’ಖಿಲಂ ತ್ವಮಸಿ ಸ- ಚ್ಚಿನ್ಮಾತ್ರಮೇಕಂ ವಿಭುಃ
--------------
ನಾರಾಯಣ ಗುರು
ಪ್ರತಿವಿಷಯ ಪ್ರತಿಬಂಧವೇರಿ ಬಾಳ್ವು- ದಿದನ್ನು ನಿಜಸ್ಮೃತಿಯೇ ಅಲ್ಲಗಳೆಯುವುದು ಅತಿವಿಶದಸ್ಮೃತಿಯಿಂದತೀತವಿದ್ಯಾ- ನಿಧಿ ಹೊಳೆಯುವುದಿದರೊಳಿಲ್ಲ ನೀತಿಗೇಡು.
--------------
ನಾರಾಯಣ ಗುರು
ಪ್ರಭಾಪೂರೆಯಾದ ನಿನ್ನ ಪ್ರಕಾರ ನೆನೆದೊಡೆ ಪ್ರಭಾರಗೆಟ್ಟು ಹೃತ್ಪ್ರಸಾದದಿಂದೆಲ್ಲರಿಗೂ, ಪ್ರಸಾದಿಸುವರೆಲ್ಲರೂ, ನಿನ್ನ ಪ್ರಸಾದದಿಂದ ಪ್ರಯಾಸವೆಲ್ಲವೂ ಅಗಲಿಹೋಗುದೆದ್ದೆವವು.
--------------
ನಾರಾಯಣ ಗುರು