ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೂಲುವಸ್ತ್ರ ತನ್ನೊಳು ನೀರುನೊರೆ ತನ್ನೊಳು ಹೀಗೆ  ಹಾ! ಜಗವೆಲ್ಲ ಮರೆವುದು ಅವಿದ್ಯೆಯಿಂದ ನೆನೆದೊಡೆ ಇದು ತನ್ನ ಕಾರ್ಯಜಾಲದೊಂದಿಗೆ ಮರೆಯಾದೊಡೆ ಉಂಟರಿವದೊಂದು ಮಾತ್ರ.
--------------
ನಾರಾಯಣ ಗುರು
ನೆಟ್ಟಕನಸಿದು ನಿದ್ದೆಯಂತೆ ನಿತ್ಯವೂ ಕೆಡುವುದಿದರಂತೆ ಕನಸೂ ಇದರಂತೆ  ಕೆಟ್ಟಮತಿ ಕಾಣುವುದಿಲ್ಲ ಕೇವಲದೊಳ್ ಪಡುವುದರಿಂದನಿಶ ಭ್ರಮಿಸುತಿಹುದು.
--------------
ನಾರಾಯಣ ಗುರು
ನೆನೆದೊಡೆ ಇಂದುಚೂಡನೊಬ್ಬನಲ್ಲದೆ ಮತ್ತೆನಗೆ ದೇವನಿಲ್ಲ ಹೊಂಬೆಳಕನು ಗೆಲ್ಲುವ ಅಗ್ನಿಕುಂಡವೇ ಮನ ಮೊದಲಾಗಿ ಎಣಿಸುವವೆಲ್ಲವನು ತಿಕ್ಕಿ ನೆಕ್ಕುವ ಘನವಿಲ್ಲದ ಮೈಯವನೇ ಒಲಿದು ಬಂದ ಸವಿಯೇ 
--------------
ನಾರಾಯಣ ಗುರು
ನೆನೆದೊಡೆ ಬಗೆಬಗೆಗೆ ತಕ್ಕ ಮೈ ಬಗೆಬಗೆಯ ಶಬ್ದವೂ ಗಂಧವೂ ಸವಿಯೂ ಕಾವೂ ತಣುವೂ ನೋಟವೂ.
--------------
ನಾರಾಯಣ ಗುರು
ನೆನೆವುದೂ ಮಾಡುವುದೂ  ಬುದ್ಧಿಯಿಡುವುದದೆಲ್ಲವೂ  ಎಂದಿಗೂ ಸಫಲವಾಗುವುದು  ಏನನ್ನೂ ಕೊಲ್ಲದವನಿಗೆ  
--------------
ನಾರಾಯಣ ಗುರು
ನೆರಳೊಂದು ಬಿಂಬವಪೇಕ್ಷಿಸದೆ ನಿಲ್ವುದಿಲ್ಲ ಏಳುವ ಜಗವು ಬಿಂಬರಹಿತವಾದ್ದರಿಂದ ನೆರಳೂ ಅಲ್ಲವಿದು ನಿಜವೂ ಅಲ್ಲ ಪಂಡಿತ ಬರೆದಿಡುವ ಫಣಿಯಂತೆ ಕಾಣ್ವುದೆಲ್ಲ.
--------------
ನಾರಾಯಣ ಗುರು
ನೆಲೆಯಿಲ್ಲದೆ ಬಿರುಗಾಳಿ ಅಲೆಯುವಂದದಿ ಸೆಟೆದುಬರುವ ಇರುಳೋ ಅಲೆಯನು ತಲೆಯಲಿ ಧರಿಸಿ ಅಲೆಯುತಿಹುದು ತಾನು ಹೊದ್ದಿರುವ ತೊಗಲೇ.
--------------
ನಾರಾಯಣ ಗುರು
ನೋವುಂಟು ಅದಹೇಳಲು ತರವಲ್ಲದ ಮಗುವಿನ ಹಾಗಿಲ್ಲಿ ನಿರರ್ಥಕಧ್ವನಿಯಹುದೆನ್ನ ಮೊರೆತ ಆಲಂಬನವಾದೊಡೆಯೂ ತಾಯ್ಸಮನಾಗಿಂದೆನ್ನ ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಪಂಕಹರಿದು ಅಂಗವಿಲ್ಲದೆ ಪರಿಪಾವನವಾಗಿ ಸದಾ ಮನಸಿನ ಮನವಾಗಿ ತನ್ನೊಳು ತಾನೇ ಮೆರೆಯುತಲಿರ್ಪನು 
--------------
ನಾರಾಯಣ ಗುರು
ಪಂಜರವಾದೊಡಲು ಮೊದಲಾದ ಹತ್ತಿಯಲಿ ಅರಿವೆಂಬ ಕಿಚ್ಚಿಡಲು  ಮಂಜುಕಣಗಳ ಹಾಗೇ ಈ- ಮಂಜುಳಬಿಸಿಲು ಮುಟ್ಟಿ ಅಪಾಯವಡಗುವುದು.
--------------
ನಾರಾಯಣ ಗುರು
ಪರನೇ ಪರವಾದ ತೆರೆಯಲಿ ಪರನೇತಾರನಾದ ಪಶುಪತಿಯೇ ಹರನೇ ನಿನ್ನತ್ತ ಕೂಗು ಕ್ಷಣಹೊತ್ತೂ ಇಲ್ಲಿರಸಬಾರದೆಲೋ.
--------------
ನಾರಾಯಣ ಗುರು
ಪರಮಪಾವನ ಪಾಹಿ ಪುರಾರಿಯೇ ದುರಿತನಾಶನ! ಧೂರ್ಜಟಿಯೇ ನಮಃ ಚರಣಸಾರಸಯುಗ್ಮನಿರೀಕ್ಷಣೆ ಬರುವುದೆಂದು ವಲಾಂತಕವಂದಿತಾ
--------------
ನಾರಾಯಣ ಗುರು
ಪರಮಾರ್ಥವನೊರೆದು ತೇರೋಡಿಸುವ  ತಿರುಳೋ, ಭೂತದಯಾಕ್ಷಮಾಬ್ಧಿಯೋ, ಸರಳಾದ್ವಯ ಭಾಷ್ಯಕಾರನಾದ  ಗುರುವೋ ಈ ಅನುಕಂಪೆಯುಳ್ಳವನು?
--------------
ನಾರಾಯಣ ಗುರು
ಪರವದರ ಹಾಲು ಸವಿದ ಭಾಗ್ಯವಂತರಿಗೆ ಹತ್ತುಸಾವಿರವರ್ಷವೊಂದಲ್ಪಹೊತ್ತು; ಅರಿವು ಅಪರಪ್ರಕೃತಿಗಧೀನವಾದೊಡೆ ಅರೆಕ್ಷಣವೇ ಸಾವಿರವರುಷವಹುದು.
--------------
ನಾರಾಯಣ ಗುರು
ಪರವಶನಾಗಿ ಪರತತ್ವವೆನ್ನದೆಂದು ನೆನೆಯ ಬಾರದುಬಾರದೆಂದು ಕಥಿಸುವುದರಿಂದ ಬರುವರಿವ್ಯಾವುದೂ ಬಾರದು ಕಥಿಸುವುದರಿಂದ  ಪರಮಪದವ ಪರಿಚಿಂತೆ ಮಾಡಬೇಕು.
--------------
ನಾರಾಯಣ ಗುರು