ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಲಗೆಯಿಂದೇಳ್ವ ನರಕಗಡಲೊಳು ಬಿದ್ದು  ಜೀವ ಬಳಲಿದೆ ಶಿವವೇ ದಡ ಸೇರಿಸೋ  ಗೋವಿಂದನೂ ನಯನಪಂಕಜವಿತ್ತು ಬಾಗಿ ಮೆರೆವ ನಿನ್ನ ಮಹಿಮೆಯನಾರರಿವರುಂಟು ಶಂಭೋ.
--------------
ನಾರಾಯಣ ಗುರು
ನಿತ್ಯಂ ನಿಯಮಿಹೃದಿಸ್ಥಂ ಸತ್ಯಮನಾಗಾರಂ ಭುವನಾಕಾರಂ ಬಂಧೂಕಾರುಣಲಲಿತಶರೀರಮುರೋಹಾರಂ ಮಹಿಮಾಹಾರಂ ಕೌಮಾರೀಕರಪೀಡಿತಪಾದಪಯೋಜಾತಂ ದಿವಿ ಭೂಜಾತಂ ಕಂಠೇಕಾಲಮಕಾಲಂ ಪ್ರಣಮತ ದೇವೇಶಂ ಗುಹಮಾವೇಶಂ.
--------------
ನಾರಾಯಣ ಗುರು
ನಿತ್ಯಾನಿತ್ಯವಿವೇಕತೋ ಹಿ ನಿತರಾಂ ನಿರ್ವೇದಮಾಪದ್ಯ ಸದ್- ವಿದ್ವಾನತ್ರ ಶಮಾದಿಷಟ್ಕಲಸಿತ ಸ್ಯಾನ್ಮುಕ್ತಿಕಾಮೋಭುವಿ ಪಶ್ಚಾದ್ ಬ್ರಹ್ಮವಿದುತ್ತಮಂ ಪ್ರಣತಿ ಸೇ- ವಾದ್ಯೈಃ ಪ್ರಸನ್ನಂ ಗುರುಂ ಪೃಚ್ಛೇತ್ ಕೋ’ಹಮಿದಂ ಕುತೋ ಜಗದಿದಿ ಸ್ವಾಮಿನ್ ವದ ತ್ವಂ ಪ್ರಭೋ.
--------------
ನಾರಾಯಣ ಗುರು
ನಿನ್ನ ಕೆಂಜಡೆಯಲ್ಲಿ ಎಳೆದಿಂಗಳು ತೊರೆ  ಏರಿ ಬೆಳಗುತ್ತಿರ್ಪ ಫಣಿಮಾಲೆ ತ್ರಿಪುಂಡ್ರ ತಿಲಕಗಳು ಮದನನ ಸುಟ್ಟ ಕಣ್ಣು ಉಬ್ಬುಗಳು ಎನಗೆಂದೂ ಕಾಣುವಂತಾಗಲಿ.
--------------
ನಾರಾಯಣ ಗುರು
ನಿನ್ನಭರವಲ್ಲದೆ ಬೇರಿಲ್ಲ ತಿಂಗಳ ಧರಿಸಿದ ನಿಲಿಂಪನಾಯಕನೇ ಬಲವೇರಿದ ಈ ಮಲಮಾಯೆಯ ಕೊಂಬದಕೊಂದಾಗಿ ಬೆಲೆಗೆ ನೀಡದಿರೇ.
--------------
ನಾರಾಯಣ ಗುರು
ನಿಯಂತರಿ ನಿಷಿದ್ಧಸ್ಯ ಸರ್ವೇಷಾಂ ಹಿತಕರ್ತರಿ ಯೋ’ನುರಾಗೋ ಭಕ್ತಿರತ್ರ ಸಾ ಪರಾ ಪರಮಾತ್ಮನಿ.
--------------
ನಾರಾಯಣ ಗುರು
ನಿರುಪದ್ರವಿ ಜಂತುಗಳ ಸಾಲನ್ನು ತನ್ನ ಹಿತಕ್ಕೆಂದು  ಕೊಲ್ಲುವವನಿಗೆ ಬಾರದು ಸೌಖ್ಯ ಇದ್ದರೂ ಸತ್ತುಹೋದರು 
--------------
ನಾರಾಯಣ ಗುರು
ನಿರ್ವಾಣಂ ದ್ವಿವಿಧಂಶುದ್ಧ- ಮಶುದ್ಧಂ ಚೇತಿ ತತ್ರ ಯತ್ ಶುದ್ಧಂ ನಿರ್ವಾಸನಂ ತದ್ವ-  ದಶುದ್ಧಂ ವಾಸನಾನ್ವಿತಂ.
--------------
ನಾರಾಯಣ ಗುರು
ನಿಲಾಳಿಕೇಶ ಪರಿಭೂಷಿತ ಬರ್ಹಿಬರ್ಹ, ಕಾಲಾಂಬುದದ್ಯುತಿಕಳಾಯ ಕಳೇಬರಾಭ, ವೀರ, ಸ್ವಭಕ್ತಜನವತ್ಸಲ, ನೀರಜಾಕ್ಷ, ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ
--------------
ನಾರಾಯಣ ಗುರು
ನೀಡುವುದಡಿಯನಿಗೆ ನಿನ್ನ ಹೂ- ಮೃದುಕಾಲೆಣೆ ನೀರು ತೊಟ್ಟ ಬಿಳಿಮಲೆಯೇ ಕೂಗುವ ಹೂಕೋಕಿಲೆಯೇರಿ ಹೋಗುವ ಹೊನ್ನಬಳ್ಲಿಗೆ ಹೊಸಮರವೇ.
--------------
ನಾರಾಯಣ ಗುರು
ನೀನಲ್ಲವೇ ಮಾಯೆಯೂ, ಮಾಯಾ- ವಿಯೂ ಮಾಯಾವಿನೋದನೂ, ನೀನಲ್ಲವೇ ಮಾಯೆಯನ್ನು ಕಳೆದು ಸಾಯುಜ್ಯವನ್ನು ಕೊಡುವ ಆರ್ಯನೂ.
--------------
ನಾರಾಯಣ ಗುರು
ನೀನು ತಾನೆ ಸೃಷ್ಟಿಯೂ ಸೃಷ್ಟಿ- ಕರ್ತನೂ ಸೃಷ್ಟಿಜಾಲವೂ ಸೃಷ್ಟಿಗೆ ಸಾಮಗ್ರಿಯಾದದ್ದು ಕೂಡ ನೀನೇ ಅಲ್ಲವೇ.
--------------
ನಾರಾಯಣ ಗುರು
ನೀನು ಸತ್ಯ ಜ್ಞಾನಾನಂದನು ನೀನೆ ವರ್ತಮಾನ, ಭೂತ ಭವಿಷ್ಯತ್ತೂ ಬೇರಲ್ಲ, ಮಾತನಾಡುವ ನುಡಿಯು ನೆನೆದೊಡೆ ನೀನೆ ಅಲ್ಲವೇ.
--------------
ನಾರಾಯಣ ಗುರು
ನೀರು ಬೆಂಕಿ ಮೊದಲಾಗಿದ್ದು ಒಳಗೂ ಹೊರಗೂ ತುಂಬಿ ಮೆರೆಯುವ ಸುಳ್ಳ ಕಂಡುಹಿಡಿದೊಡೆ ಅಂಗೈಮೇಲಿನ ನೆಲ್ಲಿಯ ಹಣ್ಣಿನಂತೆ.
--------------
ನಾರಾಯಣ ಗುರು
ನೀರೂ ಸಮನೆಲವೂ ಕಿಚ್ಚಿನೊಡು ಗಾಳಿಯೂ ಸೇರುವ ಚಿದಂಬರವದರೊಳಿರುವೆ ನೀನು ಧರೆಯೊಳು ಬಿದ್ದಲಯುವೆನ್ನ ಪರಿತಾಪವೆಲ್ಲ ಯಾರಿರುವರಿಲ್ಲಿ ನಿಮಗೆ ತಿಳಿಸಲಿಕೆ ಶಂಭೋ.
--------------
ನಾರಾಯಣ ಗುರು