ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಟನೆ ದರ್ಶನೆವಾಗಲು ಒಡನೆ ತಾನಿಲ್ಲಿದ್ದುನಡುನೆಲೆಯಾದ ನಡುನೆಲೆಯದರಲ್ಲಿರುವ ಬಹುದಿನಗಳವನಿಗೆ ಒಂದಾಗಿ ಸೌಖ್ಯವಹುದು.
--------------
ನಾರಾಯಣ ಗುರು
ನನ್ನವ್ವ ನನ್ನನೊಳಗೇ ಹೇರಾಗಿ ಹೊತ್ತು ಬೆಂದು ಒಳಗರಗಿ ಸುಮ್ಮನೆ ನಿಟ್ಟುಸಿರಿಟ್ಟು ನೊಂದಿಲ್ಲಿ ಹೆತ್ತು ನರಿಯಂತೆ ಬಿದ್ದು ಕೂಗಲು ಏನಪ್ಪುದಿಲ್ಲಿ ಅಡಿಯನಿಗೊಂದು ನುಡಿಯೊ ಶಂಭೋ.
--------------
ನಾರಾಯಣ ಗುರು
ನಮದ್ದೇವವೃಂದಂ ಲಸದ್ವೇದಕಂದಂ ಶಿರಶ್ಶ್ರೀಮದಿಂದುಂ ಶ್ರಿತಶ್ರೀಮುಕುಂದಂ ಬೃಹಚ್ಚಾರುತುಂಡಂ ಸ್ತುತಶ್ರೀಸನಂದಂ ಜಟಾಹೀಂದ್ರಕುಂದಂ ಭಜೇ’ಭೀಷ್ಟಸಂದಂ.
--------------
ನಾರಾಯಣ ಗುರು
ನಮೋಸ್ತು’ತೇ ನಾಥ, ವರಪ್ರದಾಯಿನ್ ನಮೋ’ಸ್ತುತೇ ಕೇಶವ ಕಿಂಕರೋ’ಸ್ಮಿ  ನಮೋ’ಸ್ತು ತೇ ನಾರದ ಪೂಜಿತಾಂಘ್ರೇ  ನಮೋನಮಸ್ತ್ವಚ್ಚರಣಂ ಪ್ರಪದ್ಯೇ 
--------------
ನಾರಾಯಣ ಗುರು
ನರರೂಪವನ್ನೆತ್ತಿ ಭೂಮಿಯಲ್ಲಿ   ಚರಿಸುತ್ತಿರುವ ಕಾಮಧೇನುವೋ? ಪರಮಾದ್ಭುತ ದಾನದೇವತಾ- ತರುವೋ ಈ ಅನುಕಂಪೆಯುಳ್ಳವ?
--------------
ನಾರಾಯಣ ಗುರು
ನರಹರಿಮೂರ್ತಿ ನಮಿಸುವ ಹಣೆಯ ಸಿರಿಗಣ್ಣೊಳುರಿಸಿದ ಮಾರನಿಂದು ಬರುವುದಕ್ಕೇನು ಕಾರಣ ಉರಿಗಣ್ಣದರೊಳಿಂದು ಮತ್ತೊಮ್ಮೆ.
--------------
ನಾರಾಯಣ ಗುರು
ನವನವ ನೆನ್ನೆ ಇಂದು ನಾಳೆ ಬೇರೆ ದಿನವಿದು ಹೀಗೆ ಚಿಂತೆಮಾಡದಿರು ಅವಿರತವೆಣಿಸಿ ಅಳೆಯುವುದೆಲ್ಲವೂ ಭ್ರಮೆ, ಯಾವ ಭೇದವೂ ಇಲ್ಲೆಂದರಿಯಬೇಕು.
--------------
ನಾರಾಯಣ ಗುರು
ನಾಕೈದು ಮಾಸ ಒಂದುಪರಿ ಕಂಗಳಿತ್ತು ಕಾಲನ ಕೈಗೆ ಸಿಗದಂತೆ ಬೆಳೆಸಿದೆ ನೀನೇ ಕಾಲ ಕಳೆದು ತಿರುಳೊಳಿದ್ದು ನಾನು ಆ ಕಾಲವನೆನೆದು ಅಳುತಿರುವುದ  ಕೇಳೊ ಶಂಭೋ.
--------------
ನಾರಾಯಣ ಗುರು
ನಾಡೂ ಕಾಡೂ ಒಂದೇ ಸಮನೆ ಹಾಳಾಗು- ವುದು ಮುನ್ನುಗ್ಗಿ  ನೆಕ್ಕುವ ನೀರಿಲ್ಲದೆ ನಾಲಗೆಗಳು ಒಣಗು- ವುದು ನಿತ್ಯವೂ  ಹುಡುಕುವ ನಾವು ಎದೆನೊಂದು ಸುಳಿವ  ಪಾಡೂ ಪರೀಕ್ಷಿಸಿ  ನಿಲ್ಲುವ ನಾಯಕನೇಕೆ ನಲುಮೆ ಕರುಣಿಸದಿರಲು  ಅರ್ಧನಾರೀಶ್ವರಾ 
--------------
ನಾರಾಯಣ ಗುರು
ನಾದವ ಮೀರಿ ನಡುವೆ ಮೆರೆವ ನಿನ್ನ ಮೈ ಚೇತನೆಯೊಳು ಬರಲಿ ಜನ್ಮವನಳಿವುದುಕ್ಕಾಗಿ ಬೋಧವ ಕಳೆದು ಹೊರಗೆ ಸುಳಿವ ಕಿವಿಗೊಂ- ದಾತಂಕವಿಲ್ಲಡಿಯಂಗುಂಟದನು ತೀರಿಸು ಶಂಭೋ.
--------------
ನಾರಾಯಣ ಗುರು
ನಾಮರೂಪಮಿದಂ ಸರ್ವಂ  ಬ್ರಹ್ಮೈವೇತಿ ವಿಲೀಯತೇ ಯದ್ ಬ್ರಹ್ಮಣಿ ಮನೋ ನಿತ್ಯಂ ಸ ಯೋಗ ಇತಿ ನಿಶ್ಚಿತಃ
--------------
ನಾರಾಯಣ ಗುರು
ನಾರಾಯಣಂ ದಾನವಕಾನನಾನಲಂ  ನತಪ್ರಿಯಂ ನಾಮವಿಹೀನಮವ್ಯಯಂ  ಹರ್ತುಂಭುವೋಭಾರಮನಂತವಿಗ್ರಹಂ  ಸ್ವಸ್ವೀಕೃತಕ್ಷ್ಮಾವರಮೀಡಿತೋ’ಸ್ಮಿ . 
--------------
ನಾರಾಯಣ ಗುರು
ನಾರಿಗುಣವು ಮನೆಗೆ ಅತಿಮಂಗಳವಪ್ಪುದು ಸಾರನಾದ ಪುತ್ರನದಕೆ ನಿಜವಾದೊಂದೂ ವಿಭೂಷಣ.
--------------
ನಾರಾಯಣ ಗುರು
ನಾರಿಯರಿಗಿಲ್ಲಿ ತಮ್ಮ ಪ್ರಾಣನಾಥ ಪೂಜೆ ದೊರಕಲು ದೇವಲೋಕಕ್ಕೂ ಮೇಲಾದ ಶ್ರೇಯಸ್ಸೆಲ್ಲವೂ ದೊರೆವುದು
--------------
ನಾರಾಯಣ ಗುರು
ನಾಲಗೆಗೆ ನಿನ್ನ ಸಿರಿನಾಮವ ಒತ್ತಿಹೇಳಿ  ಬದುಕಲು ಸುಲಭದಿ ಒರೆಯೊ ನೀನು ಜೀವ ಬಿಡುವಾಗಲದರಿಂದಲೆದ್ದು ಹೊಳೆವುದು  ಮುಂದೆ ನಾಲಗೆಗೆ ಭೂಷಣವಿದಲ್ಲದೇನೂ ನಮಗೆ ಬೇಡ.
--------------
ನಾರಾಯಣ ಗುರು