ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನು ಮೊದಲಾದವು ಸರ್ವ ಒಂದೊಳೊಂದಿಲ್ಲ ಅನೃತವೂ ಆಗಿಯದರಿಂದ ಅನ್ಯಭಾಗವು ಅನುದಿನವೂ ಅಸ್ತಮಿಸದಿರಲಾಗಿ  ಮತ್ತೆ ಋತರೂಪವಾಗಿ ಹಿಗ್ಗುತಿಹುದು.
--------------
ನಾರಾಯಣ ಗುರು
ತನುವಲ್ಲಡಗಿದ ಶರೀರಿ ತನ್ನ ಸತ್ತಾ- ತನುವಲ್ಲಿ ಅದೆನ್ನದಿದೆನ್ನದೆಂದೆಲ್ಲವನ್ನೂ  ತನುತೆಯಬಿಟ್ಟು ನೆನೆಯುವರು, ಸಾಕ್ಷಾ- ದನುಭವಶಾಲಿಗಳಹುದಿವರು ನೆನೆದೊಡೆಲ್ಲ.
--------------
ನಾರಾಯಣ ಗುರು
ತನ್ನ ರಕ್ಷಿಸಿ ತನ್ನ ಪ್ರಾಣ- ನಾಥನ ಮುಗಿದು ಹೆಸರ ಭದ್ರವಾಗಿ ಸೋರದಂತೆ ಬದುಕಿದೊಡವಳೇ ನಾರಿಯು
--------------
ನಾರಾಯಣ ಗುರು
ತಲೆಮುಡಿ ಬಾಚಿ ಬಿಗಿದು ಓಲೆಯಿಟ್ಟ ಕೊಲೆಮದ್ದಾನೆ ಆಡಿಸಿಬಂದು ಕೊಂಬು ತಲೆಗಳನೆತ್ತಿ ವಿಯದೊಳ್ ನೋಡಿನಿಲ್ವ ಮೊಲೆಗಳೂ ಎನ್ನ ಬಳಲಿಸದಿರಲಿ ಮಹೇಶಾ.
--------------
ನಾರಾಯಣ ಗುರು
ತಸ್ಮಾತ್ ತಸ್ಯ ಸತ್ವಾಚ್ಚ.
--------------
ನಾರಾಯಣ ಗುರು
ತಾನಾಗಿಯೇ ಇದೆಲ್ಲವುಂಟು ತಮ್ಮೊಳೊಂದೊಂದು ಬಗೆ ಬೇರೆಯವುಗಳೊಳಿಲ್ಲ ಈ ರೀತಿ ತನು ಮೊದಲಾದವು ಸತ್ತೂ ಅಲ್ಲ ನೆನೆದೊಡೆ  ಅನೃತವೂ ಅಲ್ಲ ಅದವಾಚ್ಯವಹುದು.
--------------
ನಾರಾಯಣ ಗುರು
ತಾವಲ್ಲದೆ ಅಡಿಯನಿಗಾಸರೆ ಮತ್ತೊಂದಿಲ್ಲ ಯಾರೂ ಇಲ್ಲಿ ಈ ಭೂತಲದಲ್ಲೆಲ್ಲೂ ಇಲ್ಲ, ಕಾಯೋ ಕೃಪಾನಿಧೇ,  ‘ಯಾರು ಅತಿಲೋಲೆ’ಯೆಂಬ ಚಿಂತೆ ನನ್ನಲಿ ತೊಡಗಿ ಸದಾ ಹೊಳೆವುದು ಎಲ್ಲಿವರೆಗೆ ಅನಂಗದಾಹಿಯ ಕಟಾಕ್ಷವು ಅಗ್ನಿಜ, ಪಾಹಿಮಾಂ
--------------
ನಾರಾಯಣ ಗುರು
ತಿಂಗಳೂ ತ್ರಿದಶಗಂಗೆಯೂ ತಿರುಮುಡಿಯಲಿ ತೊಟ್ಟು ಬೆಳಗುವ ನಲುದಿಂಗಳಮುಖಿ ದಿಗಂಬರನ ತಿರುಮೈ ಭಾಗಿಸಿದ ಶಿವಾಂಗಿಯೇ ನಿನ್ನ ಪಾದಕಮಲವೆನ್ನ ಮನದಲ್ಲಿ ನೆಲೆನಿಲಿಸಿ ನಿತ್ಯವೂ ಹಮ್ಮು ಬಂದಂಕುರಿಸಿ ಅರಿವಳಿದು ಹೋಗಿ ವಿಫಲವಾಗಿ ಬರದಂದಾಗಿಸಂಬಿಕೇ.
--------------
ನಾರಾಯಣ ಗುರು
ತಿರುಳೂ ಪದವೂ ನೀಗುತ ಒರೆಯೂ ಪರವೂ ದಾಟಿಬರುವ ಅಲೆಯೇ ಬರಲುವ ನಾಲಗೆ ನೆನೆಸಿದೊಡೆ ಒಲುಮೆಯುಕ್ಕುವ ಕಡಲಿಗೆ ಕೊರತೆಯದೇ.
--------------
ನಾರಾಯಣ ಗುರು
ತಿರುಳೆಂದೆಂದಿಗೂ ಒಡಲೊಡು ಮಕ್ಕಳು ಬಾಳು ಸಿರಿ ಇವೆಲ್ಲವನರ್ಥಕರ ಕರಳಿಂದಲಿ ಕಳೆಯುತ ಕರಿಗಡಲೊಳ್ ಮುಳುಗದೆ ಹೊದಿಸುತ ಹಿಡಿವವ ನೀ.
--------------
ನಾರಾಯಣ ಗುರು
ತಿರುಳೇ ಪರಿಮಳಸೂಸುವ ತಿರುಳಾವುದದು ತುಂಬಿದ ಹೊಂದಿರುಳೇ ಇನಿಯನೆ ಒರೆಯೋ ತೇರು- ರುಳೇರಲು ಎನಗಿದನಿಲ್ಲಿ ಪರನೇ.
--------------
ನಾರಾಯಣ ಗುರು
ತೊಗಲನೆತ್ತಿ ಹೊದ್ದಿರುವ ಕಲಿಯನು ಕಾಲಿಂದಳಿಸುವ ಕಲಿಯೇ ಕಲಿಯೂ ಕಾಲೊಳು ತೊಲಗುವ ನೆಲೆಯೇ ಎಲ್ಲಾನೆಲೆಗೂ ಒಂದು ತಲೆಯೇ.
--------------
ನಾರಾಯಣ ಗುರು
ತೊಗಲಿಗೆ ದುಃಖವಿಲ್ಲೊಮ್ಮೆಯೂ ನೆನೆದೊಡೆ ದುಃಖ ನಮಗೆ ತೊಡಗುತಿದೆ ದುರಂತವಯ್ಯೋ ಬೇಗನೆ ಛಳಿ ಬಿಸಿಲೊಡನೆ ಮೆರೆವ ನಿನ್ನ ಹತ್ತಿರವಳಿಯಲು ನೀನು ಒರೆಯೊ ಶಂಭೋ.
--------------
ನಾರಾಯಣ ಗುರು
ತ್ರಿಗುಣಮಯ ತಿರುಭಸುಮವಿಟ್ಟ ಈಶಂಗೆ ಒಳಹೂವನ್ನಿಟ್ಟು ಕೈಮುಗಿದು ಅಕ್ಷವದಾರಿ ಸಕಲವಳಿದು ತಣಿದು ಕೇವಲದ ಮಹಿಮೆಯೂ ಬಿಟ್ಟು ಮಹದಲ್ಲಿ ಮುಳುಗಬೇಕು.
--------------
ನಾರಾಯಣ ಗುರು
ತ್ರಿಭುವನಸೀಮೆ ದಾಟಿ ತುಂಬಿ ತುಳುಕುವ ತ್ರಿಪುಟಿ ತೊಲಗಿ ಹೊಳೆಯುವ ದೀಪ ಕಪಟಯತಿಗೆ ಕರಗತವಾಗುವುದಿಲ್ಲೆಂಬ ಉಪನಿಷದೋಕ್ತಿರಹಸ್ಯವ ನೆನೆಯಬೇಕು.
--------------
ನಾರಾಯಣ ಗುರು