ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿದೇವ ನಾನ್ಯದಾಭಾತಿ ಚಿತಃ ಪರಮತೋ ನಹಿ ಯಚ್ಚ ನಾಭಾತಿ ತದಸ- ದ್ಯದಸತ್ತನ್ನ ಭಾತಿ ಚ.
--------------
ನಾರಾಯಣ ಗುರು
ಚೆಲುಮುಡಿಗೆ ತೊಡುವ ತೆರೆಮಾಲೆಯಲ್ಲಿ  ತಣಿವುದೆನ್ನ ಬೆಸನಗಳೆಲ್ಲವೂ ತಾಪತೀರುವುದಕ್ಕಾಗಿ ನೀನೆಂದೂ ಸಿರಿ- ನೋಟಗಳ ಕಾಣಿಸು ಕಾಮವಿನಾಶನ.
--------------
ನಾರಾಯಣ ಗುರು
ಚೆಲುವಿನೊಡಲು ನಿನ್ನಂಗಗಳು ಧರೆಗೆ ಮುನ್ನವೆಂದು ನುಡಿವುದಲ್ಲದೆ ಮುನಿಗಳಿಗೂ ನನ್ನವ್ವ ಸಾಧ್ಯವಾಗದದೇನೂ ಅದರಿಂದೆನಗಿಂದು ನಿನ್ನ ನುಡಿಬಂದು ಮೌನನೆಲಯಾಗಿ ಇಗೋ ಮೊಳಗುತಿದೆ.
--------------
ನಾರಾಯಣ ಗುರು
ಚೈತನ್ಯಾದಾಗತಂ ಸ್ಥೂಲ- ಸೂಕ್ಷ್ಮಾತ್ಮಕಮಿದಂ ಜಗತ್ ಅಸ್ತಿ ಚೇತ್ ಸದ್ಘನಂ ಸರ್ವಂ ನಾಸ್ತಿ ಚೇದಸ್ತಿ ಚಿದ್ಘನಂ.
--------------
ನಾರಾಯಣ ಗುರು
ಜಗವೂ ಸತ್ಯವೂ ಬೆರೆತು ನಿಂತಿರುವ  ನೆಲೆ ಬಹುದೊಡ್ಡ ನೀತಿಗೇಡಿದಹುದು ಕೊನೆಯಿಡಲಾಗದ ಅವಾಂಗ್ಮನೋಗೋ- ಚರವಿದರೊಳು ಪ್ರಮಾಣವೆಲ್ಲಿ ಚರಿಸುವುದು?
--------------
ನಾರಾಯಣ ಗುರು
ಜನಕಜನನಿಯರೂ ಆತ್ಮಸಖಿಪ್ರಿಯ- ಜನರೂ ಹತ್ತಿರದ ನೆರೆಯವರಿಲ್ಲದೆ  ಜನನವನೆತ್ತಿ ಅಗಲುವರೆಂದಿಗೂ ಒಂಟಿಯಾಗಿರುವುದಕೇ ತರವಾಗತಕ್ಕದ್ದು.
--------------
ನಾರಾಯಣ ಗುರು
ಜನನಸಮಯ ಸ್ಥಿತಿಯಿಲ್ಲ ಜನಿಸಿದವನ್ಯ- ಕ್ಷಣದೊಳಿಲ್ಲ ಇದಿರುವುದಿದಾವ ರೀತಿ? ಹನನವೂ ಹೀಗೆಯೇ ಆಗಿರುವುದರಿಂದ ಜನನವೂ ಇಲ್ಲ ಇದು ಚಿತ್ಪ್ರಭಾವವೆಲ್ಲ.
--------------
ನಾರಾಯಣ ಗುರು
ಜನರಿದ ಕಂಡು ನಲಿದೊಡೆ ಜನನಮರಣ ಕೈಬಿಟ್ಟಿರುವುದಾ ನೆಲೆಯಲಿ ಮನಸುಮವೊಂದುಗೂಡಿದೊಡೆ ಅನವರತ ಸೌಖ್ಯವಂದಿಗೇ ಬಹುದು.
--------------
ನಾರಾಯಣ ಗುರು
ಜನಿಮೃತಿರೋಗಕಳೆವುದಕೆ ಸಂಜೀ- ವನಿ ಪರಮೇಶ್ವರನಾಮವಲ್ಲದಿಲ್ಲ ಪುನರದನ್ನೆಲ್ಲ ಮರೆತ್ತು ಅರಳಿ ಕಾಯ್ಬಿಡುವ ಪುನಃಕೃತಿಯಿಂದ ತುಂಬಿತು ಲೋಕವೆಲ್ಲ.
--------------
ನಾರಾಯಣ ಗುರು
ಜಯ ಜಯ ಚಂದ್ರಕಲಾಧರ ದೇವನೇ ಜಯ ಜಯ ಜನ್ಮನಿನಾಶನ ಶಂಕರ ಜಯ ಜಯ ಶೈಲನಿವಾಸ ಸತಾಂ ಪತೇ ಜಯ ಜಯ ಪಾಲಯ ಮಾಮಖಿಲೇಶ್ವರ!
--------------
ನಾರಾಯಣ ಗುರು
ಜಯ ಜಿತಕಾಮ ಜನಾರ್ದನಸೇವಿತ ಜಯ ಶಿವ ಶಂಕರ ಶರ್ವ ಸನಾತನ ಜಯ ಜಯ ಮಾರಕಳೇಬರ ಕೋಮಳ ಜಯ ಜಯ ಸಾಂಬ ಸದಾಶಿವ ಪಾಹಿ ಮಾಂ
--------------
ನಾರಾಯಣ ಗುರು
ಜಯಿಸು ನೀ ಮಹಾದೇವ, ದೀನಾವನಪರಾಯಣ, ಜಯಿಸು ನೀ ಚಿದಾನಂದನೇ ದಯಾಸಿಂಧುವೇ ಜಯಿಸು ನೀ.
--------------
ನಾರಾಯಣ ಗುರು
ಜಲದೊಂದಿಗೆ ಉರಿಯು ನೆರೆದುಹರಿವ ಜಲಗಾಳಿಯು ಅಂಬರವೈದಲಿಯೂ ಅಲೆಯದೆ ಅಡಿಗಡಿ ನೀಡೆಲೆ ನಿನ್ನ ನೆಲೆಯಿಂದಿದುವೇ ಸಾಕೆಮೆಗೆ
--------------
ನಾರಾಯಣ ಗುರು
ಜಾತಿಭೇದ, ಮತದ್ವೇಷ ಒಂದೂ ಇಲ್ಲದೆ ಎಲ್ಲರೂ ಸೊದರತ್ವದಿ ಬಾಳುವ ಮಾದರಿ ಸ್ಥಾನವೇ ಇದು.
--------------
ನಾರಾಯಣ ಗುರು
ಜೀವೇಶ್ವರಜಗದ್ಭೇದರಹಿತಾದ್ವೈತ ತೇಜಸ್ಸೇ ಸಿದ್ಧವಿದ್ಯಾಧರಶ್ಶಿವಶ್ಚರವೇ ಗುರವೇ ನಮಃ ಓಂ ನಮೊ ನಮ್ಸ್ಸಂಪ್ರದಾಯ ಪರಮಗುರವೇ. ಜಯ ಜಯ ಸ್ವಾಮಿನ್, ಹಾ! ಇದೊಂದು ಮಹಾವಿಚಿತ್ರವೇ ಸರಿ! ನಿರಿಂಧನಜ್ಯೋತಿಸ್ಸಾದ ನಿನ್ನ ತಿರುವಡಿಯಲ್ಲಿ ಮರುಮರೀಚಿಕೆಯ ಪ್ರವಾಹದಂತೆ ಪ್ರಥಮದೃಷ್ಟಿಯಲ್ಲೇ ದೃಷ್ಟವಾದ ಸಕಲ ಪ್ರಪಂಚವೂ ಯೋಚಿಸಿದಾಗ ಗಗನಾರವಿಂದದ ಸ್ಥಿತಿಯಂತೆಯೇ ಇದೆ. ಅನೃತ-ಜಡ-ದುಃಖರೂಪವಾದ ಇದು ನಿನ್ನ ತಿರುವಡಿ ಸೃಷ್ಟಿಸಿದ್ದೂ ಅಲ್ಲ, ತಾನಾಗಿಯೇ ಜನಿಸಿದ್ದೂ ಅಲ್ಲ. ನಿನ್ನ ತಿರುವಡಿ ಸೃಷ್ಟಿಸಿದ್ದಾದಲ್ಲಿ ನಿನ್ನ ತಿರುವಡಿಗೆ ಕರಣಕರ್ತೃದೋಷವಿದೆ ಎಂದು ಹೇಳಬೇಕಾದೀತ್ತು. ನಿನ್ನ ತಿರುವಡಿ ಕರಣಕರ್ತೃದೋಷವಿಲ್ಲದ ನಿರ್ವ್ಯಾಪಾರಿಯಲ್ಲವೇ? ಆದ್ದರಿಂದ ಅದು ಎಂದಿಗೂ ಸಾದದ್ಧ್ಯವಿಲ್ಲ. ಶುದ್ಧಜಡಕ್ಕೆ ತಾನೇ ಜನಿಸಲು ಬರುವುದಿಲ್ಲ. ಹೀಗೇ ಅನಿರ್ವಚನೀಯವಾದ ಈ ಪ್ರಪಂಚವೂ ಸಚ್ಚಿದಾನಂದಘನವಾದ ನಿನ್ನ ತಿರುವಡಿಯೂ ಸೇರಿ ತಮಃಪ್ರಕಾಶಗಳಂತೆ ಸಹವಾಸ ನಡೆಸಿಕೊಂಡಿರುವುದೇ ಒಂದು ಅದ್ಭುತ! ನಮ್ಮ ಎಲ್ಲ ತ್ರಿಕರಣಗಳೂ, ಪ್ರವೃತ್ತಿಗಳೂ ತೇಜೋರೂಪವಾದ ನಿನ್ನ ತಿರುವಡಿಯ ಮುಂದೆ ತಮೋಮಯವಾದ ಕರ್ಪೂರಧೂಳಿಯ ಅವಸ್ಥೆ ಹೊಂದಿದೆ. ಆದ್ದರಿಂದ ಈಗ ನಿರಹಂಕಾರಿಗಳಾದ ನಮಗೂ ನಿನ್ನ ತಿರುವಡಿಗೂ ಯಾವ ಭೇದವೂ ಇಲ್ಲ. ಭೇದರಹಿತರಾದ ನಮ್ಮಿಬ್ಬರಿಗೂ ಮದ್ಧ್ಯವರ್ತಿಯಾದ ಭೇದವ್ಯವಹಾರವೂ ಹೇಗೋ ಚಿರಂಜೀವಿಯಾಗಿಯೇ ಇದೆ. ನಿನ್ನ ತಿರುವಡಿಯೂ ನಾವೂ ಪ್ರಪಂಚವೂ ಈ ತ್ರಿಪದಾರ್ಥವೂ ಅನಾದಿನಿತ್ಯವಾದ ನಿನ್ನ ತಿರುವಡಿಯೇ. ಆಗ ನಿನ್ನ ತಿರುವಡಿಗೆ ಅದ್ವೈತಸಿದ್ಧಿಯೂ ಇಲ್ಲ. ನಮಗೆ ಬಂಧನಿವೃತ್ತಿಯೂ ಇಲ್ಲ. ಇದಲ್ಲದೆ ನಿನ್ನ ತಿರುವಡಿಗೂ ನಮಗೂ ನಡುವೆಯುಳ್ಳ ಸೇವ್ಯಸೇವಕಬಾವಕ್ಕೆ ಹಾನಿ ಉಂಟಾದೀತ್ತೆಂದರೆ ನಿತ್ಯಬದ್ಧರಾದ ನಾವು ನಿತ್ಯಮುಕ್ತನಾದ ನಿನ್ನ ತಿರುವಡಿಯ ಸೇವೆ ನಡೆಸುವುದು ಸೂಕ್ತವೇ ಆಗಿದೆ. ನಿತ್ಯಬದ್ಧರ ಬಂಧನಕ್ಕೆ ನಿವೃತ್ತಿಯಿಲ್ಲ. ಆದ್ದರಿಂದ ಅದು ನಿಷ್ಪ್ರಯೋಜಕವಾಗಿಯೇ ಕೊನೆಗೊಳ್ಳುತ್ತದೆ. ಪ್ರಯೋಜನವಿಲ್ಲದೆ ಪ್ರವೃತ್ತಿ ನಡೆಸುವುದು ಮೌಢ್ಯವೆಂದೇ ಹೇಳಬೇಕು. ಅನಾದಿಯಾದ ಈ ನಮ್ಮ ಮೌಢ್ಯವೂ ನಿನ್ನ ತಿರುವಡಿಯಲ್ಲಿಯೇ ಕೊನೆಗೊಳ್ಳುತ್ತದೆ. ಇಂಥ ಸರ್ವೋಪಕಾರಿಯಾದ ನಿನ್ನ ತಿರುವಡಿಗೆ ಯಾವ ವಿಧದಲ್ಲೂ ಏನೂ ಉಪಕಾರ ಮಾಡಲು ನಮಗೆ ಭಾಗ್ಯವಿಲ್ಲದಂತಾಯಿತಲ್ಲಾ! ದೈವವೇ, ಈ ವ್ಯಸನವೂ ನಿನ್ನ ತಿರುವಡಿಯಲ್ಲಿಯೇ ನಿರ್ದ್ಧೂಳಿಯಾಗಿದೆ! ಇವೆಲ್ಲ ಹೋಗಲಿ! ಯಾವ ವಿಧದಲ್ಲಾದರೂ ಕನಸ್ಸಿನಲ್ಲಿ ಕಂಡ ಕಥೆಯನ್ನು ಜಾಗ್ರದಾವಸ್ಥೆಯಲ್ಲಿ ಭಾಷಿಸಿ ಕ್ರೀಡಿಸುವಂತೆ, ರಾಜಸತಾಮಸವೃತ್ತಿಗಳಲ್ಲಿ ಸ್ಫುರಿಸಿ ಹರಡಿರುವ ಈ ಅನೃತಜಡಬಾಧೆಯನ್ನು ಅತಿಸೂಕ್ಷ್ಮವಾದ ಶುದ್ಧಸತ್ತ್ವಿಕವ್ಯಾಪಕವೃತ್ತಿ ಪ್ರಕಾಶದಲ್ಲಿ ಕ್ರೀಡಿಸಿ ಅಡಗಿಸಿ, ಆ ನಿಶ್ಚಲವೃತ್ತಿ ಮಾತ್ರವಾಗಿ ಅನುಭವಿಸಿ, ಆ ಅಖಂಡಾಕಾರವೃತ್ತಿಯ ಗೋಳಸ್ಥಾನದಲ್ಲಿ ನಿಂತಿರುವ ನಮಗೂ ನಿನ್ನ ತಿರುವಡಿಗೂ ಮದ್ಧ್ಯೇ ಸೂರ್ಯಪ್ರಕಾಶಗೋಳಗಳಿಗೆ ಇರುವಂತೆ ಯಾವ ವಿಲಕ್ಷಣತೆಯೂ ಇಲ್ಲವೆಂಬ ಅನುಭೂತಿಯನ್ನು ದೃಢಪೆಡಿಸಿ, ಭೋಗಭೊಕ್ತೃಭೋಗ್ಯಾನುಭೂತಿ ಬಿಟ್ಟು, ಶರೀರಚೇಷ್ಟೆ ಮಾತ್ರವಾದ ಪ್ರವೃತ್ತಿಯೊಂದಿಗೆ ಯಥೇಷ್ಟ ವಿಹರಿಸಲು ನಿನ್ನ ತಿರುವಡಿಯ ಅನುಗ್ರಹ ಉಂಟಾಗಲಿ. ಅದಕ್ಕೆ ನಮಸ್ಕಾರ! ನಮಸ್ಕಾರ! ನಮಸ್ಕಾರ!
--------------
ನಾರಾಯಣ ಗುರು