ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಿಲದ್ದೇವಗೋತ್ರಂ ಕನದ್ಧೇಮಗಾತ್ರಂ ಸದಾನಂದಮಾತ್ರಂ ಮಹಾಭಕ್ತಮಿತ್ರಂ ಶರಚ್ಚಂದ್ರವಕ್ತ್ರಂ ತ್ರಯೀಪೂತಪಾತ್ರಂ ಸಮಸ್ತಾರ್ತಿದಾತ್ರಂ ಭಜೇಶಕ್ತಿಪುತ್ರಂ.
--------------
ನಾರಾಯಣ ಗುರು
ಕುಂಭಿಕುಂಭಕುಚಕುಂಭಕುಂಕುಮ ವಿಶುಂಭಿಶಂಭು ಶುಭಸಂಭವಾ ಜೃಂಭಿಜಂಭರಿಪು ಜೃಂಭಲಸ್ತನಿ ನಿಷೇವ್ಯಮಾಣ ಚರಣಾಂಬುಜಾ ಡಿಂಭಕುಂಭಿಮುಖ ಬಾಹುಲೇಯಲ ಸದಂಕಕ ವಿಧುರಪಂಕಕಾ ಡಾಂಭಿಕಾಸುರನಿಶುಂಭಶುಂಭಮಥಿನೀ ತನೋತು ಶಿವಮಂಬಿಕಾ
--------------
ನಾರಾಯಣ ಗುರು
ಕುಡುಕನ ಪರಿ ರಾತ್ರಿ ಚಾಪೆ ಮೇಲೆ ಬಿದ್ದು  ಒದರುವ ಪಾಪವ ತಂದಿಕ್ಕದಿರು  ಮನವೇ, ನೀ ಪಾರ್ವತೀತನಯನನ್ನು  ಅಡಿಮುಡಿ ಧರಿಸಿಕೋ ನಿತ್ಯ,  ಪಾಪದ ಕಾಡು ಸುಟ್ಟುಹೋಗುತ್ತದೆ ಮರುತ್ತುಸೂರ್ಯರ  ಉಪಾಸಿಸುವುದರಿಂದ ಕಿಚ್ಚು ಸುಳಿಯಲಿಸಿಲುಕುವಂತೆ; ಸುಧೆ ಸವಿಯಲು  ನೀನೀಗ ಪೊರೆಯೊ ಆರುಮುಖನೇ
--------------
ನಾರಾಯಣ ಗುರು
ಕುಮುದಿನಿ ತನ್ನೊಳುದಿಸಿ ಕಾಲು ಬೀಸಿ ಸುಮಶರಸಾರಥಿಯಾದ ಸೋಮನಿಗಿಂದಿಗೂ  ಹೇಗೋ ಕರಗಳುಕರಗಿ ಕಾಲೂರಿ ತಮದಲ್ಲಿ ಬೆರೆತು ತಪವಗೈದಿಹನು. 
--------------
ನಾರಾಯಣ ಗುರು
ಕುಲಗಿರಿಯಂತೆ ಸ್ಥಿರಗೊಳ್ಳುತಲುಗದೆ ಕಲಿಮಲವೊಳಗಿದ್ದು ಮರೆಸುತಿರುವುದರಿಂದ ಬಲವು ಎನ್ನಿಂದ ಹರಿದುಹೋಗುತ್ತಲಿದೆ ನಿರ್- ಮಲ ನೆಲೆಯನೆಂದಿಗೆ ನೀಡುವೆ ನೀನೆನಗೆ
--------------
ನಾರಾಯಣ ಗುರು
ಕುವಲಯವೆಲ್ಲ ಬೆಳಗುವ ಹೊಸ ಹವಳಮಲೆಯಲ್ಲಿ ಮೊಳೆತೇಳುವ ತಿಂಗಳೂ ನೆರೆನಿಂತ ಬೆಳ್ಮಣಿ ತಾರೆಗಳು ನಿಂ- ತೆಡವದೆ ರಕ್ಷಿಸಲು ಕೈ ಮುಗಿವೆ.
--------------
ನಾರಾಯಣ ಗುರು
ಕುಸಿಯುವಾಗ ಇವೆಲ್ಲವೂ ಪಾಳಲಿ ತಾನೇ ಹರಡಿ ಬರಿಬಯಲಾಗುವುದು ಸಾಗರದಡಿಯಲಿ ತಾನೇ ಬೀಳ್ವವನಲ್ಲ ಇದುವೇ ಕೈವಲ್ಯ.
--------------
ನಾರಾಯಣ ಗುರು
ಕೂಡಲೆ ಕುದಿದೇಳ್ವ ಅಳಲಕಡಲನ್ನೀಜಿಯೇರಿ ಹೊರಬಂದು ಕಂಡಾಗ ಅಳಿದು ಇಲ್ಲವಾಗಿ ನಿಲ್ಲುವೆ ನೀ ಸುಳಿದು ಸುತ್ತಲೂ ಸುರಿವ ನಿನ್ನ ಸೂಕ್ತಿಯನು ಕಂಡುಕಂಡು  ಬೇಡಿ ನಿಲ್ಲುವ ಎನ್ನ ಮುಡಿಗೆ ತೊಟ್ಟೆ ಈಶನೇ
--------------
ನಾರಾಯಣ ಗುರು
ಕೃಪೆ ರೂಪತಳೆದೊಂದೇ ತೆರದಿ ತುಂಬಿ ನಿಲ್ವ ಪರಮಶಿವ ಭಗವಾನರಿತೆಲ್ಲವನೂ ಸುರನದಿ ತಿಂಗಳುಟ್ಟ ದೈವವೇ ನಿನ್ನ- ತಿರುವಡಿ ನಿತ್ಯವೂ ಪೊರೆಯ ಬೇಕು.
--------------
ನಾರಾಯಣ ಗುರು
ಕೃಪೆಯಿಂದ ಮಣ್ಣುನೀರೊಡು ಮತ್ತಲ್ಲಿ ಗಾಳಿಯೊಡನೆ ಸೇರಿ ಬಯಲೊಳೂ ಅಂದೂ ಇಂದೂ ಒಂದುಗೂಡಿದ್ದು ಮಿಂಚುವ ಕಂಪುಳ್ಳ ಮೈಗೆ ನೀನು ತೊಡಿಸುವ ಮಣಿಯಂತೆ ಅದಕೆ ಅಳತೆಯಿಲ್ಲ ಕಾದಾಡುವ ಅಳಲೂ ಅದರೊಳಿಲ್ಲ 
--------------
ನಾರಾಯಣ ಗುರು
ಕೃಪೆಯಿಕ್ಕುತ ಎನ್ನಲನಂಗರಸ- ಕಾಯ ಕಿತ್ತೊಗೆದು ಕರವ ತೊಳೆದು  ಮಾಗಿ ಬರಿಮುಕುತಿ ಸುರಿದುಹರಿವ- ಹೊಂಬಳ್ಳಿಯೆ ಕಾಲ್ಗಳ ನೀಡೆಲೆ ನೀ. 
--------------
ನಾರಾಯಣ ಗುರು
ಕೆಲವೊಮ್ಮೆ ಶಿವಸೇವೆ ತುಂಬುವುದರಿಂದ ಅಲುಗದಿದ್ದು ಕರಗುವುದು ಮನವು ಹಲವೊಮ್ಮೆ ಒಡೆಯನ ಮಾಯೆಯಲ್ಲಿ  ಹಲವೊಮ್ಮೆ ಹೀಗೆಯೇ ಇರುವುದುಂಟೋ?
--------------
ನಾರಾಯಣ ಗುರು
ಕೈಕಾಲು ಮೊದಲಾದೆನ್ನ ಅಂಗಗಳಲ್ಲೇನೂ ಗೈಯ್ಯದೊಂದು ಸತ್ಕರ್ಮ ಕಳೆದಲ್ಲಿ ಅವಿವೇಕದಿ ಆಗದ್ದ ಗೈಯ್ಯಲು ಮುಂದಾಗದಂತೆ ಮಾಡುವುದು ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಕೈಮುಗಿವ ನನ್ನ ಅಲ್ಲಿಗೆ ಕರೆಯೇ ಇಲ್ಲಿಂದ ಕಡಲಲ್ಲಿ ತೆಪ್ಪಸಾಗಿಸುವ ಎನಗೆ ಯಾರಿಲ್ಲ ನೀನಲ್ಲದೆ ಅಗ್ಗಿಯಲ್ಲಿಟ್ಟ ಮೇಣವಲ್ಲ ತುಪ್ಪ ನನ್ನ ಮನ ಕುಸಿಯುತ್ತಿದೆ ಕೊಳಲೂದು ಕಾರುಗುರುಳೇ.
--------------
ನಾರಾಯಣ ಗುರು
ಕೈಮುಗಿವ ಫಣಿಮಾಲೆ ಸುಳಿಸಿಬೆಸೆದು ತೊಡುವ ಜಡೆಯಾಡಿಬರುವ ನಿನ್ನ ಚೆಲುಮುಖಾಂಬುಜನಯನದಿಂದೆನಗೆ ತೊಡಬೇಕು ಕರುಣಾಕಲಶಗಡಲೇ. 
--------------
ನಾರಾಯಣ ಗುರು