ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಲ್ಪಡುವುದೆಲ್ಲವೂ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಈ ಮೂರು ರೂಪಗಳಿಂದ ಕೂಡಿರುವುದೂ, ಪರಮಾತ್ಮನಿಂದ ಉಂಟಾಗಿ, ಅದರಲ್ಲಿಯೇ ಲೀನವಾಗುವುದೂ ಆಗಿದೆ. ಆದ್ದರಿಂದ ಪರಮಾತ್ಮನಲ್ಲದೆ ಬೇರೇನೂ ಇಲ್ಲ. ಸಕಲ ಪಾಪಗಳನ್ನೂ ನಾಶಗೊಳಿಸುವ-ಹುರಿದು ಕಳೆಯುವ-ಪರಮಾತ್ಮನ ಯಾವ ಸ್ವರೂಪ ನನ್ನ ಬುದ್ಧಿಯನ್ನು ತಿಳಿಗೊಳಿಸಿ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದೋ, ಧ್ಯಾನಿಸಬೇಕಾದ ಪರಮಾತ್ಮನ ಆ ದಿವ್ಯರೂಪವನ್ನು ನಾನು ಧ್ಯಾನಿಸುತ್ತೇನೆ. ಹೇ ಪರಮಾತ್ಮನೇ, ಈ ಪ್ರಕಾರ ಎಡೆಬಿಡದೆ ನನಗೆ ತಮ್ಮನು ಧ್ಯಾನಿಸುವುದಕ್ಕೂ, ತಮ್ಮ ಪರಮಾನಂದ ಲಭಿಸುವುದಕ್ಕೂ ತಮ್ಮ ಅನುಗ್ರಹ ನನ್ನಲ್ಲಿ ಉಂಟಾಗಲಿ. ಹೇ ದೈವವೇ, ಕಣ್ಣಿಂದ ಕಾಣುವುದೊಂದೂ ನಿತ್ಯವಲ್ಲ. ಶರೀರವೂ ನೀರಿನ ಗುಳ್ಳೆಯಂತೆ ನೆಲೆ ಇಲ್ಲದ್ದು. ಎಲ್ಲವೂ ಸ್ವಪ್ನಸಮಾನವೆಂದಲ್ಲದೆ ಏನೂ ಹೇಳುವಂತಿಲ್ಲ. ನಾವು ಶರೀರವಲ್ಲ, ಅರಿವು. ಶರೀರ ಉಂಟಾಗುವ ಮುನ್ನವೂ ಅರಿವಾದ ನಾವಿದ್ದೆವು. ಇನ್ನು ಇದೆಲ್ಲವೂ ಇಲ್ಲದೆ ಹೋದರೂ ನಾವು ಹೀಗೆ ಪ್ರಕಾಶಿಸುತ್ತಲೇ ಇರುತ್ತೇವೆ. ಜನನ, ಮರಣ, ಬಡತನ, ರೋಗ, ಭಯ ಇವೇನೂ ನಮ್ಮನ್ನು ಮುಟ್ಟುವುದಿಲ್ಲ. ಈ ರೀತಿ ಉಪದೇಶಿಸಲ್ಪಡುವ ತಿರುವಾಕ್ಕುಗಳನ್ನೂ, ಈ ತಿರುವಾಕ್ಕುಗಳ ಉಪದೇಶಕನಾದ ಪರಮಾತ್ಮನನ್ನೂ ನಾನು ಉಣ್ಣುವಾಗಲೂ ಮಲಗುವಾಗಲೂ ಎಡೆಬಿಡದೆ ಯಾವಾಗಲೂ ನೆನೆಯುವಂತಾಗಲಿ. ನೀನು ನನ್ನ ಎಲ್ಲ ಪಾಪಗಳನ್ನೂ ಕಸಿದುಕೊಂಡು ನನಗೆ ನಿನ್ನ ಪರಮಾನಂದವನ್ನು ನೀಡಬೇಕು. ನನ್ನ ಲೋಕವಾಸವು ಕಷ್ಟಗಳು ಕೂಡದೆ ಕಳೆಯುವುದಕ್ಕೂ, ಕಡೆಯಲ್ಲಿ ನಿನ್ನ ಪರಮಪದವನ್ನು ಪ್ರಾಪಿಸುವುದಕ್ಕೂ ನಿನ್ನ ಅನುಗ್ರಹವು ನನ್ನಲ್ಲಿ ಉಂಟಾಗಲಿ.
--------------
ನಾರಾಯಣ ಗುರು
ಕಾಣುವ ಕಣ್ಣಲ್ಲಡಗುತ ಕಾಣುವುದಿಲ್ಲ ಈ ನಿರಂತರ ಸಕಲವನು ಶಬ್ದವು ಕಿವಿಯಲ್ಲಡಗುವಂತೆ ತೊಗಲಲಿ ಅಳಿದು ಸ್ಪರ್ಶ ಹೋಗುವುದು
--------------
ನಾರಾಯಣ ಗುರು
ಕಾಣುವ ಕಣ್ಣಿಂಗೆ ಯಾವ ದಂಡವಿಲ್ಲ ಕಂಡೆನ್ನ ಪ್ರಾಣ ಬಿಡುವೊಡೆ ಏಕೆ ಮತ್ತೆಲ್ಲವು ಕಾಣುವ ಬಣ್ಣ ಬಗೆಯಿದೆಲ್ಲವಳಿದೇಳ್ವ ನಿನ್ನ ಸೊಬಗಿನ ಕೆಂಗಾಲನಿತ್ತು ಜಯಿಸೊ ಶಂಭೋ.
--------------
ನಾರಾಯಣ ಗುರು
ಕಾದು ಜಯಿಸಲಸಾಧ್ಯ ಒಂದರೊಂದಿಗೆ ಯಾವಮತವೂ ಕಾದು ತೊಲಗುವುದಿಲ್ಲ, ಪರಮತವಾದಿಯಿದನ್ನು ನೆನೆಯದೆ ಸುಮ್ಮನೆ ಕಾದಿ ಕೆಡುವವನೆಂಬ ಬುದ್ಧಿಬೇಕು.
--------------
ನಾರಾಯಣ ಗುರು
ಕಾರಣಾವ್ಯತಿರಿಕ್ತತ್ವಾತ್ ಕಾರ್ಯಸ್ಯ ಕಥಮಸ್ತಿತಾ? ಭವತ್ಯತಃ ಕಾರಣಸ್ಯ ಕಥಮಸ್ತಿ ಚ ನಾಸ್ತಿತಾ?
--------------
ನಾರಾಯಣ ಗುರು
ಕಾರ್ಗೂದಲ ಚೆಲುವೆಯರೊಡನೆ ಕಲೆತುಕರಗಿ ಆ ಹೂಮೊಗ್ಗಿನಡಿಯಗಲಿ ಬಳಲುತಿಹನಡಿಯನಿಲ್ಲಿ  ಹೆಗ್ಗರುಣೆಯ ತೊರೆಯುಟ್ಟಯ್ಯನ ಮರೆಯುತ್ತಲೀ  ಜೆಪುಣನಿನ್ನುಳಿಯಬೇಕೇಕೆ ಉಸಿರಾಡುತ್ತಲಿ?
--------------
ನಾರಾಯಣ ಗುರು
ಕಾರ್ಮುಗಿಲ್ವರ್ಣ ತನ್ನಕ್ಷಿಯನು ಕಿತ್ತು ನಿನ್ನ ಚರಣದ್ವಯದಲ್ಲಿ ಅರ್ಚನೆ ಗೆಯ್ದಂತೆ ಸಾದ್ಧ್ಯವಾಗುವುದೇ ಇವಂಗಿಂದು ನೀ ನಿನ್ನ ಕಣ್ಮೊನೆಯನಿತ್ತೆನೆಗೆ ವರವ ನೀಡೊ 
--------------
ನಾರಾಯಣ ಗುರು
ಕಾರ್ಯತ್ವಾದಸತೋ’ಸ್ಯಾಸ್ತಿ ಕಾರಣಂ ನ ಹ್ಯತೋ ಜಗತ್ ಬ್ರಹ್ಮೈವ ತರ್ಹಿ ಸದಸ- ದಿತಿ ಮುಹ್ಯತಿ ಮಂದಧೀಃ.
--------------
ನಾರಾಯಣ ಗುರು
ಕಾಲದೇಶಕನಕಗಳು ವಿಸ್ಮೃತಿ ಹೊಂದುವ ಪರಿಯಲ್ಲಿ  ಆ ಹಾಲನೆತ್ತಿ ಬೆರಗಾದ ಖಗವು ಬಕವು ಮುನಿದು ಶೋಕಹೊಂದುವಂತೆ   ಕೆಲಸ ಮಾಡಿ ಒಲೆಯಲ್ಲಿಟ್ಟು ಕರಗಿಸಿದ ಕಬ್ಬಿಣದಲ್ಲಿ ಬಿದ್ದ ಜಲದಂತೆ  ‘ನೆನೆದೊಡೆ ಬಾನ ಜ್ವಾಲೆಯಲಿ ಹಣವ ತೆತ್ತು ಪಡೆದುಕೊಳ್ಳುವ ಉಪದೇಶವು.’   
--------------
ನಾರಾಯಣ ಗುರು
ಕಾಲಾಂಭೋದಕಲಾಯ ಕೋಮಲತನು- ಚ್ಛಾಯಾಶಿತೀಭೂತಿಮತ್- ಸಂಖ್ಯಾನಾಂತರಿತನ್ತನಾಂತರಲಸ- ನ್ಮಾಲಾಕಿಲನ್ಮೌಕ್ತಿಕಾಂ ನಾಭೀಕೂಪಸರೋಜನಾಲಿವಿಲಸ- ಚ್ಛಾತೋದರೀಂ ಶಾಶ್ವತೀಂ ದೂರೀಕುರ್ವಯಿ ದೇವಿ ಘೋರದುರಿತಂ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಕಾಲಾಯ ಶೀತರುಚಿ ಬಾಲಾವಚೂಡಶುಭ-  ಶೀಲಾವಧೂತಚರಿತ  ಶ್ರೀಲಾಘವಾವರದ ಲೀಲಾಹಿ ವಾರಿಸಖ ಬಾಲಾಶಯಾಶಯಶುಚೇ ಕಾಲಾನಲೋಪಮಿತ ಫಾಲಾವಲೋಕನಕ ಕಾಲಾಜಿನಾವೃತ ತನೋ ವೇಲಾಯುಧೋ ಮಹತಿ ಕೋಲಹಲಾರವ ಸು ಲೀಲಾತನೋತು ಕುಶಲಂ.
--------------
ನಾರಾಯಣ ಗುರು
ಕಾಲಾಶ್ರಯವೆಂದಾಗಿ ಬರುವವರಿಗನುಕೂಲನು ಫಾಲಾಕ್ಷನಧರ್ಮಿಷ್ಠರಿಗೆ ಅತಿ ಪ್ರತಿಕೂಲನು ಪಾಲಿಸಬೇಕೆನ್ನ ಚಂದದಲಿಂದು ಕುಳತ್ತೂರು ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಕಿಂ ತಸ್ಯ ಲಕ್ಷಣಂ?
--------------
ನಾರಾಯಣ ಗುರು
ಕಿಂಚಾಸುರದ್ವಿರದ ಪಂಚಾನನ ಪ್ರಣವ- ಸಂಚಾರಿಹಂಸಸಮನೇ ಕಿಂಚಾಪಲನ್ನಮನ ತುಂಚಾನುಜೀವಿ ಮಮ ಸಿಂಚಾಮೃತಾಭ ಕೃಪಯಾ ಪಂಚಾನನಪ್ರಣವ ಕಂಚಾಪಿ ಶಾಸಿ ಕತಿ- ಮುಂಚಾಶು ಬದ್ಧಕಮತಿಂ ಪಂಚಾಶುಗಾರಿಸುರ ಪಂಚಾನನಾತ್ಮಜಮಿ- ಮಂಚಾಪಿಪಾಹಿ ಸತತಂ.
--------------
ನಾರಾಯಣ ಗುರು
ಕಿರುರೋಮ ತೊಗಲು ಹೊದಿಸಿ ಸಾಯಲು ವರವ ಪಡೆದು ಬಲಕ್ಕೆ ಗಾಳಿಯಲ್ಲಿ ತರಗೆಲೆ ಸುಳಿದು ಹಾರುವಂತೆ ಸುಳಿವುದನಿಲ್ಲಿ ಬಾರದಂತೆ ಬೆಂಕಿಯಿಕ್ಕು.
--------------
ನಾರಾಯಣ ಗುರು