ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಮ್ ತತ್ ಸದಿತಿ ನಿರ್ದ್ದಿಷ್ಟಂ ಬ್ರಹ್ಮಾತ್ಮೈಕ್ಯಮುಪಾಗತಂ ಕಲ್ಪನಾದಿವಿಹೀನಂ ಯತ್ ತತ್ಪರಜ್ಞಾನಮೀರ್ಯತೇ.
--------------
ನಾರಾಯಣ ಗುರು
ಕಂಕಮಾದಿಗಳುಣ್ಣುವ ಅಶನ ಕಳೇಬರವಿದಲ್ಲವೇ ಹೆಗ್ಗಲಾವತಿ! ಬಳಲಿಸುತ್ತಿದೆಯಿದು ಮತಿಪ್ರಸಾದವ ನೀಡು ನೀ ತಿಂಗಳಮೌಲಿ ತಿರುಮೈ ಸೋಕಿ ಎಡೆಗೂಡಿ ನಿತ್ಯವೂ ಇರುವೆನ್ನ ಚಿನ್ನವೇ! ಸಕಲ ಸಂಕಟಗಳೂ ಕಳೆಯಲು ನೀಡು ವರವ.
--------------
ನಾರಾಯಣ ಗುರು
ಕಂಗಳವೆಷ್ಟು ಬುರುಡೆಗಳೆಷ್ಟು ಹುಲಿಯಾನೆ ಚರ್ಮಗಳವೆಷ್ಟು ತಿಂಗಳ ಕಲೆಗಳೆಷ್ಟು  ವಿಷಕಕ್ಕುವ ಹಾವುಗಳವೆಷ್ಟು  ಅಲೆಯೆದ್ದು ಏಳುವ ಗಂಗೆಯೇ  ನಿನಗೂ ಇದರಂತೆ ಲೆಕ್ಕವಿಲ್ಲ,  ನಿನ್ನ ನೀರಲಿ ಮುಳುಗುವವರನ್ನೆಲ್ಲ ಸಂಸ್ಕರಿಸಿ  ಶಿವಸಾರೂಪ್ಯ ನೀಡುವೆ ನೀನು, ಇದು ದಿಟ.
--------------
ನಾರಾಯಣ ಗುರು
ಕಂಪು ಮೊದಲಾಗಿ ಮಣ್ಣಲ್ಲುಣ್ಣುವವೆಲ್ಲವೂ ಅಳಿದು ಹೋದರೂ ಸೇರಿನಿಲ್ವ ಒಳಚಿಗುರಕರಗಿಸಿ ತಿಕ್ಕಿ ನೆಕ್ಕುವ ಗುಣತುಂಬಿದ ಕೋಮಲಗೊಡದೊಳಂದೂ ಇಂದೂ  ಸಾಟಿಯೊಂದಿಲ್ಲ ಎಲ್ಲೂ ಇಲ್ಲ ಎಲ್ಲೂ ಶುಭಮಂಗಳ
--------------
ನಾರಾಯಣ ಗುರು
ಕಂಸಾಸುರದ್ವಿರದಕೇಸರಿವೀರ, ಘೋರ- ವೈರಾಕರಾಮಯವಿರೋಧಕರಾಜ, ಶೌರೇ, ಹಂಸಾದಿರಮ್ಯ ಸರಸೀರುಹಪಾದಮೂಲ   ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
--------------
ನಾರಾಯಣ ಗುರು
ಕಟಿಯೆಡೆಯಲ್ಲಿ ಮರೆಯಿದ್ದು ಕೂಡುವ ಧೂಳೊಳುರುಳಿ ಬಳಲಿ ನಾಶವೊಂದಲು ಇವನಿಗೆ ಸ್ಥಿತಿಬಾರದಂತಿರಿಸಿ ಅಡಿಯನು ನೀಡೊ ಪಾರ್ವತೀಶ
--------------
ನಾರಾಯಣ ಗುರು
ಕಡಲು ಸುಳಿಯುವ ಬಲುದೊಡ್ಡ ಧರೆಯಲಿ ಅಪಾರವಾಗಿ ಹಸಿವು ಮಳೆ ಸುರಿಯದಂತಾದರೆ ಬಿಡದಂತೆ ಅಳಲು ಕೂಡುವುದು
--------------
ನಾರಾಯಣ ಗುರು
ಕಡಲು ಸೋರಿಸಿಗಳೆದು ತಿಪ್ಪೆತೋಡಿ  ತಟವದರೊಳಿಟ್ಟು ಉಬ್ಬಿ ನಾರುವ  ಮೊಲೆಗಳನೆತ್ತಿ ಬರುವ ಕೈಬಳೆಯ ಹೆಣ್ಣ  ಅಡಿಯನರಸುತ ನಡೆಸದಿರು ಮಹೇಶಾ.
--------------
ನಾರಾಯಣ ಗುರು
ಕಡಲೊಳಗೇಳುವ ತರಂಗಗಳ ಸಾಲಂತೆ ಕಲಕಿ ಬರುವುದು ಒಡನೊಡನೆ ಎದೆಯಳಿದು ಹಲವುಸಂಗವಗಲುವಂತೆ ಘಟಪಟವೆಂದೆತ್ತಿ ಇಲ್ಲಿ ತೊಟ್ಟು ಕಿತ್ತಾಡುವ ಈ ಕೊಡ ಒಡೆಯುವಮುನ್ನ ಎತ್ತಿ ಒಲಿಯೊ ನೀನು 
--------------
ನಾರಾಯಣ ಗುರು
ಕಡಲೊಳೇಳ್ವ ತೆರೆಯಂತೆ ಕಾಯವೊಂದೊಂದು ಒಡನೊಡನೇರಿ ಎದ್ದು ಅಮರುತಿಹುದು ಅಳಿವಿದಕೆಲ್ಲಿದಯ್ಯೋ! ಮೂಲಸಂವಿತ್- ಕಡಲೊಳು ಎಡೆಬಿಡದಂತ ಕರ್ಮವಹುದು.
--------------
ನಾರಾಯಣ ಗುರು
ಕಣಿಕಾಣುವ ಈ ಕನಕಕ್ಕೆ ಕಾರ್ವೇಣಿ ಮಣ್ಣಹಾದಿಯ ಬಿಸಿಲುಗುದುರೆಯ ನೀಗಿಸೆಂದು ಇಗೊ ಹಾಡುವೆ ಬೇನೆ ಕಳೆವಂತೆ ಬಿಟ್ಟಗಲದೆ ಪೊರೆವ ನಿನ್ನಯ ಮಣಿಮೈ ತನ್ನಲ್ಲಿ ಸೇರುವುದಕ್ಕೆ ನೀ ಮೊರೆಯೆ.
--------------
ನಾರಾಯಣ ಗುರು
ಕಣ್ಣದುಂಟೆರಡಾರು ಕಿವಿ, ಅಂತೆಯೇ ಕೈಗಳು,  ಕಾರುಣ್ಯವೀಪರಿ ಇನ್ನಾರಿಗೂ ಇಲ್ಲ, ಕಂಡಿಲ್ಲವೇ ನೀನೀ ದಾಸ ಪಡುವ ಪಾಡನ್ನಿಲ್ಲಿ, ಕಂಡವರು  ದೂರುವುದನೊಂದು ಕಿವಿಯಿಂದಾದರೂ ಕೇಳಲಿಲ್ಲವೇ, ಬೇನೆ ತೀರಿಸಿ ಎನ್ನ ಪೊರೆಯುತ್ತ ಅಭಯವ ನೀಡಲು ಕೈಯ್ಯೊಂದು ತಾನೆ ಸಾಲದೆ?
--------------
ನಾರಾಯಣ ಗುರು
ಕಣ್ಣುಗಳಿಂದ ಹರಿಯುವ ಅಮೃತತೆರೆ- ಗುಂಡಿಗಳಲ್ಲಿ ಬಿದ್ದು ಹರಿವ ಪರಗಡಲ ಸುಳಿಗಳೊಳ್ ಬಿದ್ದು ಸುಳಿಸುಳಿದು ನಿನ್ನ ಚರಣಕ್ಕೆ ಬಂದು ಸೇರುವುದೆಂದಿಗೆ ನಾನು.
--------------
ನಾರಾಯಣ ಗುರು
ಕಣ್ಮೊನೆಯಿಂದ ಮರುಳ್ಮಾಡಿ ಹೊಕ್ಕುಳೆಂಬ ಗುಂಡಿಯೊಳುರುಳಿಸಿ ಬೀಳಿಸಲು ಮುಂದಾಗಿ ಮೊಲೆಯನೆತ್ತಿ ಬರುವ ಹೆಂಗಳೆಯರ  ಹಾದಿಗಳೊಳಿಟ್ಟು ಅಲೆಸದಿರು ಮಹೇಶಾ!
--------------
ನಾರಾಯಣ ಗುರು
ಕದಲದೆ ಏಕವಾಗಿ ಬಹು ಜಿತಮಾನಸವೇಗದಿ ಮುಂದಿರುವ ಅದರೊಳು ಸೇರದೆ ನಿಂತು ಹೋಗುವುದು ಇಂದ್ರಿಯಾವಲಿ
--------------
ನಾರಾಯಣ ಗುರು