ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಬ್ಬರೂ ಇಲ್ಲ ನಮಗೆ ನೀನಲ್ಲ- ದಿಲ್ಲೊಂದಾಸರೆ ತಾಂಡವಮೂರ್ತಿ ಧರೆಯೊಳು ಸ್ಮರಹರ! ಸಾಂಬ! ಸದಾಪಿ ನೀನೊಲಿ- ದಿಲ್ಲೊಂದು ಕೃಪೆ ನೀಡಲು ಮತ್ತೇನು ಬೇಕು
--------------
ನಾರಾಯಣ ಗುರು
ಒಮ್ಮೆ ನಿನ್ನ ತಿರುಮೈ ಬಂದು ಮುಂದೆ ಸಿರಿಮುಖವ ತಿರುಗಿಸಿ ನೋಡಿಯೆನ್ನೊಳು ಹೆಚ್ಚುವ ಸಂಕಟದ ಹೆಗ್ಗಡಲು ದಾಟಿಸ- ಲೆಂದಿಗೆ ತರವಾದೀತು ದಯಾಕರನೇ
--------------
ನಾರಾಯಣ ಗುರು
ಒರೆದ ಶಕ್ತಿಗಳನನುಸರಿಸಿ ಎರಡನೆಯ ತಿರುವು ಇವಯೊಳು ಸಮದ ವಿಶೇಷವೊಂದೇ. ವಿರತಿ ಬಾರದ ವಿಷಮಾವಿಶೇಷವೊಂದೀ- ಪರಿ ಇವಿಬ್ಬಗೆಯದಾಗಿರುವವು.
--------------
ನಾರಾಯಣ ಗುರು
ಒಲಿದು ಇಮ್ಮೊಲೆಗಳ ಕುಣಿಸಿ ಉಸಿರುಣ್ಣುವ  ಹೆಣಗಳ ಬಗ್ಗೆ ಬೆಳೆಯುತಿದೆ ಬಲುವಾಗಿ ಭೀತಿ  ಕಂಪು ಮೊದಲಾದೈದರಲೂ ಕೂಡಿ ಮೆರೆವ ಹೆಣಗಳೊಡನೆ ಕನಸಲೂ ನಾ ಬೆರೆಯಲಾರೆ.
--------------
ನಾರಾಯಣ ಗುರು
ಒಲಿಯಬೇಕೆನ್ನಲಿ ಕೃಪೆದೋರಿ; ಬಿದ್ದು ನಾನೀ  ಗುಣವಿರದ ಕುಲಟೆಯರೊಡನೆ ಅಲೆಯಲೇಕೆ ? ಬಳಸಿ ಅಪ್ಪುವ ಬಲುಹುಚ್ಚಿಯ ಬುಡಹರಿದು ಕಂಪುಗಳು ತೀರಲೆಂದು ಇಗೋ ಕೂಗುತಿಹೆನು.
--------------
ನಾರಾಯಣ ಗುರು
ಒಳ ಒಡಲಿಗೂ ಇಂದ್ರಿಯದೊಡನೆ ಮನವಳಿದು ಏಳುವ ಈ ಹಗಲಿರುಳಿಗೂ ಮುನ್ನವಿದ್ದರಿವ ಅರಿವಿನ  ಬೆಳಕಲಿ ಇದೆಲ್ಲವೂ ಸುತ್ತ ತಿಳಿದುಬರುವ ನಾವು   ವಂಚನೆಯಿಲ್ಲದ ವೈಭವಗಳಲ್ಲಿ ಅಡಗಿದ್ದು ಬದುಕೋಣ
--------------
ನಾರಾಯಣ ಗುರು
ಒಳಕಿಚ್ಚಾರಿಸಲು ಉಪಾಯನೆರವುಗಳನಿನ್ನು  ಇನಿಮೆಯ ಕ್ಕಣ್ಮಣಿಯೇ ನೀ ನೀಡದಿರಲು ಒಳತೀವ್ರವೆದ್ದಿರುವ ದಹನಶಿಖೆಯಲಿ ನಾನು ಬೆಂದುಹೋಗಲು ನಿಶ್ಚೈಸಿರುವೆಯೇ? ಹುಚ್ಚು ಭ್ರಾಂತಿನ  ಬಾಧೆಯಳಿಯಲಲೆಯುವ ಈ ಹುಚ್ಚುನಾಯಿಗುಂಟೇ  ಸುಬೋಧ, ತಪ್ಪೆಲ್ಲವೂ ನೀ ಮನ್ನಿಸಿ ಆಳ್ವೆಯಲ್ಲೋ. 
--------------
ನಾರಾಯಣ ಗುರು
ಒಳಗಿರುತ್ತಿಹ ದೋಷಭಾರ ನೀಗಿಸಲು ಅತಿಸೌರಭದ ಬೆಳ್ಳಿಮುತ್ತು ಹರಳುಗಳಕೂಡಿ ಪೋಣಿಸಿತೊಟ್ಟ ಎದೆಯನೂ ವಳ್ಳಿಯ ಮಧುವಣಿಗನೇ, ನಿನ್ನ ಉದರಾಭೆ ತಿರುನಾಭಿಯೂ ಎನ್ನೊಳಗಾಗಲಿ ಸದಾ ಪರಿಶುದ್ಧಯೇ ಗುಹ ಪಾಹಿಮಾಂ
--------------
ನಾರಾಯಣ ಗುರು
ಒಳಗೂ ಹೊರಗೂ ತುಂಬಿರುವ ಮಹಿಮೆಯುಳ್ಳ ನಿನ್ನ ಪದವನ್ನು ಹೊಗಳುವೆವು ನಾವು ಒಡೆಯನೇ, ಜಯಿಸು.
--------------
ನಾರಾಯಣ ಗುರು
ಓ! ಇವೆಲ್ಲವೂ ನಮ್ಮೆದಿರು ಕನ್ನಡಿಯಲ್ಲಿ ಕಾಣುವ ನೆರಳಿನಂತೆಯೇ ಇದೆ. ಅದ್ಭುತ! ಎಲ್ಲವನ್ನು ಕಾಣುವ ಕಣ್ಣನ್ನು ಕಣ್ಣು ಕಾಣುತ್ತಿಲ್ಲ. ಕಣ್ಣಮುಂದೆ ಕೈಯ್ಯಲ್ಲೊಂದು ಕನ್ನಡಿ ಹಿಡಿದಾಗ ಕಣ್ಣು ಆ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತದೆ. ಆಗ ಕಣ್ಣು ಕನ್ನಡಿಯನ್ನೂ ಪ್ರತಿಬಿಂಬವನ್ನೂ ಕಾಣುತ್ತದೆ. ಪ್ರತಿಬಿಂಬವು ಜಡವಾಗಿದೆ. ಅದಕ್ಕೆ ಕಣ್ಣನ್ನು ಕಾಣುವ ಶಕ್ತಿಯಿಲ್ಲ. ಕಣ್ಣಿಗೆ ಕಣ್ಣನ್ನು ಇದಿರಾಗಿನೋಡಲು ಸಾದ್ಧ್ಯವಿಲ್ಲ. ಹೀಗೆ ಕಣ್ಣೂ, ಕಣ್ಣಿನ ಪ್ರತಿಬಿಂಬವೂ ಕಣ್ಣಲ್ಲಿ ಕಾಣದಿರುವಾಗ, ಅಲ್ಲಿ ಕಣ್ಣನ್ನು ಕಾಣುವುದು ನಾವೇ. ಹೀಗೆಯೇ, ಈ ಕಣ್ಣನ್ನು ಕಾಣುವ ನಮ್ಮನ್ನು ನಾವು ಕಾಣುವುದಿಲ್ಲ. ನಮ್ಮೆದಿರು ಕನ್ನಡಿಯೊಂದನ್ನು ಸಂಕಲ್ಪಿಸುವಾಗ ನಾವು ಆ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತೇವೆ. ಆಗ ಆ ಪ್ರತೀಬಿಂಬಕ್ಕೆ ನಮ್ಮನ್ನು ಕಾಣುವ ಶಕ್ತಿಯಿಲ್ಲ. ಪ್ರತಿಬಿಂಬವು ಜಡವಾಗಿದೆ. ನಮಗೆ ನಮ್ಮನ್ನು ಇದಿರಿಟ್ಟುನೋಡಲು ಸಾದ್ಧ್ಯವಿಲ್ಲ. ನಾವು ನಮ್ಮಲ್ಲಿ ಕಲ್ಪಿತವಾಗಿರುವ ಕನ್ನಡಿಯನ್ನೂ ಆ ಕನ್ನಡಿಯೊಳಗಿನ ಪ್ರತಿಬಿಂಬವನ್ನೂ ಮಾತ್ರ ಕಾಣುತ್ತೇವೆ. ಆಗ ನಮ್ಮನ್ನು ಕಾಣುವುದು ನಮ್ಮ ಮೇಲೆ ನಿಂತಿರುವ ದೈವವಾಗಿದೆ. ಇದರರ್ಥ, ಕಲ್ಪಿತವಾದ ಕನ್ನಡಿ, ಅದರೊಳಗೆ ನಿಂತ ನಮ್ಮ ಪ್ರತಿಬಿಂಬ, ಕಣ್ಣು, ಕೈಯ್ಯಲ್ಲಿರುವ ಕಣ್ಣಡಿ, ಆ ಕನ್ನಡಿಯೊಳಗೆ ನಿಂತಿರುವ ಕಣ್ಣಿನ ಪ್ರತಿಬಿಂಬ, ಈ ಐದೂ ನಮಗೆ ಶರಣಾಗಿ ನಿಂತಿವೆ. ಇದನ್ನು ಕಾಣುವ ಕಣ್ಣು ನಾವಾಗುತ್ತೇವೆ. ಕಣ್ಣು ಕಣ್ಣಿನ ಪ್ರತಿಬಿಂಬವನ್ನೂ ಕನ್ನಡಿಯನ್ನೂ ಮಾತ್ರ ಕಣುತ್ತದೆ. ನಾವು, ನಮ್ಮ ಪ್ರತಿಬಿಂಬ, ಕನ್ನಡಿ, ಕಣ್ಣು, ಕಣ್ಣಿನ ಪ್ರತಿಬಿಂಬ, ಕೈಯ್ಯಲ್ಲಿರುವ ಕನ್ನಡಿ- ಇದಾರೂ ದೈವಕ್ಕೆ ಶರಣಾಗಿ ನಿಂತಿವೆ. ಇದನ್ನು ಕಾಣುವ ಕಣ್ಣು ದೈವವಾಗಿದೆ. ಓ! ಇದು ದೊಡ್ಡದೊಂದು ಆಶ್ಚರ್ಯವಾಗಿದೆ! ನಾವೆಂದಲ್ಲ, ನಮ್ಮಿಂದ ಕಾಣಲ್ಪಡುವುದೆಲ್ಲವೂ ಹೀಗೆ ಪ್ರತಿಬಿಂಬಿಸಲು ದೈವವು ಎಡೆಮಾಡಿಕೊಟ್ಟಿದೆ. ಇದಲ್ಲದೆ ಇದೆಲ್ಲವನ್ನೂ ದೈವವೇ ನೋಡುತ್ತದೆ. ಆಗ ದೈವವು ದಿವ್ಯವಾದೊಂದು ಕನ್ನಡಿಯೂ ಕಣ್ಣೂ ಆಗಿದೆ. ಓ! ಇಗೋ! ದಿವ್ಯವಾದೊಂದು ಕನ್ನಡಿಯಲ್ಲಿ ಹೊಸ ಮಲೆಯೊಂದು ಕಾಣುತ್ತಿದೆ. ಅತ್ತ ಇಗೋ ಚಿತ್ರವೊಂದು ಕಾಣುತ್ತಿದೆ. ಇದು ನಾವು ಹಿಂದೆ ಕಂಡದ್ದೆಂದೇ ತೋರುತ್ತಿದೆ. ಓ! ಇಗೋ ಮದ್ದುಮಾಮಲೆಯೂ ಕನ್ಯಾಕುಮಾರಿಯೂ ಮಧುರೆಯೂ ಕಾಶಿಯೂ ಚಿದಂಬರವೂ ನಮ್ಮ ಒಳಗೆ ಅಕ್ಕಪಕ್ಕದಲ್ಲಿ ಕಾಣುತ್ತಿವೆ. ಓ! ಇದು ಎಷ್ಟೋ ದೂರದಲ್ಲಿದೆ. ನಾವು ಇಲ್ಲಿ ನಿಂತಿದ್ದೇವೆ. ಓ! ಇಗೋ, ಆನೆಯೊಂದು ಓಡಿಸುತ್ತಿದೆ. ನಾವು ಹೆದರಿ ಮಲೆಯಮೇಲೇರುತ್ತಿದ್ದೇವೆ. ಇಲ್ಲಿ ಕುಳಿತ್ತಿರುವ ಯೋಗೀಶ್ವರನನ್ನು ಉಪದೇಶಕೇಳಿ ನಾವು ಯೋಗಾಗ್ನಿಯಲ್ಲಿ ದಹಿಸುತ್ತಿದ್ದೇವೆ. ಓ! ಇಗೊ, ಹೀಗೆ ಕನಸ್ಸು ಕಾಣುತ್ತ ಎದ್ದು ನಿಷ್ಕಂಪವಾಗಿದ್ದು ನಿಟ್ಟುಸಿರು ಬಿಡುವೆ. ಚಿತ್ರ! ಇಗೋ ನಾವು ನಿದ್ರೆಹೋಗಿ ಎದ್ದುಕೂತ್ತು ‘ಏನೂ ಅರಿಯದೆ ಸುಖವಾಗಿ ನಿದ್ದೆಮಾಡಿದೆವು,’ಎಂದು ನಮ್ಮೆದಿರು ನಿಲ್ಲುವ ಹೆಬ್ಬಯಲಲ್ಲಿ ಒಂದು ಅಜ್ಞಾನವನ್ನೂ ಅಹಂಕಾರವನ್ನೂ ಸುಮ್ಮನೆ ಕಲ್ಪಿಸಿ ವ್ಯವಹರಿಸುತ್ತೇವೆ. ಓ! ಇಗೋ! ಕಿಟಕಿಯಿಂದ ಬರುವ ಸೂರ್ಯಕಿರಣದಲ್ಲಿ ಬಿದ್ದು ಆಡುವ ಧೂಳಿಯಂತೆ ಅಂಢಕೋಟಿಗಳು ಆಡುತ್ತಿವೆ. ಓ! ಇಗೋ! ಇದೆಲ್ಲವೂ ನಮ್ಮಲ್ಲಡಗಿ ನಾವು ನಮ್ಮಮೇಲೆ ನಿಂತಿರುವ ದಿವ್ಯವಾದ ಕನ್ನಡಿಯಲ್ಲಿ ಮರೆಯಾಗುತ್ತೇವೆ. ಈ ಕನ್ನಡಿ ನಮ್ಮ ದೈವವಾಗಿದೆ. ಓ! ಇಗೋ! ಮತ್ತೆ ಬಿಸಿಲುಕುದುರೆಯಿಂದ ನೀರುಎದ್ದುಬರುವಂತೆ ಇವೆಲ್ಲವೂ ದೈವದಿಂದ ಎದ್ದುಬರುತ್ತದೆ. ಆದರೆ, ದೈವಾಂಶವಾದ ನಮ್ಮ ಒಳಗೆ ಇವುಗಳನ್ನೆಲ್ಲ ಹೊರಗಟ್ಟಲಾಗಿದೆ ಎಂದು ಇದರರ್ಥ. ಓ! ಇಗೋ! ಇವೆಲ್ಲವೂ ನಮ್ಮೊಂದಿಗೆ ದೈವವು ತನ್ನ ದಿವ್ಯವಾದ ವಿಶಾಲದರ್ಪಣದಲ್ಲಿ ತೆಗೆದುಹಾಸಿ ವಿಸ್ತಾರವುಳ್ಳ ಕಣ್ಣಿನಿಂದ ನೋಡುತ್ತದೆ. ಮತ್ತೆ ಕಣ್ಣಲ್ಲಿ ಅಡಗಿಸುತ್ತದೆ. ಪುನಃ ಕಣ್ಣಿಂದ ಹೊರಚೆಲ್ಲುತ್ತದೆ. ಇದು ದೈವದ ಒಂದು ಆಟ್ಟ. ಇದು ದೈವಾಂಶವಾಗುತ್ತದೆ. ಅಲ್ಲ, ದೈವವು ಅಂಶವಿಲ್ಲದ್ದಾಗಿದೆ. ಆದ್ದರಿಂದ ದೈವಾಂಶ ಎನ್ನಬಾರದು. ಮತ್ತೆ ಯಾವುದಾದರೂ ಪರಮಾಣುವಿನಿಂದ ಪರಿಣಮಿಸಿದ್ದೇ? ಆದರೆ, ಅದೂ ಅಲ್ಲ. ಏಕೆಂದರೆ ಪರಮಾಣುಗಳು ದೈವದ ವಿವರ್ತಗಳಾಗಿವೆ. ವಿವರ್ತವೆಂದರೆ ಇಲ್ಲಿ ಪ್ರತಿಬಿಂಬಗಳು. ಪ್ರತಿಬಿಂಬಕ್ಕೆ ಮತ್ತೊಂದಾಗಿ ಮಾರ್ಪಡಲು ಸಾದ್ಧ್ಯವಿಲ್ಲ. ಬೇರೆ ಯಾವುದಕ್ಕೂ ದೈವದಲ್ಲಿರಲು ದೈವದ ಮಹಿಮೆ ಎಡೆಕೊಡುವುದಿಲ್ಲ. ಆದ್ದರಿಂದ ಇದನ್ನು ಮತ್ತೊಂದರ ಅಂಶವೆನ್ನಲಾಗದು. ಆಗ ಈ ಕಂಡುಬರುತ್ತಿರುವುದೆಲ್ಲವು ಅನಿರ್ವಚನೀಯವಾಗುತ್ತದೆ. ಇವೆಲ್ಲವೂ ಅಂಜನದವನ ಮಸಿಯಲ್ಲಿ ಎದ್ದುಕಾಣುವ ದೇವತೆಯಂತಿವೆ. ಈಗ ಈ ಕಂಡುಬರುತ್ತಿರುವುದು ದೈವವೂ ನಾವೂ ಆಗಿರುವ ಇವೆಲ್ಲವೂ ದೈವದಲ್ಲಡಗಿದಾಗ ದೈವವೇ ಆಗಿರುತ್ತದೆ. ಇದು ದೈವದ ವ್ಯಾಪಕತೆಯನ್ನು ಕೆಡಿಸುವುದಿಲ್ಲ. ಪ್ರತಿಬಿಂಬವು ಯಾವುದರ ವ್ಯಾಪಕತೆಯನ್ನು ಭೇದಿಸಲಾಗದು. ಎಂದುಮಾತ್ರವಲ್ಲ, ಪ್ರತಿಬಿಂಬವನ್ನು ಯಾವ ವ್ಯಾಪಕತೆಯೂ ಕಳೆಯುವುದಿಲ್ಲ. ಓ! ಇಗೋ! ಇವೆಲ್ಲವೂ ಮನೋವೇಗವುಳ್ಳ ಘಟೀಯಂತ್ರ ಒಂದರಂತೆ ಆದ್ಯಂತವಿಲ್ಲದೆ ತಿರುಗುತ್ತದೆ. ವಿಸ್ಮಯ. ನಾವು ನಮ್ಮ ಕಣ್ಣನ್ನು ಕಾಣುತ್ತೇವೆ. ನಮ್ಮನ್ನು ದೈವ ಕಾಣುತ್ತದೆ. ನಾವು ನಮ್ಮ ಶ್ರುತಿಯನ್ನು ಕೇಳುತ್ತೇವೆ. ದೈವವೂ ನಮ್ಮನ್ನು ಶ್ರವಿಸುತ್ತದೆ. ನಾವು ತೊಗಲನ್ನು ಸ್ಪರ್ಶಿಸುತ್ತೇವೆ, ನಮ್ಮನ್ನು ದೈವ ಸ್ಪರ್ಶಿಸುತ್ತದೆ. ನಾವು ನಮ್ಮ ನಾಲಗೆಯನ್ನು ಆಸ್ವಾದಿಸುತ್ತೇಎವೆ. ನಮ್ಮನ್ನು ದೈವವು ಆಸ್ವಾದಿಸುತ್ತದೆ. ನಾವು ನಮ್ಮ ಮೂಗನ್ನು ಮೂಸುತ್ತೇವೆ. ನಮ್ಮನ್ನು ದೈವವೂ ಮೂಸುತ್ತದೆ. ನಾವು ವಾಕ್ಕನ್ನು ದೂಡಿಬಿಡುತ್ತೇವೆ. ನಮ್ಮನ್ನು ವಾಕ್ಕು ದೂಡಿಬಿಡದು, ದೈವ ದೂಡಿಬಿಡುತ್ತದೆ. ನಾವು ಕೈಯ್ಯನ್ನು ನೀಡುತ್ತೇವೆ. ನಮ್ಮನ್ನು ಕೈ ನೀಡದು, ದೈವವು ನೀಡುತ್ತದೆ. ನಾವು ಕಾಲನ್ನು ನಡೆಸುತ್ತೇವೆ. ನಮ್ಮನ್ನು ಕಾಲು ನಡೆಸದು. ದೈವ ನಡೆಸುತ್ತದೆ. ನಾವು ದೈವವನ್ನು ನಡೆಸುವುದಿಲ್ಲ. ನಾವು ಗುದವನ್ನು ವಿಸರ್ಜನೆ ಮಾಡಿಸುತ್ತೇವೆ, ನಮ್ಮನ್ನು ಗುದವು ವಿಸರ್ಜನೆ ಮಾಡಿಸುವುದಿಲ್ಲ, ದೈವವು ವಿಸರ್ಜನೆ ಮಾಡಿಸುತ್ತದೆ. ನಾವು ದೈವವನ್ನು ವಿಸರ್ಜನೆ ಮಾಡಿಸುವುದಿಲ್ಲ. ನಾವು ಉಪಸ್ಥವನ್ನು ಆನಂದಿಸುತ್ತೇವೆ. ನಮ್ಮನ್ನು ಉಪಸ್ಥವು ಆನಂದಿಸುವುದಿಲ್ಲ. ದೈವವು ಆನಂದಿಸುತ್ತದೆ. ನಾವು ದೈವವನ್ನು ಆನಂದಿಸುವುದಿಲ್ಲ. ಓ! ಇಗೋ! ದೈವದಲ್ಲಿ ಪುರುಷಲಕ್ಷಣ ಕಣುತ್ತದೆ. ದೈವವು ಕಣ್ಣಿಲ್ಲದೆ ಕಂಡು, ಕಿವಿಯಿಲ್ಲದೆ ಕೇಳಿ, ತೋಗಲಿಲ್ಲದೆ ಸ್ಪರ್ಶಿಸಿ, ಮೂಗಿಲ್ಲದೆ ಮೂಸಿ, ನಾಲಗೆಯಿಲ್ಲದೆ ರುಚಿಸುವ ಓರ್ವ ಚಿತ್ಪುರುಷನಾಗಿದ್ದಾನೆ. ನಾವು ದೈವದ ಪ್ರತಿಪುರುಷನಾಗಿದ್ದೇವೆ. ನಮ್ಮ ಶರೀರ ಜಡವಾಗಿದೆ. ಬಿಸಿಯಾದ ಉಕ್ಕಿನಗೋಳವು ತೇಜೋಮಯವಾಗಿರುವಂತೆ ನಾವು ಕಣ್ಣುಬಿಟ್ಟು ನೋಡಿದಾಗ ನಮ್ಮ ಶರೀರವು ತೇಜೋಮಯವಾಗಿದೆ. ಓ! ಇಗೋ! ಈಗ ಕಂಡುಬರುವುದೆಲ್ಲವೂ ಹೀಗೆಯೇ ತೇಜೋಮಯವಾಗಿದೆ. ಓ! ನಮ್ಮ ದೈವವು ಜ್ಯೋತಿರ್ಮಯವಾದೊಂದು ದಿವ್ಯಸಮುದ್ರ. ಇವೆಲ್ಲವೂ ಆ ನಿಸ್ತರಂಗ ಸಮುದ್ರದ ತರಂಗವಾಗಿವೆ. ಓ! ಇವೆಲ್ಲವೂ ಬಿಸಿಲುಗುದಿರೆಯಿಂದ ಉಕ್ಕಿಬರುವ ನೀರಾಗಿದೆ. ದೈವವು ಬಿಸಿಲುಗುದಿರೆಯಾಗಿದೆ. ಓ! ನಾವು ಈವರೆಗೆ ಬಹಿರ್ಮುಖನಾಗಿದ್ದೆವು. ಇನ್ನು ಅಂತರ್ಮುಖ ಒಂದಿದವನಾಗುತ್ತೇವೆ. ಆ! ಈ ಸ್ಥಲವು ಅದೆಷ್ಟು ದಿವ್ಯವಾಗಿದೆ. ನಾವು ಈ ವರೆಗೆ ನಿಂತಿದ್ದದ್ದು ದಿವ್ಯವಾದೊಂದು ಕನ್ನಡಿಯಲ್ಲಿ. ಇದೇ ನಮ್ಮ ದೈವ. ಇದನ್ನು ನಾವು ಈಹಿಂದೆ ಕಂಡಿದ್ದಿಲ್ಲ. ಈಗ ನಮಗೆ ಇಲ್ಲಿ ಯಾವ ಮರೆಯೂ ಕಾಣುತ್ತಿಲ್ಲ. ನಾವೂ ದೈವವೂ ಒಂದಾಗಿದ್ದೇವೆ. ಇನ್ನು ನಮಗೆ ವ್ಯವಹರಿಸಲಾಗದು. ಓ! ಇಗೋ! ನಾವು ದೈವದಲ್ಲಿ ಒಂದಾಗಿಹೋಗುತ್ತೇವೆ!
--------------
ನಾರಾಯಣ ಗುರು
ಓಂ ಎಂದು ನೀ ಸ್ಮರಿಸು ಆತ್ಮನೇ ಕೃತವೆಲ್ಲವ ಸ್ಮರಿಸು ನೀ ಅಗ್ನೇ ಗತಿಗಾಗಿ ಬಿಡು ಸನ್ಮಾರ್ಗದೊಳು ನಮ್ಮನು
--------------
ನಾರಾಯಣ ಗುರು
ಓಂ ಎಂಬ ಪ್ರಣವಪ್ರಣಷ್ಟಕಲಿ ಪ್ರದೋಷವ ಮನದಿಂದ ಇನಿಮೆಯ ಹೊಸಮೈ ಕಂಡು ಕೈಮುಗಿಯಲು ಆಸೆಯಿಂದ ಬುಧರು ಪೂಜಿಸುವ ಹೂಗಂಧ ಹರಡಿದ ಕಾಲುದಾವರೆಯಲಿ ನಮಿಸುವೆನು ನಾಶವಿಹೀನನೇ ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಓಂ ಓಂ ಓಂ ಹೋಮಧೂಮಪ್ರಕಟತಟಜಟಾ- ಕೋಟಿಭೋಗಿಪ್ರಪೂರಂ ಅಂ ಅಂ ಅಂ ಆದಿತೇಯ ಪ್ರಣತಪದಯುಗಾಂ- ಭೋರುಹ ಶ್ರೀವಿಲಾಸಂ ಉಂ ಉಂ ಉಂ ಉಗ್ರನೇತ್ರತ್ರಯ ಲಸಿತ ವಪುರ್- ಜ್ಯೋತಿರಾನಂದರೂಪಂ ಶ್ರೀಂ ಶ್ರೀಂ ಶ್ರೀಂ ಶಿಘ್ರಚಿತ್ತಭ್ರಮಹರಮನಿಶಂ ಭಾವಯೇ ಬಾಹುಲೇಯಂ.
--------------
ನಾರಾಯಣ ಗುರು
ಓಂಕಾರದಿಂದ ಎಚ್ಚೆಬ್ಬಿಸುತ್ತ ಹೆಬ್ಬಯಲನಡುವೆ ಒಳಗೆದ್ದ ಝಂಕಾರಕೇಳಿ ನೀನೆದ್ದೇಳು ಮತಿದಾವರೆಯ ಜೇನ ಬೇಗಸವಿಯಲೆಂದು. ಪಾಲು ಕೇಳುವರಿಲ್ಲ ದುಂಬಿ ಹಗಲಿರುಳು  ಜೇನು ಹೀರುತ್ತಿರುವ ಝಂಕಾರವೂ ಇಲ್ಲಿಲ್ಲ. ಇನಿಮೆಯಿಂದಲಿದರನು ಸವಿಯೋಕೆ ಬಾರೋ ನೀನು.
--------------
ನಾರಾಯಣ ಗುರು
ಓಡಿಬರುವೊಂದು ಗುಂಪು ಭೀತಿಗಳು ಬೆಳಕಕಂಡು ಸಾಗುವುದುಕೂಡಲೆ ಮೂಡುವ ಇರುಳೊಂದು ಬರಲಾಗಿ ಮತ್ತೆ ಹೊಳೆಯುತ್ತ ಬರುವುದು ಜೇನನೀರು.
--------------
ನಾರಾಯಣ ಗುರು