ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಲೋಚನಾದಿ ಇಂದ್ರಿಯದಲ್ಲೊಂದು  ಆಲೋಚನೆಯಿಲ್ಲದಿಲ್ಲಿ ಅಪಥದಿ ಬಂದೊಡೆ ಆಹೊತ್ತೊಡನೆ ಸನ್ಮತಿ ತೋರಿಸುವುದೆನಗೆನ್ನ ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಈವರೆಗೆ ನಾವೊಂದುವಸ್ತುವನರಿಯಲಿಲ್ಲವಿಲ್ಲಿ  ಅತಿಸುಖವೆಂದನಿಶ ಕಥಿಸುವುದರಿಂದ ಮತಿ ಮೊದಲಾದವು ನೀಗಿದೊಡೂ ಆತ್ಮನು ತಾನೇ ಅಳಿಯದೆ ಅರಿವೆಂದು ಹೇಳಬೇಕು.
--------------
ನಾರಾಯಣ ಗುರು
ಈಶ ನಿನ್ನ ಹವಳದಂತ ತುಟಿಗಳು ಬೆಳಗುವ ಕೇಶಪೇಶಲ ದಂತ ಗದ್ದವು ಕರಿಯ ಕಂಠವು  ಭಾಸುರಾಕೃತಿ ಕೈಗಳಲಿ ತಿರುವಾಯುಧಗಳೊಂದಿಗೆನ್ನ ಕ್ಲೇಶಕಳೆಯಲು ಬೇಗ ಬಾರೆಲೊ ನೀನು ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಈಶನ ಪದ ಸೇರದಿರೆ ಪಾರಾಗರು, ಸೇರಿದೊಡೆ ಪಾರಾಗುವರು ಜನನದ ಹೆಗ್ಗಡಲಿಂದವರು
--------------
ನಾರಾಯಣ ಗುರು
ಈಶನ ಬಲುದೊಡ್ಡ ಕೀರ್ತಿ ಹೊಗಳುವವರಲ್ಲಿ ಎಂದಿಗೂ ಇರುಳಿಂದ ಬರುವ ಇಬ್ಬಗೆ ಬೇನೆಯೂ ಬಂದು ಸೇರದು.
--------------
ನಾರಾಯಣ ಗುರು
ಈಶನು ಜಗದಲ್ಲೆಲ್ಲಾ  ವಾಸಿಸುವುದರಿಂದ ನೀನು  ಚರಿಸು ಮುಕ್ತನಾಗಿ ಬಯಸಬೇಡ ಯಾರ ಧನವನ್ನೂ 
--------------
ನಾರಾಯಣ ಗುರು
ಈಶಬೀಜವದರಿಂದ ಹೊಮ್ಮಿದ ನಿನ್ನ ಸಿರಿಮೈಯಿಲ್ಲಿ  ಒಡನೆ ಆ ಕಿಚ್ಚು ಸಿಡಿಲೊಂದಿಗೆ ಹೋಲಿಸುವ ಎನ್ನ ಬಳಿ ನಾಶಹೀನನಗಸ್ತ್ಯಮುನೀಂದ್ರ ಸನ್ನಿಧಿಯಿಂದ ಕೃಪೆಯಿಂದ ಗುರುನಾಥನಾದವೊಲು ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಉಂಟಾಗಿಮರೆವ ಅರಿವುಂಟಾಗಿ ಮುನ್ನವಿದು ಕಂಡಾಡುವಂಗವೊಳಗೂ ಕೊಂಡು ಸಾವಿರಪರಿ ಆಶಯವದಿರುಳಾಗಿ ಸುಳಿದು ಮಹದಿ ಮರೆಯಾಗಿ ಕಂಡರೂ ಇರಲಹುದು ಅರಿವು ಈ ನೆಲೆಯಲ್ಲಿ ಅಖಂಡಾನುಭೂತಿಯಲ್ಲೇಳುವ ತಾವರೆಯಲ್ಲಿ ಬಿದ್ದು ಮಧುವುಂಡು ರಮಿಸುವ ದುಂಬಿಯೇ ಸೂರಿ ಸುಕೃತೀ.
--------------
ನಾರಾಯಣ ಗುರು
ಉಣಿಸಿ ತಿನಿಸಿ ಬೆಳೆಸಿದೆ ದೇವತಟಿನೀ  ನಾಥನಿಗೂ ಈಗ ಉಸಿರ ಕೂಟದೊಂದಿಗೆ ಯಾವ ಹಂಗೂ ಇಲ್ಲ ಏನು ಕಥೆ  ಅಯ್ಯೋ! ತೊಂದರೆಗೊಳಗಾಯಿತು  ನಾಡಲಿ ಕಂಡದೆಲ್ಲವೂ ಅಯ್ಯೋ! ನಶಿಸುವುದೂ  ಕಂಡು ನೀನು  ಆಸನದಲ್ಲೇ ಕುಳಿತಿರುವೆ ಸರಿಯೇ  ಹೇಳರ್ಧನಾರೀಶ್ವರಾ 
--------------
ನಾರಾಯಣ ಗುರು
ಉಣ್ಣುವವರಿಗಿಲ್ಲಿ ಉಣ್ಣಲು ಅಡಿಗೆಮಾಡಿದವರಿಗಿದು ಉಣ್ಣುವಾಗ ಅದರಲ್ಲಿ ಸೇರಿ ಊಟವಾಗುವುದೂ ಮಳೆಯಪ್ಪುದು
--------------
ನಾರಾಯಣ ಗುರು
ಉಪದ್ರವಿಸುವುದು ಕಟ್ಟುವುದು  ಕೊಲ್ಲುವುದು ಇವೊಂದೂ  ಗೈಯ್ಯದ ಜಂತುಪ್ರಿಯನಿಗೆ  ಸೇರುವುದು ಪರಮವು 
--------------
ನಾರಾಯಣ ಗುರು
ಉಪಮಿಸಲು ಏನೂ ಇಲ್ಲದವನ ಚರಣಗಳಲ್ಲಿ ಸೇರಿದವರಿಗಲ್ಲದೆ ಸಲ್ಲದೂ ಮನದ ದುಃಖ ನೀಗಿಸಲು
--------------
ನಾರಾಯಣ ಗುರು
ಉಮೆಯೊಡನ ಸನಿಹ ಬಂದು ಬೇಗನೆ ಮಮ ಮತಿಮೋಹವರಿದು ಮೈಕೊಟ್ಟು ಯಮನ ಕೈಯೊಳೊಳಪಡದೆಯೆಂದಿಗೂ ಸಮನೆಲೆ ಕೊಟ್ಟು ದಣಿವ ನೀಗಬೇಕು.
--------------
ನಾರಾಯಣ ಗುರು
ಉರಗಲಸತ್ಕೃತಮಾಲೆಮಾಲೆ ತೊಟ್ಟು ಪರಿಲಸಿತೋರಸಿ ಭೂರಿ ಭೂತಿ ಪೂಸಿ ಪರಿಮಳವುಂಟು ಮೊಳಗುವ ಸಾಲು- ದುಂಬಿಗಳೊಡನೆ ತಿರುಮೈಯಕಾಣುವುದೆಂದು.
--------------
ನಾರಾಯಣ ಗುರು
ಉರಸ್ತಾರಹಾರಂ ಶರಚ್ಚಂದ್ರಹೀರಂ ಸುರಶ್ರೀವಿಚಾರಂ ಹೃತಾರ್ತಾರಿಭಾರಂ ಕಟೇ ದಾನಪೂರಂ ಜಟಾಭೋಗಿಪೂರಂ ಕಲಾಬಿಂದುತಾರಂ ಭಜೇ ಶೈವವೀರಂ. 
--------------
ನಾರಾಯಣ ಗುರು